Video; ಯಾರೋ ಇವರೆಲ್ಲ? ಕಬಡ್ಡಿಯಲ್ಲಿ ಈ ರೀತಿಯ ಅದ್ಭುತ (ಫುಲ್ ಫನ್ನಿ) ಟ್ಯಾಕಲ್ ದೃಶ್ಯ ನಿಮ್ಮ ಜೀವನದಲ್ಲಿಯೇ ನೋಡಿಲ್ಲ!

ಆಟಗಳು ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕವಾಗಿ ಪ್ರಬಲವನ್ನಾಗಿಸುತ್ತವೆ. ಆಟಗಳಿಂದಾಗಿ ವ್ಯಕ್ತಿ ಸದಾ ಚೈತನ್ಯ, ಹುರುಪಿನಿಂದ ಕೂಡಿರುತ್ತಾನೆ. ವ್ಯಕ್ತಿ ಆರೋಗ್ಯವಂತನಾಗಿರಲು ಆಟಗಳು ತುಂಬಾ ಸಹಾಯ ಮಾಡುತ್ತವೆ. ಇದು ಆಟ ಆಡುವವರಿಗೆ ಲಾಭ.

ಇನ್ನು ಯಾವುದೇ ಆಟಗಳು ನೋಡುವ ರಸಿಕರಿಗೂ ಮನರಂಜನೆ ನೀಡುತ್ತದೆ. ರಸಿಕರಿಲ್ಲದೆ ಯಾವುದೇ ಆಟ ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ಪ್ರತಿಯೊಂದು ಆಟದಲ್ಲಿ ಆಟಗಾರರಿಗೆ ಮಹತ್ವವಿದ್ದಷ್ಟು ನೋಡುವ ರಸಿಕರಿಗೂ ಅಷ್ಟೇ ಮಹತ್ವವಿದೆ. ಪ್ರೇಕ್ಷಕರು, ಫ್ಯಾನ್ಸ್ ಗಳಿಲ್ಲದ ಆಟ, ಉಪ್ಪಿಲ್ಲದ ಊಟವಿದ್ದಂತೆ ಅದರಲ್ಲಿ ಮಜಾ, ಟ್ವಿಸ್ಟ್ ಇರುವುದೇ ಇಲ್ಲ. ಆಟಗಳಲ್ಲಿ ನಡೆಯುವ ಅದ್ಭುತ ದೃಶ್ಯಗಳನ್ನು ತಮ್ಮ ಕಣ್ಣುಗಳಲ್ಲಿ ಸೆರೆ ಹಿಡಿಯುವ ರಸಿಕರು, ಎರಡು ತಂಡಗಳ ಮಧ್ಯೆ ನಡೆಯುವ ಜಿದ್ದು, ರೋಧ-ಪ್ರತಿರೋಧ, ಇರಿಸು-ಮುರಿಸು, ದಾವೆ-ಪ್ರತಿದಾವೆ ಹೀಗೆ ನೋಡಲು ತುಂಬಾ ಇಷ್ಟವಾಗುತ್ತದೆ. ಜೊತೆಗೆ ಫುಲ್ ಮಜಾ ಸಹ ಬರುತ್ತದೆ.

ಈಗ ಇಲ್ಲಿ ನೋಡಲಿರುವ ವಿಡಿಯೋದಲ್ಲಿ ಆಟಗಾರ ಮಧ್ಯೆ ನಡಿದಿದೆ ಒಂದು ಸಖತ್ ಕಾಮಿಡಿ ದೃಶ್ಯ. ಪ್ರಸ್ತುತ ದೃಶ್ಯ ಈ ಮೊದಲು ನೀವೆಲ್ಲೂ ನೊಡಲಿಕ್ಕಿಲ್ಲ. ಇಲ್ಲಿ ಎರಡು ತಂಡಗಳ ಮಧ್ಯೆ ನಮ್ಮ ದೇಶಿ ಆಟವಾದ ಕಬಡ್ಡಿ ತುಂಬಾ ಸೀರಿಯಸ್ಸಾಗಿ ನಡೆದಿದೆ. ಒಂದು ಯಂಗ್ ಸ್ಟಾರ್ ಇನ್ನೊಂದು ದತ್ತಾತ್ರೇಯ ತಂಡ ಹೋರಾಟ ಮಾಡುತ್ತಿವೆ. ಇಲ್ಲಿ ಯಂಗ್ ಸ್ಟಾರ್ ತಂಡದ ಆಟಗಾರ ದತ್ತಾತ್ರೇಯ ತಂಡದ ಮೇಲೆ ಸವಾರಿ ಮಾಡಲು ಹೋದಾಗ ದತ್ತಾತ್ರೇಯ ತಂಡದ ಆಟಗಾರನೊಬ್ಬ ಆತನಿಗೆ ಚೆನ್ನಾಗಿ ಕ್ಯಾಚ್ ಮಾಡಿದ್ದಾನೆ. ಆದರೆ ಮರುಕ್ಷಣವೇ ಅಲ್ಲಿ ನಡೆದ ದೃಶ್ಯ ಮಾತ್ರ ಎಂಥ ಮುಖ ಸಿಂಡರಿಸಿದ ವ್ಯಕ್ತಿಯನ್ನೂ ನಗೆಗಡಲಲ್ಲಿ ತೇಲಿಸಿ ಬಿಡುತ್ತದೆ. ಕಾರಣ ದತ್ತಾತ್ರೇಯ ಗುಂಪಿನ ಆಟಗಾರರ ಕೌಶಲ್ಯ ನೋಡಿ ನಗಬೇಕೋ ಅಳಬೇಕೋ ಒಂದು ಗೊತ್ತಾಗ್ತಿಲ್ಲ. ಯಂಗ್ ಸ್ಟಾರ್ ತಂಡದ ಆಟಗಾರನಿಗೆ ಒಂದು ಸೈಡ್ ಬಿಟ್ಟು ತಾವೇ ಎಲ್ಲರೂ ಬಿದ್ದು ಎದುರಾಳಿ ಆಟಗಾರನಿಗಾಗಿ ಬಿದ್ದು ಒದ್ದಾಡುತ್ತಿದ್ದಾರೆ. ಎದುರಾಳಿ ತಂಡದ ಆಟಗಾರ ಎಲ್ಲಿ ಇದ್ದಾನೆ ಎಂಬುದೇ ಅವರಿಗೆ ಗೊತ್ತಿಲ್ಲ. ಪ್ರಸ್ತುತ ಈ ತಮಾಷೆಯ ದೃಶ್ಯ ನೋಡಿ ಅಲ್ಲಿ ಅಂಪೈರ್ ಸಹಿತ ಉಪಸ್ಥಿತರಿದ್ದವರೆಲ್ಲರೂ ನಗುತ್ತಿದ್ದಾರೆ.

ನೋಡಿ ಮೈಂಡ್ ಫ್ರೆಶ್ ಮಾಡುವ ಈ ಸೂಪರ್ ವಿಡಿಯೋ…

 

View this post on Instagram

 

A post shared by Kabaddi_0831 (@kabaddi_0831)

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ kabaddi_0831 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ನೋಡಿ ನೆಟ್ಟಿಗರು ಸಖತ್ ತಮಾಷೆಯ ಪ್ರತಿಕ್ರಿಯೆ ಗಳನ್ನು ನೀಡಿದ್ದಾರೆ. ಒಬ್ಬ ಯೂಸರ್ “ಇಲ್ಲಿ ಟ್ಯಾಕಲ್ ಮಾಡುವವನ್ನು ಬಿಟ್ಟು ಉಳಿದವರೆಲ್ಲರೂ ಎಣ್ಣೆ ಹೊಡೆದು ಬಂದಿದ್ದಾರೆ” ಎಂದಿದ್ದಾನೆ. ಇನ್ನೊಬ್ಬ “ಅರೆ ಎಲ್ಲಿ ಹೊದನೋ ಈಗತಾನೆ ಇಲ್ಲೇ ಕೆಳಗಡೆಯೆ ಇದ್ದನು” ಎಂದಿದ್ದಾನೆ. ಆಹಾ… ಅಂಪೈರ್ ಸ್ಮೈಲ್ ನೋಡುವಂತಿದೆ ಎಂದು ಬೇರೊಬ್ಬ ಪ್ರತಿಕ್ರಿಯೆ ನೀಡಿದ್ದಾನೆ.