Video; ಶುಭಮನ್ ಗಿಲ್ ಫೀಲ್ಡ್ ಮಾಡುತ್ತಿರುವಾಗ ಫ್ಯಾನ್ಸಗಳು ಶುರು ಮಾಡಿದರು ಒಂದೇ ಸಮನೆ “ಸಾರಾ” “ಸಾರಾ” ಎಂದು ಜಪಿಸಲು…
ಗಡಿಗೆಯ ಬಾಯಿ ಮುಚ್ಚಬಹುದು ಆದರೆ ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲವೆಂದು ಹಳೆಯ ನಾಣ್ಣುಡಿ ಇದೆ. ಸದ್ಯ ಇದೇ ರೀತಿಯ ಒಂದು ಅನುಭವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ನೋಡಲು ಸಿಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗರ ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಅವರ ಪ್ರತಿಯೊಂದು ಆಕ್ಟಿವಿಟೀಸ್ ಗಳ ಚಿಕ್ಕ ತುಣುಕುಗಳು ಟ್ವಿಟರ್ ನಲ್ಲಿ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಫೇಮಸ್ ಆಗುತ್ತವೆ.
ಸದ್ಯಕ್ಕೆ ಭಾರತ ಕ್ರಿಕೆಟ್ ತಂಡದಲ್ಲಿ ಹೊಸ ಸ್ಟಾರ್ ಒಬ್ಬನ ಉದಯವಾಗಿದೆ. ಆತನ ಹೆಸರೇ ಶುಭಮನ್ ಗಿಲ್. ಇವರು ಏಕದಿನ ಪಂದ್ಯದಲ್ಲಿ ಡಬಲ್ ಸೆಂಚುರಿ ಮತ್ತು ಸೆಂಚುರಿಗಳನ್ನು ಬಾರಿಸಿ ಇಡೀ ಕ್ರಿಕೆಟ್ ಜಗತ್ತನ್ನೇ ತನ್ನಡೆಗೆ ನೋಡುವಂತೆ ಮಾಡಿದ್ದಾರೆ. ತಮ್ಮ ಒಳ್ಳೆಯ ಅಷ್ಟೇ ಭರ್ಜರಿ ಆಟದಿಂದ ಕ್ರಿಕೆಟ್ ರಸಿಕರ ಮನವನ್ನು ರಂಜಿಸುತ್ತಿದ್ದಾರೆ.
ಬಹಳ ದಿನಗಳಿಂದ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ (ಸಚಿನ್ ತೆಂಡೂಲ್ಕರ್ ಅವರ ಮಗಳು) ಅವರ ಮಧ್ಯೆ ಅಫೇರ್ ಇರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಸುದ್ದಿ ಎದ್ದಿತ್ತು. ಇದಕ್ಕೆ ಕಾರಣ ಇನ್ಸ್ಟಾಗ್ರಾಮ್ ನಲ್ಲಿ ಈ ಇಬ್ಬರು ಸೆಲಿಬ್ರಿಟಿಗಳು ಒಬ್ಬರು ಇನ್ನೊಬ್ಬರ ಫೋಟೋಗಳಿಗೆ ಲೈಕ್ ಮಾಡುವುದರಿಂದ ಶುರುವಾಗಿತ್ತು. ಇದರಿಂದ ಇಂಟರ್ನೆಟ್ ನಲ್ಲಿ ಇವರಿಬ್ಬರ ಪ್ರೀತಿಗೆ ಸಂಬಂಧಿಸಿದ ಗಾಳಿ ಸುದ್ದಿಗಳು ಹರಡಿದ್ದವು.
ಈಗ ಮ್ಯಾಚ್ ಸಂದರ್ಭದಲ್ಲಿ ಫ್ಯಾನ್ಸ್ ಗಳು ಮೇಲಿನ ಸುದ್ದಿಯನ್ನೇ ಬಂಡವಾಳ ಮಾಡಿಕೊಂಡು ಕ್ರಿಕೆಟ್ ಗ್ರೌಂಡ್ ನಲ್ಲಿ ಶುಭಮನ್ ಗಿಲ್ ಬೌಂಡ್ರಿ ಲೈನ್ ನಲ್ಲಿ ಫೀಲ್ಡ್ ಮಾಡುತ್ತಿರುವಾಗ ಒಂದೇ ಸವನೆ ಗಂಟಲು ಹರಿದುಕೊಂಡು ಸಾರಾ ಸಾರಾ ಎಂದು ಚಿತ್ಕರಿಸುತ್ತಿದ್ದಾರೆ.
ನೋಡಿ ಈ ವಿಡಿಯೋ…
Shubman Gill waves after fans chant 'Sara-Sara'.
Sara Tendulkar or Sara Ali Khan? 🤔😜🤫#SaraAliKhan #SaraTendulkar #ShubmanGill #INDvsNZ pic.twitter.com/QyHKKvFph2
— Smriti Sharma (@SmritiSharma_) January 18, 2023
ಪ್ರಸ್ತುತ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಸ್ಮೃತಿ ಶರ್ಮ ಹೆಸರಿನ ಯುವತಿಯೊಬ್ಬಳು ಶೇರ್ ಮಾಡಿದ್ದಾಳೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಲ್ಲದೆ ಸಾಕಷ್ಟು ಜನರು ಲೈಕ್ ಸಹ ಮಾಡಿದ್ದಾರೆ.