ಕನ್ನಡದ ಈ ಪ್ರಸಿದ್ಧ ನಟಿ ಯೋಗಾ ಮಾಡುತ್ತಿರುವ ವೈರಲ್ ವಿಡಿಯೋ ನೋಡಿ!!

ಇಂದಿನ ಯಾಂತ್ರಿಕ ಜೀವನ, ಆತಂತ್ರಜೀವನ ಶೈಲಿಗೆ ಸುಸೂತ್ರತೆ ತರುವ ನಿಟ್ಟಿನಲ್ಲಿ ಯೋಗ-ಆಸನ ಪ್ರಾಣಾಯಾಮಗಳು ಮುಖ್ಯ ಪಾತ್ರವಾಹಿಸುತ್ತವೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒತ್ತಡದ ಬಲೆಯಲ್ಲಿ ಓಡಾಡುವ ಬಿಡುವಿಲ್ಲದ ಮನಸ್ಸು, ಶರೀರ ಒದ್ದಾಡುತ್ತಿದೆ. ಆದ್ದರಿಂದ ದೇಹ ಬಲಿಶಾಲಿಯಾಗಿರಬೇಕು. ಮನಸ್ಸನ್ನು ಹಗುರವಾಗಿಡಲು, ಆತ್ಮಬಲವನ್ನು ಗಟ್ಟಿಮುಟ್ಟು ಮಾಡಲು ಯೋಗಾಸನ, ಪ್ರಾಣಾಯಾಮದ ಸಾಧನೆಯನ್ನು ಪ್ರತಿನಿತ್ಯಮಾಡುವದು ಅವಶ್ಯಕವಾಗಿದೆ.

ಯೋಗಾಸನಕ್ಕೆ ಇಂದು ಇಡೀ ಜಗತ್ತಿನಾದ್ಯಂತ ಮಹತ್ವವನ್ನು ಕೊಡುತ್ತಿದ್ದಾರೆ. ಅಷ್ಟೇ ಏಕೆ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿವಸ ಎಂದು ಆಚರಿಸಲಾಗುತ್ತಿದೆ. ನಮ್ಮ ದೇಶದ ಯೋಗಗುರು ರಾಮದೇವ ಬಾಬಾ ಅವರು ಇಡೀ ದೇಶಕ್ಕೆ ಯೋಗ ಹೇಳಿ ಕೊಡುವ ಕಾರ್ಯ ಮಾಡಿದ್ದಾರೆ. ಯೋಗ ಮಾಡುವದರಿಂದ ನಮ್ಮ ಶರೀರಕ್ಕೆ ಅನೇಕ ಲಾಭಗಳು ದೊರೆಯುತ್ತವೆ ಅಲ್ಲದೆ ಶರೀರ ಸದೃಢವಾಗಿಡಲು ಸಹಾಯ ವಾಗುತ್ತದೆ.

ಇಂದು ಪ್ರತಿಯೊಬ್ಬರು ಯೋಗ ಕಲಿಯಲು ಬಯಸುತ್ತಾರೆ ಯೋಗದಿಂದ ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಈ ಯೋಗಾಸನದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಪ್ರಸಿದ್ಧ ನಟಿ ತಾನು ಯೋಗಾಸನ ಮಾಡಿರುವ ವಿಡಿಯೋ ಸ್ವತಃ ತಾನೇ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾಳೆ. ಹೀಗಾಗಿ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಚುಟು ಚುಟು ಅಂತ ಎಲ್ಲರ ಮನಸ್ಸನ್ನು ಗೆದ್ದ ಕನ್ನಡದ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಫಿಟ್ನೆಸ್ ನಲ್ಲಿ ಯಾವುದೇ ಏರು ಪೆರು ಮಾಡುವದಿಲ್ಲ. ಫಿಟ್ನೆಸ್ ಇಡುವ ಸಲುವಾಗಿ ಇವರು ದಿನನಿತ್ಯ ಯೋಗಾ ಪ್ರಾಣಾಯಾಮದ ಜೊತೆಗೆ ವ್ಯಾಯಾಮ ಸಹ ಮಾಡುತ್ತಾರೆ. ಅವರ ಶರೀರ ನೋಡಿದರೆ ಗೊತ್ತಾಗುತ್ತೆ ಅವರು ತಮ್ಮ ಶರೀರದ ಕುರಿತು ಎಷ್ಟೊಂದು ಕಾಳಜಿ ವಹಿಸುತ್ತಾರೆ ಅಂತ. ಆಶಿಕಾ ರಂಗನಾಥ್ ಅವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಆಶಿಕಾ ರಂಗನಾಥ್ ಅವರು ತಮ್ಮ ಸೌಂದರ್ಯ ಹಾಗೂ ಉತ್ತಮ ಶರೀರದ ರಹಸ್ಯ ಯೋಗಾ ಹಾಗೂ ಪ್ರಾಣಾಯಾಮ ಎಂದು ಹೇಳುತ್ತಾರೆ.

ವಿಡಿಯೋ ನೋಡಿ.

ಆಶಿಕಾ ರಂಗನಾಥ್ ಅವರ ಯೋಗಾಸನದ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ಅಂದರೆ ಇನ್ಸ್ಟಾಗ್ರಾಮ್ ನಲ್ಲಿ ಆಶಿಕಾ ರಂಗನಾಥ್ ಫ್ಯಾನ್ಸ್ ಕ್ಲಬ್ ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಬಹಳಷ್ಟು ಜನರು ವೀಕ್ಷಣೆ ಮಾಡಿ ಲೈಕ್ಸ್ ಸಹ ಮಾಡಿದ್ದಾರೆ.