Video; ಮಕ್ಕಳು ಸೂಪರ್ ಹಿಟ್ ಮೂವಿ ‘ಕಾಂತಾರ’ ವೀಕ್ಷಿಸುವಾಗ ನಡೆದ ವಿಡಿಯೋ ದೃಶ್ಯ ಒಮ್ಮೆ ನೋಡಿ…ಏನಾಗಿದೆ.

ಚಲನಚಿತ್ರ ತಂಡದವರು ತಯಾರಿಸುವ ಮೂವಿ ರಸಿಕರ ಮೇಲೆ ತನ್ನ ಎಷ್ಟೊಂದು ಪ್ರಭಾವವನ್ನು ಬೀಳಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಚಿತ್ರಗಳು ಇಲ್ಲಿ ಫೇಲೂ ಆಗಬಹುದು, ಇನ್ನು ಕೆಲವು ಚಿತ್ರಗಳು ರಸಿಕನನ್ನು ಹಿಡಿದಿಟ್ಟು ಮಂತ್ರಮುಗ್ಧನನ್ನಾಗಿಸಬಹುದು.

ಸದ್ಯ ಇಂಥ ಚಿತ್ರದ ಬಗ್ಗೆ ವಿಚಾರ ಮಾಡಿದಾಗ ಕನ್ನಡದ ಕಾಂತಾರ ಚಿತ್ರ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಚಿತ್ರದಲ್ಲಿಯ ಅನೇಕ ಸೀನ್ ಗಳು ರಸಿಕನಿಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಮೊದಲು ಕನ್ನಡದಲ್ಲಿ ತೆರೆ ಕಂಡು ಯಶಸ್ಸುಗಳಿಸಿದ ನಂತರ ಇದಕ್ಕೆ ಭಾರತೀಯ ವಿವಿಧ ಭಾಷೆಗಳಲ್ಲಿ ಡಬ್ ಮಾಡಲಾಯಿತು. ಚಿತ್ರವು ಅಲ್ಲಿಯೂ ಸಹ ಚಿತ್ರಮಂದಿರಗಳಲ್ಲಿ ನಾಗಾಲೋಟದಿಂದ ಓಡಿ 400 ಕೋಟಿ ರೂಪಾಯಿಗಳ ಎಲ್ಲೆ ಮೀರಿ ಲಾಭಗಳಿಸಿತು.

ಸದ್ಯ ಇದೇ ಚಿತ್ರವನ್ನು ಮಕ್ಕಳು ಮನೆಯ ಟಿವಿಯಲ್ಲಿ ನೋಡುತ್ತಿವಾಗ ಒಂದು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಕ್ಕಳು ಈ ಚಿತ್ರವನ್ನು ನೋಡುವಾಗ ತುಂಬಾ ತಲ್ಲಿನರಾಗಿದ್ದಾರೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿಯವರು ರಾತ್ರಿ ಹೊತ್ತಿನಲ್ಲಿ ಕಾಡಿನಲ್ಲಿ ಬ್ಯಾಟರಿ ಹೊಡೆದು ಏನಿದೆ ಎಂದು ಶೋಧಿಸುತ್ತಿರುವಾಗ ಬಂದ ದೈವದ ಶಬ್ದ ಕೇಳಿ ಮಕ್ಕಳು ಹಠಾತ್ತನೆ ಬೆಚ್ಚಿ ಬೀಳುತ್ತಾರೆ. ಈ ಸೀನ್ ನೋಡಲು ತುಂಬಾ ವಿಶೇಷವಾಗಿದೆ.

ನೋಡಿ ಈ ದೃಶ್ಯ ವಿಡಿಯೋದಲ್ಲಿ…

 

View this post on Instagram

 

A post shared by sk noorjahan786 (@mastanvali454)

ಮಕ್ಕಳ ಪ್ರತಿಕ್ರಿಯೆಯ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಮಸ್ತಾನ್ ವಾಲಿ 454 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 8.3 ಮಿಲಿಯನ್ ವೀಕ್ಷಣೆ ಪಡೆದಿದೆ.