ಬೃಹತ್ ವ್ಹೆಲ್ ಫಿಶ್ ನ ಬೇಟೆಯಿಂದ ಜೀವ ಉಳಿಸಿಕೊಳ್ಳಲು ಪುಟ್ಟ ಪೆಂಗ್ವಿನ್ ಮಾಡಿದ ಕಸರತ್ತು ನೋಡಿ ಈ Video ದಲ್ಲಿ.

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ತನ್ನ ಜೀವಕ್ಕೆ ತುಂಬಾ ಕಾಳಜಿ ಮಾಡುತ್ತದೆ. ಎಂಥ ಕಠಿಣ ಪ್ರಸಂಗದಲ್ಲಿಯೂ ಕೊನೆಯವರೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಭೂಮಿಯ ಮೇಲೆ ಒಂದು ಜೀವಿ ಇನ್ನೊಂದು ಜೀವಿಯ ಮೇಲೆ ನಿರ್ಭರವಾಗಿದೆ. ಕಾಡಿನಲ್ಲಿ, ಸಮುದ್ರದಲ್ಲಿ ಅನೇಕ ಪ್ರಾಣಿಗಳು ಕೆಲವೊಮ್ಮೆ ತಮ್ಮವರನ್ನೆ ಮುಗಿಸಿ ಕೊಂದು ತಿಂದು ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ.

ದೊಡ್ಡ ಜೀವಿಗಳು ತನಗಿಂತ ಚಿಕ್ಕ ಜೀವಿಗಳ ಮೇಲೆ ದರ್ಬಾರು ನಡೆಸುತ್ತವೆ. ಇದು ಸತತವಾಗಿ ನಡೆದು ಬಂದ ನೈಸರ್ಗಿಕ ಪ್ರಕ್ರಿಯೆಯೇ ಆಗಿದೆ ಎನ್ನಬಹುದು. ಸದ್ಯ ಇಲ್ಲಿ ಒಂದು ವಿಡಿಯೋ ನೋಡಬಹುದು. ಈ ವಿಡಿಯೋದಲ್ಲಿ ಒಂದು ಪುಟ್ಟ ಪೆಂಗ್ವಿನ್ ತನ್ನ ಜೀವ ಉಳಿಸಿಕೊಳ್ಳಲು ತುಂಬಾ ಸುಂದರವಾದ ಯತ್ನ ಮಾಡಿದೆ. ದೃಶ್ಯ ಪೃಥ್ವಿಯ ಗೊಳಾರ್ಧದಲ್ಲಿಯದಿದೆ. ಎಲ್ಲಿ ನೋಡಿದಲ್ಲಿ ಪರಿಸರ ಹಿಮದಿಂದ ತುಂಬಿ ಹೋಗಿದೆ. ಇಂಥ ಸಮುದ್ರದಲ್ಲಿ ನೀರಿನಲ್ಲಿರುವ ದೋಣಿಯಲ್ಲಿ ಕೆಲವರು ವಿಹಾರ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಮುದ್ರದಲ್ಲಿಯ ಒಂದು ದೊಡ್ಡ ವ್ಹೆಲ್ ಫಿಶ್ ಪೆಂಗ್ವಿನ್ ಗೆ ತನ್ನ ಆಹಾರವನ್ನು ಮಾಡಿಕೊಳ್ಳಲು ಬೆನ್ನಟ್ಟಿ ಬರುತ್ತಿದೆ. ಇದನ್ನು ಗಮನಿಸಿದ ಪುಟ್ಟ ಪೆಂಗ್ವಿನ್ ತನ್ನ ಜೀವ ಉಳಿಸಿಕೊಳ್ಳಲು ಹೆಣಗಾಡಿ ಹಠಾತ್ ದೋಣಿಯ ಕಡೆಗೆ ಓಡೋಡಿ ಬರುತ್ತದೆ. ಪೆಂಗ್ವಿನ್ ಓಡೋಡಿ ಬಂದದ್ದೇ ದೋಣಿಯಲ್ಲಿ ಜಿಗಿಯಲು ಪ್ರಯತ್ನ ಮಾಡುತ್ತದೆ. ಮೊದಲ ಬಾರಿ ಪೆಂಗ್ವಿನ್ ಇದರಲ್ಲಿ ಯಶಸ್ಸು ಕಾಣುವದಿಲ್ಲ, ಹಿಂದೆ ಹಾಗೆಯೇ ವ್ಹೆಲ್ ಫಿಶ್ ಬೆನ್ನಟ್ಟಿ ಬರುತ್ತಿದೆ. ಪೆಂಗ್ವಿನ್ ನ ಜೀವ ಒಂದೇ ಸವನೆ ಮೇಲೆ ಕೆಳಗೆ ಆಗುತ್ತಿದೆ. ಕೊನೆಗೆ ಎರಡನೆಯ ಬಾರಿಗೆ ಸ್ವಲ್ಪ ಜೋರಾದ ಜಿಗಿತವನ್ನು ಹೊಡೆದು ನೇರ ದೋಣಿಯಲ್ಲಿ ಎಂಟ್ರಿ ಮಾಡುತ್ತದೆ, ಆರಾಮಾಗಿ ಅವರ ಜೊತೆಗೆ ನಿರಾತಂಕದಿಂದ ನಿಲ್ಲುತ್ತದೆ.

ನೋಡಿ ಪೆಂಗ್ವಿನ್ ನ ಈ ಸುಂದರ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಇನ್ಕಮ್ ಹ್ಯಾಕ್ಸ್ .ಇನ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಗಟ್ಟಲೆ ಜನರು ವೀಕ್ಷಣೆ ಮಾಡಿದ್ದು ಸುಮಾರು 5 ಲಕ್ಷ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.