ಬಾಯ್ ಫ್ರೆಂಡ್ ಆಫ್ ದಿ ಇಯರ್ ಅವಾರ್ಡ್ ಗೋಸ್ ಟು ದಿಸ್ ಬಾಯ್! ಮಹನೀಯ ಅಂಥ ಯಾವ ಕೆಲಸ ಮಾಡಿದ್ದಾನೆ ಸ್ವಲ್ಪ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ತಮಾಷೆಯ ವಿಡಿಯೋಗಳು ನೆಟ್ಟಿಗರಿಗೆ ಕೆಲವೊಮ್ಮೆ ನಕ್ಕು ನಕ್ಕು ಸಾಕಾಗಿಸುತ್ತವೆ. ಇಂಥ ವಿಡಿಯೋಗಳು ಅನೇಕ ಸಲ ನೈಸರ್ಗಿಕವಾಗಿಯೇ ಸಿಸಿಟಿವಿಯಲ್ಲಿ ಶೂಟ್ ಆಗಿರುತ್ತವೆ, ಇನ್ನು ಕೆಲವು ವಿಡಿಯೋಗಳು ಆಕ್ಟ್ ಮಾಡಿ ಶೂಟ್ ಮಾಡಿಕೊಂಡಿರುತ್ತಾರೆ.

ಇಂಥ ವಿಡಿಯೋಗಳನ್ನು ನೋಡಲು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ವಿಡಿಯೋ ಮಾಡುವವರ ಐಡಿಯಾಗಳ ಬಗ್ಗೆ ವಿಚಾರ ಮಾಡಿದಾಗ ನಿಜಕ್ಕೂ ಇವರ ಮೈಂಡ್ ಎಷ್ಟೊಂದು ವಿಭಿನ್ನವಾಗಿ ಓಡುತ್ತದೆ ಎಂಬ ವಿಚಾರ ತಲೆಯಲ್ಲಿ ಬರದೇ ಇರದು.

ಸದ್ಯ ಈ ವಿಡಿಯೋದಲ್ಲಿ ಒಂದು ವಿಶೇಷ ದೃಶ್ಯ ನೋಡಲಿದ್ದೀರಿ. ಬಾಯ್ ಫ್ರೆಂಡ್ ಒಬ್ಬ ತನ್ನ ಗರ್ಲ್ ಫ್ರೆಂಡ್ ಗೆ ಟು ವೀಲರ್ ಮೇಲೆ ಹಿಂದೆ ಕುಳ್ಳಿರಿಸಿಕೊಂಡು ಬರುತ್ತಿದ್ದಾನೆ. ಸರಿಯಾಗಿ ಅದೇ ಸಮಯಕ್ಕೆ ಪೊಲೀಸರು ಎದುರಿಗೆ ಬಂದು ಬೈಕ್ ಸವಾರನನ್ನು ನಿಲ್ಲಿಸಿದ್ದಾರೆ. ಆಗ ಮೊದಲು ಗೆಳತಿ ಕೆಳಗೆ ಇಳಿಯುತ್ತಾಳೆ. ತದನಂತರ ಪೊಲೀಸರು ಬೈಕ್ ಸವಾರನಿಗೆ ಕೈ ಸನ್ನೆ ಮಾಡಿ ಬೈಕನ್ನು ಮುಂದೆ ರಸ್ತೆಯ ಬದಿಗೆ ಪಾರ್ಕ್ ಮಾಡಲು ಹೇಳುತ್ತಾರೆ. ಆದರೆ ಈ ಭೂಪ ಮಾತ್ರ ಬೈಕನ್ನು ಪಾರ್ಕ್ ಮಾಡದೆ ನೇರ ಅಲ್ಲಿಂದ ಕಾಲ್ಕಿತ್ತಿದ್ದಾನೆ. (ವಿಶೇಷವೆಂದರೆ ತನ್ನ ಗರ್ಲ್ ಫ್ರೆಂಡ್ ಅನ್ನು ಅಲ್ಲಿಯೇ ಬಿಟ್ಟು) ಅಷ್ಟರಲ್ಲಿ ಆತನ ಜೊತೆಯಲ್ಲಿದ್ದ ಗೆಳತಿ ತನ್ನ ಗೆಳೆಯ ಪಲಾಯನ ಮಾಡಿದ್ದನ್ನು ನೋಡಿ ಬಾಯಿಗೆ ಕೈ ಹಚ್ಚಿ ಗಾಬರಿಯಾಗುತ್ತಾಳೆ. ಈ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆ. ಅದಕ್ಕಾಗಿಯೇ ಈ ಹುಡುಗನಿಗೆ ‘ಬಾಯ್ ಫ್ರೆಂಡ್ ಆಫ್ ದ ಇಯರ್’ ಎಂದು ವರ್ಣಿಸಲಾಗಿದೆ.

ನೋಡಿ ತಮಾಷೆಯ ವಿಡಿಯೋ…

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ರೈಡಿಂಗ್ ವೈವ್ಸ್ ಹೆಸರಿನ ಖಾತೆಯಿಂದ ಶೇರ್ ಮಾಡಿದ ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದ್ದು ಲಕ್ಷಾವಧಿ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.