ಕಣ್ಣಿದ್ದು ಕುರುಡ; ಯುವಕನ ಗಡಿಬಿಡಿ ಬಿತ್ತು ಭಾರಿ ದುಬಾರಿ; ಅಷ್ಟಕ್ಕೂ ಇಲ್ಲಿ ನಡೆದದ್ದೇನು? ನೋಡಿ ಈ ವೈರಲ್ Video ದಲ್ಲಿ!

ಮನುಷ್ಯ ಯಾವಾಗಲೂ ಗಡಿಬಿಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಹಳಷ್ಟು ಸಲ ತುಂಬಾ ದುಬಾರಿಯಾಗಿ ಪರಿಣಮಿಸುತ್ತವೆ. ಅದಕ್ಕಾಗಿಯೇ ‘ಅವಸರವೆ ಅಪಘಾತಕ್ಕೆ ಕಾರಣ’ ಎಂದು ಹೇಳಲಾಗುತ್ತದೆ. ಇದರ ಒಂದು ಸಖತ್ ಉದಾಹರಣೆ ನೀಡುವ ರಿಸೇಂಟ್ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ.

ಈ ವಿಡಿಯೋದಲ್ಲಿ ಕೆಲವರು ಮಿತ್ರರು ಕೂಡಿ ಕುಳಿತಿರುತ್ತಾರೆ. ಅವರಲ್ಲಿ ಒಬ್ಬನು ಅಕಸ್ಮಾತ್ ಎದ್ದು ಡೋರ್ ನಿಂದ ಹೊರಗೆ ಹೋಗಲು ಓಡುತ್ತಾನೆ. ಅದೇ ಸಂದರ್ಭದಲ್ಲಿ ಅಲ್ಲೊಂದು ದೊಡ್ಡ ಅನಾಹುತ ನಡೆದು ಹೋಗುತ್ತದೆ. ಪ್ರಸ್ತುತ ಈ ದೃಶ್ಯ ನೋಡಿದಾಗ ಒಮ್ಮೆಲೆ ಮೈ ಜುಮ್ ಎನ್ನುತ್ತದೆ.

ವಿಡಿಯೋದ ದೃಶ್ಯದಲ್ಲಿ ಯುವಕ ಸಹಜವಾಗಿ ಗೇಟ್ ಕಡೆಗೆ ಓಡುತ್ತಾ ಹೋಗುತ್ತಾನೆ. ಅಲ್ಲಿಯ ಡೋರ್ ಸಂಪೂರ್ಣವಾಗಿ ಗಾಜಿನ ಡೋರ್ ಇದ್ದದ್ದು ತಕ್ಷಣ ಆತನ ಗಮನಕ್ಕೆ ಬಂದೇ ಇಲ್ಲ. ಹೀಗಾಗಿ ಆತ ನೇರ ಗಾಜಿನ ಡೋರ್ ಗೆ ಢಿಕ್ಕಿ ಹೊಡೆದು ಹಠಾತ್ ಕೆಳಗೆ ಬೀಳುತ್ತಾನೆ. ಈ ದೃಶ್ಯ ಮೊದಲ ಬಾರಿಗೆ ನೋಡಲು ಸ್ವಲ್ಪ ಭಯವೂ ಹುಟ್ಟುತ್ತದೆ. ಪೆಟ್ಟು ಬಿದ್ದ ನಂತರ ಯುವಕ ನೋವಿನಿಂದ ಅಲ್ಲಿಯೇ ಕೆಳಗೆ ಬೀಳುತ್ತಾನೆ. ಮಿತ್ರರೇ ನಿಮ್ಮ ಮನೆಯಲ್ಲೂ ಅಥವಾ ಆಫೀಸ್ ನಲ್ಲಿ ಈ ರೀತಿಯ ಗಾಜು ಇದ್ದರೆ ಸ್ವಲ್ಪ ಹುಷಾರು, ಮತ್ತು ಅಂಥ ಸ್ಥಳಗಳಲ್ಲಿ ಗಾಜಿದ್ದದ್ದು ನಿಮಗೆ ಗೊತ್ತಿರುತ್ತದೆ, ಆದರೆ ಬೇರೆಯವರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿ ಆ ಗಾಜಿನ ಮೇಲೆ ಯಾವುದಾದರೂ ಏನಾದರೂ ಸ್ಟಿಕರ್ ಒಂದನ್ನು ಅಂಟಿಸುವದನ್ನು ಮರೆಯದೆ ನೆನಪಿನಲ್ಲಿಡಿ.

ನೋಡಿ ಈ ವಿಡಿಯೋದಲ್ಲಿ ಯುವಕನ ಸ್ಥಿತಿ…

 

View this post on Instagram

 

A post shared by Sonu Godara (@i_amsonugodara07)

ಈ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ i_amsonugodara07 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 13 .9 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 9 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿ ಕಾಮೆಂಟ್ ನಲ್ಲಿ ವಿಧ ವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ..