Video; ಬದುಕುವ ಛಲದಿಂದ ಎರಡೂ ಬೇಟೆ ನಾಯಿಗಳನ್ನು ಅಡ್ಡಾದಿಡ್ಡಿಯಾಗಿ ಹೊಲವನ್ನೆಲ್ಲ ಒಡಾಡಿಸಿದ ಕೆಚ್ಚೆದೆಯ ಮೊಲ.

ಮೊಲದ ಬದುಕು ತುಂಬಾ ನೋವಿನಿಂದ ಕೂಡಿದೆ ಎನ್ನಬಹುದು. ಕಾರಣ ಈ ಪ್ರಾಣಿ ಹೆಜ್ಜೆಹೆಜ್ಜೆಗೂ ಹೆದರಿಯೇ ಬದುಕುತ್ತದೆ ಎಂದರೆ ತಪ್ಪಲ್ಲ. ಪ್ರತಿಯೊಂದು ಕಾಡು ಪ್ರಾಣಿ ಇದರ ಬೇಟೆಯಾಡಲು ತವಕದಿಂದ ಕಾಯ್ದು ಕುಳಿತಿರುತ್ತದೆ. ಇದಕ್ಕೆ ಓಡಲೊಂದು ಬಿಟ್ಟು ತನಗೆ ಬದುಕಿಸಬಲ್ಲ ಬೇರೆ ಯಾವ ಶಕ್ತಿಯೂ ಇದರ ಹತ್ತಿರ ಇಲ್ಲ. ಹೀಗಾಗಿ ಇದರ ಜೀವನವೇ ತುಂಬಾ ಸಂಘರ್ಷದಿಂದ ಕೂಡಿರುತ್ತದೆ.

ಸದ್ಯ ಈ ಬಡಪಾಯಿ ಮೊಲದ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಜೋರಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿಯ ಮೊಲದ ಜೀವನ ನೋಡಿ ಮನ ನೋಯುತ್ತದೆ. ಕಾರಣ ಅಂಥ ದೃಶ್ಯ ನೀವಿಲ್ಲಿ ನೋಡಬಹುದು.

ಇದನ್ನು ನೋಡಿ.Viral Video; ಹುಡುಗರಿಗೆ ಶೆಡ್ಡು ಹೊಡೆದು ಕಿಕ್ಕಿರಿದು ತುಂಬಿದ ಚಲಿಸುವ ಬಸ್ಸು ಏರಿ ಕಿಟಕಿಯಿಂದ ಒಳಗೆ ನುಗ್ಗಿದ ಗಟ್ಟಿಗಿತ್ತಿ ಕಾಲೇಜು ಕನ್ಯೆ..!

ಹೆಚ್ಚಾಗಿ ಎಲ್ಲರಿಗೂ ಮೊಲ ಎಂದರೆ ಪ್ರೀತಿ, ಮುದ್ದು, ಕರುಣೆ ಹುಟ್ಟುತ್ತದೆ. ಅಷ್ಟೊಂದು ಮುದ್ದಾಗಿರುತ್ತದೆ ಈ ಜೀವ. ಅದನ್ನು ನೋಡಿದ ತಕ್ಷಣವೇ ಅದರ ಜೊತೆಗೆ ಮುದ್ದಾಡಬೇಕು ಎಂದೆನಿಸುತ್ತದೆ. ಇಂಥ ಮುದ್ದಾದ ಮೊಲಕ್ಕೆ ತೋಟದಲ್ಲಿ ಎರಡು ನಾಯಿಗಳು ಬೆನ್ನಟ್ಟಿವೆ. ಇಲ್ಲಿ ಮೊಲ ತನ್ನ ಜೀವ ಉಳಿಸಿಕೊಳ್ಳಲು ಒಂದೇ ಸವನೆ ಸಂಘರ್ಷ ಮಾಡುತ್ತಿದೆ. ಎರಡೂ ನಾಯಿಗಳಿಗೆ ಶೆಡ್ಡು ಹೊಡೆದು ಮೊಲ ತೋಟದಲ್ಲಿ ಓಡಾಡುವುದನ್ನು ನೋಡಿದಾಗ ಪಾಪ ಮೊಲ ತನ್ನ ಜೀವಕ್ಕಾಗಿ ಎಷ್ಟೊಂದು ಸಂಘರ್ಷ ಮಾಡುತ್ತಿದೆ ಎಂಬುದು ತಿಳಿದು ಬರುತ್ತದೆ.

ನೋಡಿ ಮೊಲದ ಈ ಅದ್ಭುತ ಹೋರಾಟ…

 

View this post on Instagram

 

A post shared by Namarta (@namartay_adav9991)

ಪ್ರಸ್ತುತ ವಿಡಿಯೋ ಇಂಟರ್ನೆಟ್ ಪ್ಲಾಟ್ಫಾರ್ಮ್ ನಲ್ಲಿ namarty_adav9991 ಹೆಸರಿನ ಖಾತೆಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಲ್ಲದೆ ಅಷ್ಟೆ ಜನರು ಲೈಕ್ ಸಹ ಮಾಡಿದ್ದಾರೆ.