ಹಾಸ್ಟೆಲ್ ನಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ 9 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ! ಇದಕ್ಕೆ ಹೊಣೆ ಯಾರು?
ಮಕ್ಕಳು ಶಾಲೆ ಕಲಿತು ಒಂದು ದೊಡ್ಡ ಉನ್ನತ ಹುದ್ದೆಯಲ್ಲಿ ನೌಕರಿ ಮಾಡಬೇಕೆಂದು ಪ್ರತಿ ತಾಯಿ ತಂದೆಯರು ಬಯಸುತ್ತಾರೆ. ಅದರ ಸಲುವಾಗಿ ದಿನನಿತ್ಯ ಶ್ರಮಿಸಿ ಮಕ್ಕಳಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸುತ್ತಾರೆ. ಮಕ್ಕಳು ಸಹ ಚೆನ್ನಾಗಿ ಕಲಿತು ಒಂದು ಉನ್ನತ ದರ್ಜೆಯ ಹುದ್ದೆ ಪಡೆದುಕೊಂಡು ತಂದೆ ತಾಯಿಯರ ಕನಸ್ಸು ನನಸಾಗಿಸಬೇಕು. ಇಂದು ಉತ್ತಮ ದರ್ಜೆಯ ನೌಕರಿ ಪಡೆಯಬೇಕೆಂದರೆ ತುಂಬಾ ಕಷ್ಟಪಟ್ಟು ಓದ ಬೇಕಾಗುತ್ತದೆ.
ತಮ್ಮ ಮಕ್ಕಳು ತಮ್ಮಿಂದ ದೂರವಿದ್ದರು ಪರವಾಗಿಲ್ಲ ಆದರೆ ಉನ್ನತ ಶಿಕ್ಷಣ ಪಡೆದು ಒಳ್ಳೆಯ ವ್ಯಕ್ತಿ ಆಗಲಿ ಎಂದು ತಂದೆ ತಾಯಿ ಬಯಸುತ್ತಾರೆ. ಆದ್ರೆ ಕೆಲವೊಮ್ಮೆ ತಂದೆ ತಾಯಿಗಳು ಊಹಿಸಲು ಸಾಧ್ಯವಿಲ್ಲದ ಘಟನೆ ಅವರ ಮಕ್ಕಳೊಂದಿಗೆ ನಡೆಯುತ್ತದೆ. ಇದರಿಂದ ಅವರ ಮೇಲೆ ದೊಡ್ಡ ಪರ್ವತವೇ ಬಿದ್ದಂತಾಗುವದು. ಅಂತಹದೇ ಒಂದು ಘಟನೆ ಕಳೆದ ಕೆಲವು ದಿವಸಗಳ ಹಿಂದೇ ನಡೆದಿದೆ. ಅದೇನೆಂದರೆ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಹುಡುಗಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಕೇಳಿ ನಿಮಗೂ ಸಹ ಶಾಕ್ ಆಗಿರಬಹುದು ಅದೇ ತರಹ ತಂದೆ ತಾಯಿಗಳು ಇದನ್ನು ಕೇಳಿ ಮೂರ್ಛೆ ನೆ ಹೋಗಿದ್ದರಂತೆ.
ಘಟನೆ ಏನೆಂದರೆ, ತಂದೆ ತಾಯಿಗಳಿಂದ ದೂರವಿದ್ದು ದೂರವಾಗಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಅಂದರೆ ಕೇವಲ ಹದಿನಾಲ್ಕು ವರ್ಷದ ಹುಡುಗಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ. ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ಕ್ಷೇತ್ರದ ವರದಯ್ಯಪಾಲೆಂನ ಎಂಬ 14 ವರ್ಷದ ಬಾಲಕಿ ವಾಲ್ಮೀಕಿಪುರಂನಲ್ಲಿರುವ ಜಿಎಂಸಿ ಬಾಲಯೋಗಿ ಗುರುಕುಲ ಶಾಲೆಯಲ್ಲಿ ಆರನೇ ತರಗತಿಯಿಂದ ಓದುತ್ತಿದ್ದಳು. ಆರನೇ ತರಗತಿಯಿಂದ ಒಂಬತ್ತನೇ ತರಗತಿಯ ವರೆಗೆ ಅಲ್ಲಿಯೇ ಅಭ್ಯಾಸ ಮಾಡುತ್ತಿದ್ದಳು.
ಕಳೆದ ಕೆಲವು ತಿಂಗಳಿನ ಹಿಂದೆ ಈ ಹುಡುಗಿ ತನಗೆ ಹೊಟ್ಟೆ ತುಂಬಾನೇ ನೋವಾಗುತ್ತಿದೇ ಎಂದು ಅಲ್ಲಿದ್ದ ವಾರ್ಡನ್ ಗೆ ಹೇಳಿದಳು. ಆದರೆ ಅದೇ ಸಮಯದಲ್ಲಿ ವಾರ್ಡನ್ ಸಹ ಅವಳ ತಂದೆ ತಾಯಿಗಳಿಗೆ ತಿಳಿಸಿದರು. ಇದೇನು ಸಾಧಾರಣವಾಗಿ ಹೊಟ್ಟೆ ನೋವು ಇರಬಹುದು ಕೆಲವು ದಿವಸಗಳ ನಂತರ ಕಡಿಮೆ ಆಗುತ್ತೆ ಅಂತ ತಿಳಿದು ತಂದೆ ತಾಯಿಗಳು ಮಗಳ ಕಡೆಗೆ ಕ್ಯಾರೆ ಎನ್ನದೆ ಹಾಗೆ ಮರೆತು ಬಿಟ್ಟರು. ಕೆಲವು ದಿವಸಗಳ ಹಿಂದೆ ಮತ್ತೆ ಹುಡುಗಿ ಹೊಟ್ಟೆ ತುಂಬಾನೇ ನೋವಾಗುತ್ತಿದೆ ಎಂದು ಹೊದ್ದಾಡಿ ಅಳಲು ಶುರು ಮಾಡಿದಳು. ಆಗ ಅಲ್ಲಿದ್ದ ವಾರ್ಡನ್ ಈ ಬಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಪ್ರಯೋಜನವಿಲ್ಲ ಎಂದು ಆ ಹುಡುಗಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಡಾಕ್ಟರ್ ಈ ಹುಡುಗಿಯನ್ನು ಚೆಕ್ ಅಪ್ ಮಾಡಿ ಹೇಳಿದನ್ನು ಕೇಳಿ ಎಲ್ಲರೂ ತಬ್ಬಿಬ್ಬಾಗಿದ್ದಾರೆ.
ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದರಿಂದ ವಾರ್ಡನ್ ಅಲ್ಲಿದ್ದ ವಾಲ್ಮೀಕಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲೇ ಮಾಡಿದರು. ಆಗ ಡಾಕ್ಟರ್ ಚೆಕ್ ಮಾಡಿ ಈ ಬಾಲಕಿ ಗರ್ಭಿಣಿ ಯಾಗಿದ್ದಾಳೆ ಎಂದು ತಿಳಿಸಿದರು. ಇದನ್ನು ತಿಳಿದ ಅಲ್ಲಿದ್ದ ಎಲ್ಲರೂ ಆಶ್ಚರ್ಯ ಗೊಂಡು ಈ ವಿಷಯವನ್ನು ಅವಳ ತಂದೆ ತಾಯಿಗೆ ತಿಳಿಸಿದರು. ವಿಷಯ ತಿಳಿದ ಕೂಡಲೇ ತಂದೆ ತಾಯಿ ಸಹ ಕಂಗಾಲಾಗಿದ್ದಾರೆ. ಇದಕ್ಕೆ ಕಾರಣ ಯಾರು ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಆದರೆ ಪೊಲೀಸರು ಈ ಘಟನೆಯ ವಿರುದ್ಧ ದೂರು ದಾಖಲಿಸಿಕೊಂಡು ಪರಶೀಲನೆ ನಡೆಸುತ್ತಿದ್ದಾರೆ.