Video; ಹುಷಾರು..! ನಿಮ್ಮ ಆಫೀಸ್ ಎಷ್ಟು ಸೇಫ್? ಯುವತಿ ಡ್ಯೂಟಿ ಮಾಡುವಾಗ ಟೆರೆಸ್ ನಿಂದ ಮೇಜಿನ ಮೇಲೆ ಬಂದ ಸ್ಪೈಡರ್ ಮ್ಯಾನ್!

ಸಿಸಿಟಿವಿ ಕ್ಯಾಮೆರಾಗಳು ಬಂದಾಗಿನಿಂದ ಅನೇಕ ವಿಶೇಷ ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುವುದು ಕಾಣುತ್ತೆ. ಸಿಸಿಟಿವಿ ಒಂದು ವೇಳೆ ಇರದಿದ್ದರೆ ಇಂಥ ವಿಚಿತ್ರ ದೃಶ್ಯಗಳು ಸೆರೆ ಹಿಡಿಯುವುದು ಆಗುತ್ತಿರಲಿಲ್ಲ.

ಸಿಸಿಟಿವಿ ಮುಖಾಂತರ ಎಲ್ಲೆಲ್ಲಿಯ ಅದ್ಭುತ ಮತ್ತು ರೋಚಕ ದೃಶ್ಯಗಳನ್ನು ಮನೆಯಲ್ಲೇ ಕುಳಿತು ನೋಡುತ್ತೇವೆ. ಇವುಗಳಲ್ಲಿ ಕೆಲವು ವಿಶೇಷ ವಿಡಿಯೋಗಳು ಸಹ ಇಂಟರ್ನೆಟ್ ನಲ್ಲಿ ವೈರಲ್ ಆಗುವುದು ಖಚಿತ. ಇಂಥ ದೃಶ್ಯಗಳನ್ನು ನೋಡಿದಾಗ ಕೆಲವೊಮ್ಮೆ ನಂಬಲು ಸಹ ಆಗುವುದಿಲ್ಲ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಸಹ ಇದೇ ರೀತಿಯದ್ದಾಗಿದೆ. ಈ ದೃಶ್ಯವೂ ಒಂದು ಆಫೀಸಿನಲ್ಲಿಯದಿದೆ ಎಂದು ತಿಳಿದು ಬರುತ್ತದೆ. ದೃಶ್ಯದ ಮೊದಲಿಗೆ ಒಬ್ಬಳು ಯುವತಿ ಹಾಗೂ ಒಬ್ಬ ಯುವಕ ಜೊತೆಯಲ್ಲಿ ಕುಳಿತು ಆಫೀಸ್ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ಹಠಾತ್ ಒಂದು ದೃಶ್ಯ ಅಲ್ಲಿ ನೋಡಲು ಸಿಗುತ್ತದೆ. ಅದೇನೆಂದರೆ ಇಬ್ಬರ ತಲೆಯ ಮೇಲಿನ ಟೆರೇಸ್ ನಿಂದ ಮೊದಲು ಮಣ್ಣು ಬಿದ್ದು ಅದರ ಜೊತೆಗೆ ಯುವಕನೊಬ್ಬ ನೇರ ಟೇಬಲ್ ಮೇಲೆ ಸ್ಪೈಡರ್ ಮ್ಯಾನ್ ತರ ಬಂದು ನಿಲ್ಲುತ್ತಾನೆ. ಇಬ್ಬರು ಎಂಪ್ಲಾಯಿಗಳಿಗೆ ಇಲ್ಲಿ ಏನಾಗುತ್ತದೆ ಎಂಬ ಅರಿವೇ ಆಗುವುದಿಲ್ಲ. ಅಷ್ಟೊಂದು ಇಬ್ಬರೂ ಗಾಬರಿಯಾಗಿರುತ್ತಾರೆ.

ನೋಡಿ ಈ ವಿಡಿಯೋ..

 

View this post on Instagram

 

A post shared by LOWONGAN KERJA (@buruan_kerja)

ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 7 ಮಿಲಿಯನ್ ಗಿಂತಲೂ ಹೆಚ್ಚಿನ ಜನರನ್ನು ಸೆಳೆದಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 84 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.