Video; ಕಸ ತೊಟ್ಟಿಗೆ ದೂರದಿಂದಲೇ ಕಸ ಬಿಸಾಕಿದಳು ಮಹಿಳೆ; ಮರುಕ್ಷಣವೇ ಏನು ನಡೆಯಿತು ನೋಡಿ?

ನಮ್ಮ ಜನ ದೂರದಿಂದಲೇ ಕಸ ಬಿಸಾಕುವುದರಲ್ಲಿ ತುಂಬಾ ಎಕ್ಸ್ಪರ್ಟ್. ಬಿಸಾಕಿದ ಕಸ ಇನ್ನೊಬ್ಬರ ಮನೆಯ ಅಂಗಳದಲ್ಲಿ ಹೋಗಿ ಬೀಳಲಿ, ಅಥವಾ ಮನೆಯ ಮುಂದೆ ಹೋಗಿ ಬೀಳಲಿ, ಅಥವಾ ಕಸದ ತೊಟ್ಟಿಯಲ್ಲಿ ಬೀಳಲಿ. ಅದಕ್ಕೆ ಅವರು ತಲೆಕೆಡಿಸಿಕೊಳ್ಳುವವರಲ್ಲ. ಒಟ್ಟಿನಲ್ಲಿ ತಮ್ಮ ಮನೆಯ ಕಸ ಹೊರಗೆ ಒಗೆದರೆ ಆಯ್ತು. ಅದು ಹೋಗಿ ಎಲ್ಲಿ ಬೇಕಾದರೂ ಬೀಳಲಿ, ನಮಗೆ ಸಂಬಂಧಪಟ್ಟದ್ದಲ್ಲ ಎನ್ನುವ ಜನ ನಮ್ಮ ಜನ.

ಈ ರೀತಿಯ ಜನ ನಮ್ಮ ದೇಶದಲ್ಲಿ ಕಡಿಮೆ ಇಲ್ಲ. ಪ್ರಧಾನಿಯವರು 2014 ರಿಂದ ಸ್ವಚ್ಛ ಭಾರತ ಅಭಿಯಾನವನ್ನು ನಡೆಸಿ ಸೋತೆ ಹೋದರೂ ಆದರೆ ಸ್ವಚ್ಛತೆಯ ಸಂದರ್ಭದಲ್ಲಿ ನಾವು ಇನ್ನು ಅನೇಕ ಒಳ್ಳೆಯ ಸಂಗತಿಗಳನ್ನು ಕಲಿಯಬೇಕಾಗಿದೆ. ಅಂದಾಗ ಮಾತ್ರ ಮುಂಬರುವ ನಮ್ಮ ಪೀಳಿಗೆ ಕಸವನ್ನು ವಿಲೇವಾರಿ ಮಾಡುವುದರ ಬಗ್ಗೆ ಇನ್ನಷ್ಟು ಜಾಗೃತರಾಗುತ್ತಾರೆ.

ಇರಲಿ ಪ್ರಸ್ತುತ ಲೇಖನ ಇದೇ ಕಸಕ್ಕೆ ಸಂಬಂಧಪಟ್ಟ ಒಂದು ವಿಡಿಯೋ ಮೇಲೆ ಆಧಾರಿತವಾಗಿದೆ. ಈ ವಿಡಿಯೋದಲ್ಲಿ ಕಂಡು ಬಂದ ಒಂದೇ ಒಂದು ದೃಶ್ಯ ತುಂಬಾ ತಮಾಷೆಯಿಂದ ಕೂಡಿದೆ. ನಮ್ಮ ಜನ ಕಸದ ಚೀಲವನ್ನು ಸರಿಯಾಗಿ ಕಸದ ತೊಟ್ಟಿಯಲ್ಲಿ ಹಾಕುವುದೇ ಇಲ್ಲ. ಇವರು ತುಂಬಾ ಎಕ್ಸ್ಪರ್ಟ್ ನಂತೆ ದಾರಿಯಲ್ಲಿ ಹೋಗುತ್ತಲೇ ಕಸ ತೊಟ್ಟಿಯಲ್ಲಿ ಕಸದ ಚೀಲವನ್ನು ದೂರದಿಂದಲೇ ಎಸೆಯುತ್ತಾರೆ. ಹೀಗೆ ಮಹಿಳೆಯೊಬ್ಬಳು ಕಸದ ತೊಟ್ಟಿಯ ಮಗ್ಗುಲಿಂದ ನಡೆಯುತ್ತಿರುವಾಗಲೇ ಕಸದ ಚೀಲವನ್ನು ತೊಟ್ಟಿಯಲ್ಲಿ ಎಸೆಯುತ್ತಾಳೆ. ಹೀಗೆ ಎಸೆಯುವಾಗ ಕಸದ ತೊಟ್ಟಿಯಲ್ಲಿ ನಾಯಿಯೊಂದು ಕುಳಿತಿದ್ದು ಕಂಡುಬರುವುದಿಲ್ಲ. ಕಸದ ಚೀಲ ತೊಟ್ಟಿಯಲ್ಲಿ ಬಿದ್ದಕ್ಷಣವೇ ನಾಯಿಯು ಥಟ್ಟನೆ ಹೆದರಿ ಆಕೆಯ ತಲೆಯ ಮೇಲೆಯೇ ಜಿಗಿಯಬೇಕೆ? ಒಂದು ಕ್ಷಣ ಮಹಿಳೆಯು ಸಹ ತಬ್ಬಿಬ್ಬಾಗುತ್ತಾಳೆ. ಯಾವುದಕ್ಕೂ ಕಸದ ತೊಟ್ಟಿಯಲ್ಲಿ ಕಸ ಒಗೆಯುವಾಗ ಒಳಗೆ ನಾಯಿ ಮತ್ತು ಇತರ ಚಿಕ್ಕ ಪುಟ್ಟ ಪ್ರಾಣಿಗಳು ಇರುತ್ತವೆ ಎಂಬುದನ್ನು ಗಮನದಲ್ಲಿಡಿ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮದಲ್ಲಿ ಶೇರ್ ಮಾಡಲಾಗಿದ್ದು ಈ ತಮಾಷೆಯ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದ್ದು ಸುಮಾರು ಎರಡುವರೆ ಲಕ್ಷ ಜನರು ಮೆಚ್ಚುಗೆಯನ್ನು ವ್ಯಕ್ತ ಮಾಡಿದ್ದಾರೆ.