Video: ನೀರಡಿಸಿ ಪ್ಲಾಸ್ಟಿಕ್ ಬಾಟಲ್’ನ್ನೇ ನುಂಗಿದ ಕೋಬ್ರಾ! ನೋವು ತಾಳಲಾಗದೆ ದಾರಿ ಮಧ್ಯೆ ಹೊರಹಾಕುವ ದೃಶ್ಯ ನೋಡಿ ಜನರಂತಿದ್ದಾರೆ OMG!

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅತ್ಯಂತ ವಿಷಕಾರಿ ಕೋಬರಾ(cobra) ವಾಂತಿ ಮಾಡಿಕೊಳ್ಳುವದನ್ನು ತೋರಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹೆಚ್ಚು ಜನರು ನೋಡುತ್ತಿದ್ದಾರೆ. ಈ ವಿಡಿಯೋದ ಕುರಿತು ತನಿಖೆ ಮಾಡಿದಾಗ ನಿಜವಾಗಿಯೂ ಕೋಬರಾ ವಾಂತಿ ಮಾಡಿಕೊಂಡಿದೆ ಎಂದು ತಿಳಿದಿದೆ. ಹಾವು ಒಂದು ವಸ್ತು ನುಂಗಿತ್ತು, ತದನಂತರ ಹಾವಿಗೆ ತುಂಬಾ ತೊಂದರೆಯಾಗಲು ಪ್ರಾರಂಭ ವಾಯಿತು. ಈ ಸುದ್ದಿಯನ್ನು ಅಲ್ಲಿಯ ಸ್ಥಾನಿಕ ಜನರು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿ ಬಂದು ಹಾವು ಸೇವಿಸಿದ ವಸ್ತು ಹೊರಗಡೆ ತಗೆಯುವ ಸಲುವಾಗಿ ಅದಕ್ಕೆ ವಾಂತಿ ಮಾಡಲು ಪ್ರೇರೇಪಿಸಿದರು, ಹಾವು ವಾಂತಿ ಮಾಡಿಕೊಂಡು ಹೊಟ್ಟೆಯೊಳಗಿನ ವಸ್ತುವನ್ನು ಹೊರಗಡೆ ತೆಗೆಯಿತು.

ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿರುವ ಪ್ರಕಾರ, ಅದರ ಚಲವಲನೆಯ ಮೇಲಿಂದ ಹಾವು ಯಾವುದೋ ಒಂದು ಸಮಸ್ಯೆಯಲ್ಲಿ ಸಿಲುಕಿ ಕೊಂಡಿರಬಹುದೆಂದು ತಿಳಿದು ಆ ಸಮಸ್ಯೆ ಹೊಟ್ಟೆಯಲ್ಲಿರುವ ವಸ್ತುವೇ ಆಗಿರಬೇಕು ಎಂದೆನಿಸಿ, ಅದನ್ನು ಹೊರಗಡೆ ತೆಗೆಯುವ ಸಲುವಾಗಿ ತುಂಬಾ ಪ್ರಯತ್ನ ಮಾಡುತ್ತಿತ್ತು. ಅದನ್ನು ನೋಡಿದ ಜನರು ತಕ್ಷಣ ನಮ್ಮ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತದನಂತರ ಅರಣ್ಯ ಅಧಿಕಾರಿಗಳು ಹಾವು ಹಿಡಿಯುವ ತಜ್ಞರನ್ನು ಕರೆಯಿಸಿದರು. ತಜ್ಞರು ಹಾವನ್ನು ವಾಂತಿ ಮಾಡಿಸುವ ಸಲುವಾಗಿ ಅದಕ್ಕೆ ಮೇಲೆ ಕೆಳಗೆ ಮಾಡುತ್ತ ಅದನ್ನು ಹೊರಗಡೆ ತಗೆಯುವಲ್ಲಿ ಯಶಸ್ವಿಯಾದರು. ವಾಂತಿ ಮಾಡಿದಾಗ ಅಲ್ಲಿದ್ದ ಜನರು ಆ ವಸ್ತುವನ್ನು ನೋಡಿ ದಂಗಾದರು. ಏಕೆಂದರೆ ಆ ವಸ್ತು ಒಂದು ಪ್ಲಾಸ್ಟಿಕ್ ಬಾಟಲ್ ಆಗಿತ್ತು. ಹಾವಿನ ಚಿಕ್ಕ ಬಾಯಿಂದ ದೊಡ್ಡ ಪ್ಲ್ಯಾಸ್ಟಿಕ್ ಬಾಟಲ್ ಅನ್ನು ಹೊರಗಡೆ ಬರುವದನ್ನು ನೋಡಿ ಅಲ್ಲಿಯ ಜನರು ಆಶ್ಚರ್ಯಚಕಿತರಾದರು. ಇದರ ನಂತರ ಕೊಬರಾ ಹಾವಿಗೆ ತುಂಬಾ ಸಮಾಧಾನವಾಯಿತು.

Video ನೋಡಿ …..

ಒಬ್ಬ ಅಧಿಕಾರಿ ಈ ವಿಡಿಯೋ ಶೇರ್ ಮಾಡಿದ್ದಾರೆ.

ಈ ವಿಡಿಯೋವನ್ನು ಓಡಿಸ್ಸಾ ಕೈಡರ್ ದ ಇಂಡಿಯನ್ ಫಾರೆಸ್ಟ್ ಸರ್ವಿಸ್(IFS) ದ ಒಬ್ಬ ಅಧಿಕಾರಿ ತನ್ನ ಟ್ವಿಟ್ಟರ್ ಮುಖಾಂತರ ಶೇರ್ ಮಾಡಿದ್ದಾರೆ. ಇದಕ್ಕೆ ಜನರು ಬಹಳಷ್ಟು ವೀಕ್ಷಣೆ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ತುಂಬಾ ಪ್ರತಿಕ್ರಿಯೆ ಸಹ ನೀಡುತ್ತಿದ್ದಾರೆ. ವನ್ಯಜೀವಿ ಸಂರಕ್ಷಣೆಯೊಂದಿಗೆ ಹೊಂದಿಕೊಂಡ ಅಧಿಕಾರಿಯೊಬ್ಬರ ಪ್ರಕಾರ, ಬೇಸಿಗೆಯ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ಪ್ರಕಾರದ ಹಾವುಗಳು ಹೊರಗಡೆ ಬರುತ್ತವೆ. ಆದರೆ ಈ ಹಾವಿಗೆ ನಿಶ್ಚಿತವಾಗಿ ನೀರಡಿಕೆ ಆಗಿರಬಹುದು, ಅದೇ ಸಮಯಕ್ಕೆ ಈ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ನೋಡಿರಬಹುದು. ಯಾವುದೇ ವಸ್ತುವನ್ನು ನುಂಗುವದು ಇದು ಕೊಬರಾದ ವಿಶೇಷ ಗುಣವಾಗಿದೆ. ಬಾಟಲ್ ನೋಡಿದ ಕೂಡಲೇ ಕೊಬರಾ ಅದನ್ನು ನುಂಗಿತು. ನಂತರ ಹೊಟ್ಟೆಯಲ್ಲಿ ಅದು ಪಚನವಾಗದೆ ಇರುವದರಿಂದ ಅದಕ್ಕೆ ತುಂಬಾ ತೊಂದರೆಯಾಯಿತು.

ಈ ವಿಡಿಯೋ ಪ್ಲಾಸ್ಟಿಕ್ ಪರ್ಯಾವರಣಕ್ಕೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ಲಾಸ್ಟಿಕ್ ಉಪಯೋಗ ಮಾಡಿ ಅದನ್ನು ಎಲ್ಲಿ ಬೇಕಾದಲ್ಲಿ ಎಸೆಯುವದರಿಂದ ಮನುಷ್ಯನಿಗೂ ಕೂಡಾ ಹಾನಿಯಾಗುವದರೊಂದಿಗೆ ವನ್ಯಜೀವಿಗಳಿಗೂ ಕೂಡಾ ತುಂಬಾ ಹಾನಿಯಾಗುತ್ತದೆ. ಆದುದರಿಂದಲೇ ಒಂದು ವೇಳೆ ನೀವು ಪ್ಲಾಸ್ಟಿಕ್ ಉಪಯೋಗ ಮಾಡಿದರೆ ಅದನ್ನು ದಿಸ್ಪೋಜಲ್ ಮಾಡುವದನ್ನು ಯಾವತ್ತೂ ಮರೆಯಬೇಡಿ.