Video; ಪ್ಯಾಂಟ್ ಇಳಿದರೂ ಪರ್ವಾಗಿಲ್ಲ, ಗಾಳಿಪಟ ಮಾತ್ರ ಕೆಳಗೆ ಇಳಿಯಲು ಬಿಡುವದಿಲ್ಲ! ನೋಡಿ ಹುಡುಗನ ಎಫೋರ್ಟ್.
ಮಕ್ಕಳಿಗೆ ಆಟವೆಂದರೆ ತುಂಬಾ ಇಷ್ಟ. ಇದಕ್ಕಾಗಿ ಮಕ್ಕಳು ಊಟವನ್ನು ಸಹಿತ ಮರೆತುಬಿಡುತ್ತಾರೆ. ಬೇರೇನು ಮಾಡಬೇಕೆನ್ನುವ ಪರಿವೇಯೇ ಇಲ್ಲದೆ ಆಟ ಆಡುವುದರಲ್ಲಿ ಮಕ್ಕಳು ತುಂಬಾ ಮಗ್ನರಾಗಿರುತ್ತಾರೆ. ಮೊದಲಿನ ಸಮಯದಲ್ಲಂತೂ ಎಷ್ಟೋ ಸಲ ಪೋಷಕರು ಆಟದ ಮೈದಾನದಿಂದ ಮಕ್ಕಳನ್ನು ಊಟಕ್ಕಾಗಿ ಕಿವಿ ಹಿಡಿದು ಹೊಡೆಯುತ್ತಾ ಬಡಿಯುತ್ತಾ ಮನೆಗೆ ಕರೆ ತರುತ್ತಿದ್ದರು.
ಸದ್ಯಕ್ಕೆ ಈ ದೃಶ್ಯವೂ ಎಲ್ಲಿಯೂ ಕಂಡು ಬರುತ್ತಿಲ್ಲ. ಕಾಲದ ಜೊತೆಗೆ ಈ ದೃಶ್ಯವು ವಿಲುಪ್ತವಾಗುತ್ತಾ ಹೋಗುತ್ತಿದೆ. ಕಾರಣ ಮೊಬೈಲ್ ಜಗತ್ತಿನಿಂದಾಗಿ ಮಕ್ಕಳು ಮೊದಲಿನವರ ಹಾಗೆ ಆಟ ಆಡಲು ಮನೆಯಿಂದ ಹೆಜ್ಜೆ ಇಡುತ್ತಿಲ್ಲ. ಇದು ನಿಜಕ್ಕೂ ಚಿಂತೆಯ ವಿಷಯವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ವಿಡಿಯೋಗಳು ತುಂಬಾ ವಿಶೇಷತೆಯಿಂದ ಕೂಡಿರುತ್ತವೆ. ಸದ್ಯ ಇದೇ ರೀತಿಯ ಒಂದು ವಿಶೇಷ ವಿಡಿಯೋ ನಿಮಗಾಗಿ ಇಲ್ಲಿ ತಂದಿದ್ದೇವೆ. ಪ್ರಸ್ತುತ ವಿಡಿಯೋದಲ್ಲಿ ಚಿಕ್ಕ ಹುಡುಗನೊಬ್ಬ ಮಾಳಿಗೆಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುತ್ತಿದ್ದಾನೆ. ಈ ಗಾಳಿಪಟವನ್ನು ಆಕಾಶದಲ್ಲಿ ಹಾರಿಸುವ ಸಂದರ್ಭದಲ್ಲಿ ಹುಡುಗ ಎಷ್ಟೊಂದು ಲೀನವಾಗಿದ್ದಾನೆಂದರೆ ಆತನು ತೊಟ್ಟಿರುವ ಪ್ಯಾಂಟ್ ಸಂಪೂರ್ಣವಾಗಿ ಕೆಳಗೆ ಇಳಿದಿದೆ. ಆದರೂ ಹುಡುಗನ ಗಮನ ಮಾತ್ರ ಆ ಕಡೆಗೆ ಸ್ವಲ್ಪವೂ ಇಲ್ಲ. ಆತ ಬರೀ ಆಕಾಶದಲ್ಲಿ ಏರಿಸುತ್ತಿರುವ ತನ್ನ ಗಾಳಿಪಟದ ಕಡೆಗೆ ಮಾತ್ರ ನೋಡುತ್ತಿದ್ದಾನೆ. ಈ ದೃಶ್ಯವನ್ನು ಯಾರೋ ಒಬ್ಬರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪ್ರಸ್ತುತ ದೃಶ್ಯ ನೋಡಲು ತುಂಬಾ ವಿಶೇಷವಾಗಿದೆ ಮತ್ತು ತಮಾಷೆಯಿಂದ ಕೂಡಿದೆ.
ನೋಡಿ ಈ ವಿಡಿಯೋ…
View this post on Instagram
ಹುಡುಗ ವಿನೂತನ ಶೈಲಿಯಲ್ಲಿ ಗಾಳಿಪಟ ಹಾರಿಸುತ್ತಿರುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ ಗುಲ್ಜಾರ್ ಶಾಯರಿ ಹೈ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.