ಒಂದು ಗುಟುಕು ಎಣ್ಣೆ ಸ್ವಾದ ನೋಡಿದ ಮೇಲೆ, ಉಲ್ಟಾ ಪಲ್ಟಾ ಲಾಗಾ ಹೊಡೆದ ಹುಂಜ ನೋಡಿ ವೀಡಿಯೋ.
ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ. ಇದರ ಜೊತೆಗೆ ಮಾನವನು ಪ್ರತಿಯೊಂದು ವಸ್ತು ನಿರೀಕ್ಷಣಾತ್ಮಕವಾಗಿ ನೋಡುತ್ತಾನೆ. ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ಮಾನವನು ತನ್ನ ಕಣ್ಣುಗಳಿಂದ ಪಡೆಯುತ್ತಾನೆ. ಪ್ರತಿಯೊಂದು ವಿಷಯ ಕಲಿಯಬೇಕಾದರೆ ಮಾನವನಿಗೆ ಕಣ್ಣುಗಳು ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ನೀಡುತ್ತವೆ.
ಮಾನವನು ತನಗೆ ಬೇಕಾದ ಕಾರ್ಯವನ್ನು ಸಲೀಸಾಗಿ ಮಾಡಿಕೊಳ್ಳಲು ಏನಾದರೂ ಹೊಸ ಯೋಜನೆ ಮಾಡುತ್ತಲೇ ಇರುತ್ತಾನೆ. ಅಲ್ಲದೆ ತನ್ನ ಜೊತೆಗೆ ಕೆಲವು ಪಶು- ಪಕ್ಷಿಗಳನ್ನು ಸಾಕಿ ತನ್ನ ಜೀವನದಲ್ಲಿ ಅದರ ಫಲಾನು ಫಲ ಪಡೆಯುತ್ತಾನೆ. ನಮಗೆ ಅತ್ಯಂತ ಉಪಯುಕ್ತವಾದ ಸಾಕಾಣಿಕೆಯಲ್ಲಿ ದನ , ಕುರಿ ಹಾಗೂ ಕೋಳಿ ಸಾಕಾಣಿಕಿ ಇವು ಮಾನವನಿಗೆ ಉತ್ತಮವಾದ ಲಾಭ ಕೊಡುತ್ತವೆ. ಸದ್ಯಕ್ಕೆ ಕೋಳಿ ಸಾಕಾಣಿಕೆ ಇದೊಂದು ದೊಡ್ಡ ಪ್ರಕಾರದ ಉದ್ಯೋಗವೇ ಆಗಿದೆ. ಏಕೆಂದರೆ ಇಂದು ಪ್ರತಿಯೊಬ್ಬರೂ ಚಿಕನ್ ತಿನ್ನಲು ತುಂಬಾನೇ ಆತುರ ರಾಗಿರುತ್ತಾರೆ. ಚಿಕನ್ ಜೊತೆಗೆ ಸ್ವಲ್ಪ್ ರಮ್ ಆದ್ರೆ ಸಾಕು ಸ್ವರ್ಗವೇ ಕೆಳಗೆ ಬಂದಂತೆ ಭಾಸವಾಗುತ್ತದೆ. ಕುಡಿಯುವದು ಬಹಳಷ್ಟು ಜನರ ಪ್ರೀಯ ಕಾರ್ಯವಾಗಿದೆ. ಹೀಗಾಗಿ ಅವರಲ್ಲಿ ಅನೇಕ ಪ್ರಕಾರದ ಕುದುಕರು ಕಂಡು ಬರುತ್ತಾರೆ. ಶ್ರೀಮಂತರು ಸೋಕಿಗಾಗಿ ಕುಡಿದ್ರೆ, ಬಡವ ತನ್ನ ನೋವನ್ನು ಮರೆಯಲು ಕುಡಿಯುತ್ತಾನೆ. ಬಹಳಷ್ಟು ಕುಡಿದ ಮೇಲೆ ಅವರ ವರ್ತನೆಯಲ್ಲಿ ಬದಲಾವಣೆ ಯಾದದ್ದು ನಾವು ಎಷ್ಟೋ ಜನರಲ್ಲಿ ನೋಡುತ್ತೇವೆ. ಆದರೆ ಪಕ್ಷಿಗಳು ಸಹ ಕುಡಿದರೆ ಅವುಗಳಿಗೆ ನಶೆ ಆಗುತ್ತದೆಯೇ? ಈ ಪ್ರಶ್ನೆಗೆ ಉತ್ತರ ಹೌದು. ಸದ್ಯಕ್ಕೆ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತವಾಗಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಒಂದು ಹುಂಜ ಅದರ ಮುಂದಿಟ್ಟ ಕೆಲವು ಬಿಯರ್ ಕ್ಯಾನ್ ನಲ್ಲಿಯ ಒಂದು ಎರಡು ಕುಟುಕು ಕುಡಿಯುತ್ತದೆ. ಕುಡಿದ ಕೆಲವೇ ನಿಮಿಷಗಳಲ್ಲಿ ಅದು ವಿಚಿತ್ರವಾದ ರೀತಿಯಲ್ಲಿ ವರ್ತಿಸಲು ಶುರು ಮಾಡುತ್ತದೆ. ಅದೇನೆಂದರೆ ಅದು ನಿಂತ ಜಾಗದಲ್ಲಿಯೇ ತಲೆ ಕೆಳಗೆ ಮಾಡಿ ಪಲ್ಟಿ ಹೊಡೆಯಲು ಶುರು ಮಾಡುತ್ತದೆ. ಪದೇ ಪದೇ ಪಲ್ಟಿ ಹೊಡೆಯುತ್ತದೆ. ಮನುಷ್ಯ ಸಹ ಯಾವ ರೀತಿಯಲ್ಲಿ ಕುಡಿದ ಅಮಲಿನಲ್ಲಿ ಮಾಡುತ್ತಾನೆಯೊ ಇದು ಸಹ ಅದೇ ರೀತಿಯಲ್ಲಿ ಮಾಡುತ್ತದೆ. ಇದನ್ನು ನೋಡಿದ ನೆಟ್ಟಿಗರು ಕುಡಿದ ಮೇಲೆ ಈ ರೀತಿ ವರ್ತಿಸುವದು ಸಹಜ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ t5i9 ಎಂಬ ಹೆಸರಿನ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಐದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ನಲ್ವತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.