ಸರ್ಪ ಸ್ನೇಹಿತನಿಗೆ ತಮಾಷೆಯಿಂದ ಶಾಕ್ ನೀಡಿದ ಬೃಹತ್ ನಾಗರಹಾವು! ಕೂದಲೆಳೆಯ ಅಂತರದಲ್ಲಿ ಬಚಾವ್! Video ವೈರಲ್…

ಹಾವಿನ ಜೊತೆಗಿನ ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಾ ಸಂಚಲನ ಮೂಡಿಸುತ್ತವೆ. ಇಂಥ ವಿಡಿಯೋಗಳು ಕೆಲವೊಮ್ಮೆ ನೋಡುಗರಿಗೆ ಭಯವೂ ಹುಟ್ಟಿಸುತ್ತವೆ. ಇತ್ತೀಚೆಗೆ ಹಾವಿನ ಬಗ್ಗೆ ಮನುಷ್ಯ ಸಾಕಷ್ಟು ತಿಳಿದುಕೊಂಡಿದ್ದಾನೆ. ಹೀಗಾಗಿ ಯಾವ ಜಾತಿಯ ಹಾವು ವಿಷಕಾರಿಯಾಗಿದೆ, ಯಾವುದು ಇಲ್ಲ ಎಂಬುದು ಹೆಚ್ಚು ಕಡಿಮೆ ಅಭ್ಯಾಸ ಮಾಡಿದ್ದಾನೆ.

ಈ ಅಭ್ಯಾಸದ ಬಲದಿಂದಲೇ ಎಂಥ ವಿಷಕಾರಿ ಹಾವುಗಳನ್ನು ಸಹ ಮನುಷ್ಯ (ಸರ್ಪ ಸ್ನೇಹಿತರು) ತನ್ನ ಚಾಕಚಕ್ಯತೆ ಮತ್ತು ಬುದ್ಧಿಯ ಬಲದಿಂದ ಹಿಡಿಯುತ್ತಿದ್ದಾನೆ. ಆದರೆ ಕೆಲವೊಮ್ಮೆ ಅತೀ ಚಿಕ್ಕ ತಪ್ಪು ಅಥವಾ ಮೈಮರೆಯುವಿಕೆ ಇವರಿಗೂ ದುಬಾರಿಯಾಗಿ ಪರಿಣಮಿಸುತ್ತದೆ. ಹೀಗಾಗಿ ಒಮ್ಮೊಮ್ಮೆ ತಮ್ಮ ಜೀವವನ್ನು ಸಹ ಕಳೆದುಕೊಂಡ ಘಟನೆಗಳು ಕೇಳಲು ಮತ್ತು ನೋಡಲು ಸಿಗುತ್ತವೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ತೂಫಾನ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯ ಅದೃಷ್ಟ ತುಂಬಾ ಚೆನ್ನಾಗಿತ್ತು ಎಂಬಂತೆ ಕಂಡು ಬರುತ್ತಿದೆ. ಕಾರಣ ಆತನ ಒಂದೇ ಒಂದು ಚಿಕ್ಕ ತಪ್ಪು ತುಂಬಾ ದುಬಾರಿಯಾಗಿ ಪರಿಣಮಿಸುವದಿತ್ತು. ಅಂಥ ಯಾವ ಘಟನೆ ನಡೆದಿದೆ ಬನ್ನಿ ನೋಡೋಣ.

ಪ್ರಸ್ತುತ ಈ ವಿಡಿಯೋದಲ್ಲಿ ಸರ್ಪ ಸ್ನೇಹಿತ ಬೃಹತ್ ಕೋಬ್ರಾ ಒಂದನ್ನು ರೆಸ್ಕ್ಯೂ ಮಾಡಲು ಪ್ರಯತ್ನಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಪ್ರಸ್ತುತ ಹಾವು ಮನೆಯಲ್ಲಿ ನುಸುಳಿತ್ತಿದೆ. ಆಗ ಈ ಸರ್ಪ ಸ್ನೇಹಿತ ಒಳಗೆ ಹೋದ ಕೊಬ್ರಾದ ಬಾಲವನ್ನು ಹಿಡಿದು ಹೊರಗಡೆ ಎಳೆಯುತ್ತಿದ್ದಾನೆ. ಆತನ ಪ್ರಕಾರ ಹಾವು ಒಳಗಡೆ ಹೋಗಿದೆ ಬಾಲವಷ್ಟೆ ಹೊರಗೆ ಇದೆ ಎಂಬಂತಾಗಿದೆ. ಆದರೆ ಕೋಬ್ರಾ ಮಾತ್ರ ಆತನು ಹಿಡಿದ ಬಾಲದ ಹತ್ತಿರವೇ ಥಟ್ಟನೆ ಬಂದು, “ಏನೀಗ? ಹೇಗಿದೆ ಮೈಗೆ?” ಎನ್ನುವ ರೀತಿಯಲ್ಲಿ ಸಡನ್ ಎಂಟ್ರಿ ಕೊಡುತ್ತದೆ. ಹಾವು ಹಠಾತ್ತನೆ ತನ್ನ ಈ ವರಸೆ ಬದಲಾಯಿಸಿದ್ದನ್ನು ನೋಡಿ ಹಾವು ಹಿಡಿಯುವ ಯುವಕನು ಸಹ ಬೆದರಿ ಒಮ್ಮೆಲೆ ಹಿಂದೆ ಸರಿಯುತ್ತಾನೆ. ಪ್ರಸ್ತುತ ದೃಶ್ಯ ಭಯ ಹುಟ್ಟಿಸುವುದಾದರೂ ಹಾವಿನ ನಡೆ ಮಾತ್ರ ನಗು ಹುಟ್ಟಿಸುವಂತಿದೆ.

ನೋಡಿ ಈ ವಿಡಿಯೋ…

ಇಲ್ಲಿ ನಾಗರಹಾವಿನ ಗಾತ್ರ ಸ್ವಲ್ಪ ಗಮನವಿಟ್ಟು ನೋಡಿ ಗೊತ್ತಾಗುತ್ತೆ ಎಂಥ ಆಕಾರ ಹೊಂದಿದೆ ಎಂದು. ಇಲ್ಲಿ ಯುವಕನ ಅದೃಷ್ಟ ತುಂಬಾನೇ ಚೆನ್ನಾಗಿತ್ತು, ಅಲ್ವಾ?

ಈ ವೀಡಿಯೋವನ್ನು ಎಲ್ಲರ ಇಷ್ಟದ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ _kannadareels_official ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 2 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದ್ದು ಸುಮಾರು 2 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.