ಇದು ಸ್ವಲ್ಪ ಜಾಸ್ತಿನೇ ಆಯ್ತು ಅನ್ಸುತ್ತೆ! ಮದುವೆಯಲ್ಲಿ ಮದುಮಗನ ಗೆಳೆಯರು ಎಲ್ಲರ ಎದುರಲ್ಲೇ ಮದುಮಗಳೊಂದಿಗೆ ಮಾಡಿದ್ದೇನು ನೋಡಿ….!
ಮದುವೆಯ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿರುತ್ತಾರೆ. ಇತ್ತೀಚೆಗಂತೂ ಮದುವೆಯ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುವದು ಒಂದು ಪ್ಯಾಶನ್ ಮತ್ತು ವಾಡಿಕೆಯಾಗಿ ಬಿಟ್ಟಿದೆ.
ಮದುವೆ ಯಾರದೇ ಫಿಕ್ಸ್ ಆಗಲಿ, ಎಲ್ಲರಿಗಿಂತಲೂ ಖುಷಿ ಜಾಸ್ತಿ ಆಗೋದು ಮೊದಲು ಅವರ ಫ್ರೆಂಡ್ ಗಳಿಗೆ ಅಲ್ವಾ? ಮದುವೆಯಲ್ಲಿ ಮಿತ್ರರು ಇಲ್ಲದೆ ಇದ್ದರೆ ಆ ಮದುವೆ ಮದುವೆಯೇ ಎನಿಸುವುದಿಲ್ಲ. ಆಮೇಲೆ ಇನ್ನೊಂದು ಹೇಳುವುದೆಂದರೆ ಗೋಳು ಹೊಯ್ದುಕೊಳ್ಳುವ ಸಲುವಾಗಿ ಸದ್ಯದ ಮದುವೆಗಳಲ್ಲಿ ಮಿತ್ರರು ವರನಿಗೆ ತುಂಬಾ ವಿಚಿತ್ರವಾದ ಗಿಫ್ಟ್ಗಳನ್ನು ನೀಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ ಮದುವೆಯಲ್ಲಿ ವಿಚಿತ್ರ ಕೃತ್ಯ ಮಾಡುವ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಇಂತದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ತೂಫಾನ್ ವೈರಲ್ ಆಗುತ್ತಿದೆ. ಅದೇನಿದೆ ನೋಡೋಣ ಬನ್ನಿ…
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಮದುವೆಯ ಸಮಾರಂಭದಲ್ಲಿ ಮದುಮಗನ ಕೆಲವು ಗೆಳೆಯರು ಕೂಡಿಕೊಂಡು ಮಾಡಿರುವ ಕೃತ್ಯ ಕಂಡು ಮದುಮಗಳು ತುಂಬಾನೇ ಕೋಪಗೊಂಡಿದ್ದಾಳೆ. ಅದೇನೆಂದರೆ ಮೊದಲಿಗೆ ಒಬ್ಬ ಗೆಳೆಯ ಬಂದು ಮದುಮಗ ಮತ್ತು ಮದುಮಗಳ ಮದ್ಯದಲ್ಲಿ ನಿಂತುಕೊಳ್ಳುತ್ತಾನೆ. ಆಗ ಮದುಮಗಳು ಇವರು ಫೋಟೋ ತಗೆದುಕೊಳ್ಳಲು ಬಂದಿದ್ದಾರೆ ಅಂದುಕೊಂಡು ಅವನನ್ನು ನಡುವೆ ನಿಲ್ಲಿಸಿ ಇವಳು ಸ್ವಲ್ಪ ಬದಿಗೆ ಸರಿಯುತ್ತಾಳೆ. ತದನಂತರ ಮತ್ತೊಬ್ಬ ಗೆಳೆಯ ಬಂದು ಮತ್ತೆ ಮದುಮಗಳನ್ನು ಬದಿಗೆ ಸರಿಸುತ್ತಾನೆ ಹೀಗೆ ಒಬ್ಬೊಬ್ಬರಾಗಿ ಗೆಳೆಯರು ಬಂದು ಮದುಮಗಳನ್ನು ಪೂರ್ತಿಯಾಗಿ ಕಡೆಗೆ ಸರಿಸಿ ಫೋಟೊ ತಗೆದುಕೊಳ್ಳಲು ಸಿದ್ಧವಾಗುತ್ತಾರೆ ಇದನ್ನು ಕಂಡ ಮದುಮಗಳು ತುಂಬಾನೇ ಕೋಪ ಗೊಳ್ಳುತ್ತಾಳೆ. ಈ ಪರಸ್ಥಿತಿಯಲ್ಲಿ ಆಕೆಯ ಮುಖ ನೋಡುವಂತ್ತಿತ್ತು.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ naughtyworld_ ಎಂಬ ಹೆಸರಿನ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.