ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಸ್ಕಾಟ್ಲೆಂಡ್ ಪರವಾಗಿ ಆಡಿದ್ದರು!

ರಾಹುಲ್ ದ್ರಾವಿಡ್ ಭಾರತದ ವಾಲ್ ಎಂದೇ ಪ್ರಸಿದ್ಧ. ಈ ವಾಲ್ ಭೇದಿಸುವ ಜಗತ್ತಿನ ಎಲ್ಲ ಬೌಲರ್ ಗಳಿಗೆ ಸಹಜ ಶಕ್ಯ ವಿರಲಿಲ್ಲ. ರಾಹುಲ್ ಒಮ್ಮೆ ಕ್ರೀಜ್ ಮೇಲೆ ನಿಂತರೆ ದೇಶಕ್ಕೆ ಎಷ್ಟೋ ಮ್ಯಾಚ್ ಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ.

ಸ್ವಂತದ ವೈಯಕ್ತಿಕ ದಾಖಲೆಯಗಿಂತಲೂ ಭಾರತೀಯ ಟೀಮ್ ದ ಗೆಲುವಿಗೆ ರಾಹುಲ್ ಅವರು ಯಾವತ್ತೂ ಮಹತ್ವ ಕೊಟ್ಟರು. ಯಾರೂ ನಾಯಕನ ಸ್ಥಾನಕ್ಕೆ ತಯಾರಿರದ ಸಮಯದಲ್ಲಿ ಅವರು ನಾಯಕರಾದರು. ಸಂಘ ಹಿತಕ್ಕಾಗಿ ಓಪನಿಂಗ್ ಸಹಿತ ಮಾಡಿದರು. 7 ನೆ ನಂಬರದಲ್ಲಿಯೂ ಬ್ಯಾಟ್ ಮಾಡಿದರು. ಅಷ್ಟೇ ಅಲ್ಲ ಟೀಮಿಗೆ ಹೆಚ್ಚುವರಿ ಬ್ಯಾಟ್ಸ್ ಮನ್ ದೊರೆಯಲೆಂದು ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಹಿತ ಚೆನ್ನಾಗಿ ನಿರ್ವಹಿಸಿದರು.

ಆದರೆ ಇದೇ ರಾಹುಲ್ ಅವರು ಕೆಲವೊಂದು ಮ್ಯಾಚ್ ಗಳನ್ನು ಸ್ಕಾಟ್ಲೆಂಡ್ ಪರವಾಗಿ ಆಡಿದ್ದು ನಿಮಗೆ ಗೊತ್ತಿದೆಯೇ?

ಸ್ಕಾಟ್ಲೆಂಡ್ ಇದು ಇನ್ನೂವರೆಗೆ ಬ್ರಿಟಿಷರ ಆಧಿಪತ್ಯದ ಕೆಳಗಿದೆ. ಇಲ್ಲಿಯೂ ಕ್ರಿಕೆಟ್ ಮೊದಲಿನಿಂದಲೂ ಆಡುತ್ತಾರೆ. ಆದರೆ ಇವರಿಗೆ ಕ್ರಿಕೆಟ್ ನಲ್ಲಿ ಸ್ವಂತದ ತಮ್ಮದೇ ಛಾಪನ್ನು ಮೂಡಿಸುವದು ಸಾಧ್ಯವಾಗಿಲ್ಲ. ಕೌಂಟಿ ಕ್ರಿಕೆಟ್ ಮತ್ತು ಪ್ರವಾಸದ ಮೇಲಿರುವ ಅತಿಥಿ ತಂಡಗಳ ಜೊತೆಗೆ ಫಸ್ಟ್ ಕ್ಲಾಸ್ ಮ್ಯಾಚ್ ಅಷ್ಟೇ ಆಡುತ್ತಿರುತ್ತಾರೆ.

1994 ರಿಂದ ಸ್ಕಾಟ್ಲೆಂಡ್ ಸ್ವಂತದ ಟೀಮ್ ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿಸಿದರು. 1999 ರ ವರ್ಲ್ಡ್ ಕಪ್ ನಲ್ಲಿ ಅರ್ಹತೆಯನ್ನು ಸಹ ಪಡೆದರು. ಆದರೆ ಅಲ್ಲಿ ಅವರಿಗೆ ಒಂದು ಮ್ಯಾಚನ್ನು ಗೆಲ್ಲಲಾಗಿಲ್ಲ. ಮುಂದೆ 2003 ವಿಶ್ವ ಕಪ್ ಟೂರ್ನಿಗೆ ಆಯ್ಕೆಯೂ ಸಹಿತ ಆಗಲಿಲ್ಲ.

ಸತತವಾದ ಸೋಲಿನಿಂದ ಸ್ಕಾಟ್ಲೆಂಡ್ ದ ಮನೋಬಲ ಕುಂಠಿತ.

ಆಟಗಾರರ ಟ್ರೇನಿಂಗ್ ಸಲುವಾಗಿ ಮತ್ತು ಮಾರ್ಗದರ್ಶನ ಸಲುವಾಗಿ ಒಂದು ವರ್ಲ್ಡ್ ಕ್ಲಾಸ್ ಪ್ಲೇಯರ್ ನ್ನು ಸ್ಕಾಟ್ಲೆಂಡ್ ಸಲುವಾಗಿ ಆಡಿಸಬೇಕೆಂದು ಅಲ್ಲಿಯ ಕ್ರಿಕೆಟ್ ಬೋರ್ಡ ವಿಚಾರ ಮಾಡಿತು.ಭಾರತದ ಕ್ರಿಕೆಟ್ ಟೀಮ್ ಆಗ ಒಳ್ಳೆಯ ಫಾರ್ಮ್ ನಲ್ಲಿತ್ತು. ಗಾಂಗೂಲಿಯ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಅವರ ದೇಶದಲ್ಲಿಯೇ ಸೋಲಿಸಿದ್ದರು. ಭಾರತದ ಬ್ಯಾಟಿಂಗ್ ಅಟ್ಯಾಕ್ ವಿಶ್ವದಲ್ಲಿಯೇ ಸರ್ವೋತ್ಕೃಷ್ಠವಾಗಿತ್ತು.

ಸ್ಕಾಟ್ಲೆಂಡ್ ಕ್ರಿಕೆಟ್ ದ ಸಿಈಓ ಗೆವಿನ್ ಜೋನ್ಸ್ ಅವರು ಭಾರತದ ಕೋಚ್ ಜಾನ್ ರೈಟ್ ಅವರನ್ನು ಸಂಪರ್ಕಿಸಿದರು. ಭಾರತದ ಒಬ್ಬ ಸ್ಟಾರ್ ಆಟಗಾರನಿಗೆ ಮೂರು ತಿಂಗಳುಗಳವರೆಗೆ ಸ್ಕಾಟ್ಲೆಂಡ್ ಗೆ ಕಳುಹಿಸಿ ಕೊಡಲು ವಿನಂತಿಸಿದರು. ಸಚಿನ್ ಅವರಿಗೆ ಕೊಂಡೊಯ್ಯುವದು ಅವರ ಇಷ್ಟವಾಗಿತ್ತು, ಆದರೆ ಜಾನ್ ರೈಟ್ ಅವರಿಗೆ ಹೇಳಿದರು, ‘ನಿಮಗೆ ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ನಲ್ಲಿ ಎಲ್ಲಕ್ಕೂ ಹೆಚ್ಚು ಉಪಯೋಗವಾಗಬೇಕೆಂದರೆ ಆ ಆಟಗಾರ ಒಬ್ಬನೇ ಇದ್ದಾನೆ, ಅವರೇ ರಾಹುಲ್ ದ್ರಾವಿಡ್.

ಆಗ ರಾಹುಲ್ ಅವರು ಭಾರತದ ಉಪನಾಯಕರಿದ್ದರು. ಆಗ 2003 ರಲ್ಲಿ ಮಾನಸಿಕ ಮತ್ತು ದೈಹಿಕವಾಗಿ ತುಂಬಾ ಪ್ರೆಶರ್ ಇದ್ದ ದಿನಗಳಿದ್ದರೂ ಈ ಹೊಸ ಜವಾಬ್ದಾರಿಗೆ ಒಪ್ಪಿಕೊಂಡರು.ಅದೇ ಸಮಯದಲ್ಲಿ ಮದುವೆಯಾಗಿಯೂ ಕೆಲವೇ ದಿನಗಳಾಗಿದ್ದರೂ ರಾಹುಲ್ ಮತ್ತು ಪತ್ನಿ ವಿಜೇತಾ ಕೂಡಿ ಮೂರು ತಿಂಗಳುಗಳ ಸಲುವಾಗಿ ಸ್ಕಾಟ್ಲೆಂಡ್ ಗೆ ಹೋದರು. ರಾಹುಲ್ ರು ಈ ಸಮಯದಲ್ಲಿ ನ್ಯಾಷನಲ್ ಕ್ರಿಕೆಟ್ ಲೀಗ್ ನಲ್ಲಿ 11 ಪಂದ್ಯಗಳನ್ನು ಮತ್ತು ಪಾಕಿಸ್ತಾನದ ಜೊತೆಗೆ ಒಂದು ಫಸ್ಟ್ ಕ್ಲಾಸ್ ಪಂದ್ಯ ಸ್ಕಾಟ್ಲೆಂಡ್ ಪರವಾಗಿ ಆಡಿದರು.

ಸ್ಕಾಟ್ಲೆಂಡ್ ತಂಡ ತುಂಬಾ ಅನನುಭವಿಯಾಗಿದ್ದರಿಂದ ಈ 12 ಪಂದ್ಯಗಳಲ್ಲಿ ಬರೀ ಒಂದನ್ನು ಮಾತ್ರ ಗೆದ್ದರು. ಮೊಟ್ಟಮೊದಲು ಭಾರತ ಬದಲಾಗಿ ಬೇರೆ ದೇಶದ ಜರ್ಸಿ ತೊಟ್ಟು ಆಡುವಾಗ ಒಳ್ಳೆಯ ಆಟ ಪ್ರದರ್ಶಿಸುತ್ತ ರಾಹುಲ್ ಅವರು 66 ರ ಸರಾಸರಿಯಿಂದ 600 ರನ್ ಗಳನ್ನು ಪೇರಿಸಿದರು. ಆದರೆ ದುರ್ದೈವ ಎಂಬಂತೆ ಪಾಕಿಸ್ತಾನದ ವಿರುದ್ಧ ಆಡುವಾಗ ರಾಹುಲ್ ಅವರು ಮೊದಲ ಬಾಲ್ ಗೆ ಡಕ್ ಮೇಲೆ ಔಟಾದರು.

ಸ್ಕಾಟ್ಲೆಂಡ್ ಟೀಮ್ ಕ್ರಿಕೆಟ್ ಮೈದಾನದಲ್ಲಿ ವಿಶೇಷವೇನೂ ಮಾಡಲಾಗಲಿಲ್ಲ. ಆದರೆ ರಾಹುಲ್ ಅವರ ಅನುಭವದ ಲಾಭ ಮಾತ್ರ ತುಂಬಾ ಆಯಿತು. ವರ್ಲ್ಡ್ ಕ್ಲಾಸ್ ಆಟಗಾರರು ಆಡುವಾಗ ಅವರ ವಿಚಾರ ಹೇಗಿರುತ್ತೆ, ಅವರ ಎಪ್ರೋಚ್ ಹೇಗಿರುತ್ತೆ ಇದೆಲ್ಲ ಅಲ್ಲಿಯ ತರುಣ ಆಟಗಾರರಿಗೆ ಕಲಿಯಲು ಸಾಧ್ಯವಾಯಿತು.

2007 ರ ವರ್ಲ್ಡ್ ಕಪ್ ನಲ್ಲಿ ಸ್ಕಾಟ್ಲೆಂಡ್ ತಂಡ ಆಯ್ಕೆಯಾಯಿತು. ಆಗ ರಾಹುಲ್ ಅವರು ಭಾರತ ತಂಡದ ನಾಯಕರಾಗಿದ್ದರು. ಅವರ ಜೊತೆಗೆ ಆಡಿದ ಅನೇಕ ಆಟಗಾರರು ವರ್ಲ್ಡ್ ಕಪ್ ನಲ್ಲಿ ಆಡುವದನ್ನು ನೋಡಿ ರಾಹುಲ್ ಅವರಿಗೆ ವಿಶೇಷ ಆನಂದವಾಗಿತ್ತು. ಈಗಲೂ ಸಹಿತ ರಾಹುಲ್ ಅವರು ಇಂಗ್ಲೆಂಡ್ ಗೆ ಹೋದಾಗ ಅವರ ಒಂದು ವಿಸಿಟ್ ಸ್ಕಾಟ್ಲೆಂಡ್ ಗೆ ಇದ್ದೇ ಇರುತ್ತದೆ.