ಜಗತ್ತು ಅರಿಯದ ಕಟು ಸತ್ಯವನ್ನು ಎಷ್ಟು ಅದ್ಭುತವಾದ ರೀತಿಯಲ್ಲಿ ತಿಳಿಸಿದ್ದಾರೆ ನೋಡಿ ಈ ವ್ಯಕ್ತಿ, ಆಸೆ 6 ದಿವಸ ಪ್ರೀತಿ 3 ದಿವಸ…..!!
ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತವೆ. ಅದಕ್ಕೆ ಸಮಾಧಾನವೇ ಔಷಧಿ.
ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ. ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ . ನಮಗಾಗಿ ನಾವು ಜೀವಿಸುವುದಕ್ಕಿಂತ ನಾವು ಬೇರೆಯವರಿಗಾಗಿ ಜೀವಿಸುವದೇ ಜೀವನ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವಧೆ ಜೀವನ.
ಮೊದಲು ನಮ್ಮ ಹೊಟ್ಟೆ ತುಂಬಿಸಿಕೊಂಡು ನಂತರ ಸಾದ್ಯವಾದ್ರೆ ಹಸಿದವರಿಗೆ ಊಟ ನೀಡುವದೇ ಜೀವನ. ನಮ್ಮ ಜೀವನ ಅರ್ಥ ಪೂರ್ಣವಾಗಬೇಕಾದರೆ ತನ್ನ ಎಲ್ಲ ಕಷ್ಟಗಳನ್ನು ತೋರಿಸಿಕೊಳ್ಳದೆ ಬೆರೆಯವರ ಜೊತೆ ಸಂತೋಷವಾಗಿ ಜೀವಿಸುವದೇ ಜೀವನ. ನಾವು ಬೇರೆಯವರಗೋಸ್ಕರ ಬದುಕಬೇಕು ವಿನಹ: ಸಮಾಜದಲ್ಲಿ ಆಗು ಹೋಗುವ ಕಷ್ಟ ಸುಖಗಳಲ್ಲಿ ಬಾಗಿಯಾಗುವದೇ ಜೀವನ. ಬಡವರು,ವೃಧ್ಧರಿಗೇ ಸಹಾಯ ಮಾಡುವದೇ ಜೀವನ. ಜೀವನದಲ್ಲಿ ಹಿರಿಯರಿಗೆ ಗೌರವಿಸಿ ಪ್ರೀತಿಸುವುದು ಜೀವನ.
ಜೀವನದಲ್ಲಿ ಎಷ್ಟೆ ಕಷ್ಟ ಬಂದರೂ ಅದನ್ನು ಮರೆತು ಮುಂದೆ ಸಾಗುವದೇ ಜೀವನ. ಪ್ರತಿಯೊಬ್ಬರು ಹುಟ್ಟುನಿಂದ ಮುಪ್ಪಾಗುವವರೆಗೂ ಅನೇಕ ಹಂತಗಳು ಬರುತ್ತವೆ. ಮಗುವಿನಿಂದ ಪ್ರಾರಂಭವಾದ ಈ ಸಂಸಾರ ಮುಪ್ಪಾಗಿ ಈ ಜಗತ್ತು ಬಿಟ್ಟು ಹೋಗುತ್ತದೆ. ಬರುವಾಗ ಬೆತ್ತಲೆ ಬಂದ ನಾವು ಹೋಗುವಾಗ ಸಹ ಬರೀ ಬೆತ್ತಲೇ ಯಲ್ಲೇ ಹೋಗುತ್ತೇವೆ. ಇದನ್ನು ಅರಿತವನೇ ನಿಜವಾದ ಜೀವನ ನಡೆಸುತ್ತಾನೆ. ಇರುವವರೆಗು ಎಲ್ಲರ ಜೊತೆಗೆ ನಗುವಿನಿಂದ ಇದ್ದು ಎಲ್ಲರನ್ನು ಖುಷಿ ಇಡುವದೇ ನಮ್ಮ ಜೀವನದ ಗುರಿಯಾಗಬೇಕು. ಈ ಜೀವನದ ಕುರಿತು, ಹೆಂಡತಿ ಮಕ್ಕಳ ಕುರಿತು, ತಂದೆ ತಾಯಿಯರ ಕುರಿತು ಹಾಗೂ ಸಂಪತ್ತು , ಪಾಪ ಪುಣ್ಯದ ಕುರಿತು ಈ ವ್ಯಕ್ತಿ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ಎಂಬುದು ಈ ವಿಡಿಯೋ ದಲ್ಲಿ ನೋಡಿ.
ವಿಡಿಯೋ ನೋಡಿ.
View this post on Instagram
ಈ ವಿಡಿಯೋದಲ್ಲಿದ್ದ ವ್ಯಕ್ತಿಯ ಹೆಸರು ಶಿವಣ್ಣ ಅಂತ ಇದ್ದು. ಇವರು ಮೂಲತಃ ನಾಡಿನಹಳ್ಳಿಯವರಾಗಿದ್ದು. ಒಂದು ಪ್ರಚರಾದ ಸಂದರ್ಭದಲ್ಲಿ ಈ ರೀತಿಯಾಗಿ ಜಗತ್ತು ಅರಿಯದ ಕಟು ಸತ್ಯವನ್ನು ಹೇಳಿದ್ದಾರೆ. ಸಧ್ಯಕ್ಕೆ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ sanjay_jagannath_07ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಎರಡು ಮಿಲಿಯನ್ ರಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಎರಡು ಲಕ್ಷರಷ್ಟು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.