ಈ ಚೂಟಿ ಹುಡುಗಿಯು ಪ್ರತಿ ಪ್ರಶ್ನೆಗೆ ನೀಡುವ ಉತ್ತರ ಕೇಳಿ ತಂದೆಯ ಬಗ್ಗೆ ಹುಟ್ಟಿದ ಅಭಿಮಾನ ಅಷ್ಟಿಷ್ಟಲ್ಲ! ಆದರೆ ಕೊನೆಗೆ ಮಾತ್ರ ಶಾಕ್..!

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸಾವಿರಾರು ವಿಡಿಯೋಗಳಲ್ಲಿ ಪುಟ್ಟ ಮಕ್ಕಳ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಮಕ್ಕಳ ಮುಗ್ಧ ಮಾತುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಈ ಮಕ್ಕಳು ಏನೇ ಮಾಡಿದರೂ ನೋಡುಗರಿಗೆ ಬೇಸರ ಬರುವುದಿಲ್ಲ. ಮಕ್ಕಳ ನೃತ್ಯ, ನಟನೆ, ಯಾರ ಮುಲಾಜಿಲ್ಲದೆ ಧೈರ್ಯವಾಗಿ ಮಾತನಾಡುವ ಸ್ಟೈಲ್, ಆಟ ಹೀಗೆ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ದೃಶ್ಯ ತುಂಬಾ ಇಂಟರೆಸ್ಟಿಂಗ್ ಆಗಿರುತ್ತವೆ.

ಮಕ್ಕಳ ಬಿಂದಾಸ್ ವರ್ತನೆ ಯಾರಿಗೆ ಆಗಲಿ ತುಂಬಾ ಹಿಡಿಸುತ್ತದೆ. ಸದ್ಯ ಇಲ್ಲಿ ನೋಡಲಿರುವ ಒಂದು ವಿಡಿಯೋ ನಿಮಗೆ ಸರಿಯಾಗಿ ಶಾಕ್ ನೀಡುತ್ತದೆ. ವಿಡಿಯೋದ ಪ್ರಾರಂಭದಿಂದ ನೋಡುತ್ತಾ ಹೋದಂತೆ ಹುಡುಗಿಗೆ ತನ್ನ ತಂದೆ ಎಷ್ಟೊಂದು ಪ್ರಿಯನಿದ್ದಾನೆ ಎಂದು ಭಾವನೆ ಬರುತ್ತದೆ. ಆದರೆ ಕಟ್ಟ ಕಡೆಗೆ ಮಾತ್ರ ಒಮ್ಮೆಲೇ ಒಂದು ದೊಡ್ಡದಾದ ಬಾಂಬ್ ಒಗೆದುಬಿಡುತ್ತಾಳೆ. ಅದನ್ನು ಕೇಳಿದ ನಂತರ ವಿಡಿಯೋ ನೋಡುವ ವ್ಯಕ್ತಿಯ ತಲೆ ಗಿರ್ರ ಎನ್ನುತ್ತೆ.

ವಿಡಿಯೋದ ದೃಶ್ಯದಲ್ಲಿ ಯುವತಿಯು ಹುಡುಗಿಗೆ ಕೆಲವೊಂದು ಸಹಜವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ. ಈ ಪುಟ್ಟ ಹುಡುಗಿ ಯುವತಿ ಕೇಳುವ ಪ್ರಶ್ನೆಗೆ ತುಂಬಾ ಚೂಟಿಯಿಂದ ಅಷ್ಟೇ ಖಡಕ್ಕಾಗಿ ಉತ್ತರಿಸುತ್ತಾ ಹೋಗುತ್ತಾಳೆ. ನಿನಗೆ ಯಾರು ಸ್ನಾನ ಮಾಡಿಸುತ್ತಾರೆ? ನಿನಗೆ ತಿಂಡಿ ಯಾರು ತಿನಿಸುತ್ತಾರೆ? ನಿನ್ನ ತಲೆ ಯಾರು ಬಾಚುತ್ತಾರೆ? ನಿನ್ನ ಮುಖ ಯಾರು ತೊಳೆಯುತ್ತಾರೆ? ನಿನಗೆ ಡ್ರೆಸ್ ಯಾರು ತೊಡಿಸುತ್ತಾರೆ? ಎಂದು ಹೀಗೆಲ್ಲ ಪ್ರಶ್ನೆ ಕೇಳುತ್ತಿರುವಾಗ ಮಗು ಒಂದೊಂದೇ ಪ್ರಶ್ನೆಗಳಿಗೆ ತುಂಬಾ ಖಡಕ್ ಆಗಿ “ಅಪ್ಪ, ಅಪ್ಪ” ಎಂದು ಉತ್ತರಿಸುತ್ತಾ ಹೋಗುತ್ತಾಳೆ. ಕಟ್ಟ ಕಡೆಯದಾಗಿ ನಿನಗೆ ಯಾರು ಇಷ್ಟ? ಎಂದು ಪ್ರಶ್ನೆ ಕೇಳಿದಾಗ ಮಗು ಅಷ್ಟೇ ನಿರ್ಭಯದಿಂದ ಮತ್ತು ಮುಗ್ಧವಾಗಿ “ಅಮ್ಮ” ಎಂದು ಹೇಳಿಬಿಡುತ್ತಾಳೆ ಹಾಗೂ ನಗುತ್ತಾಳೆ. ಪಾಪ ಹೇಗಾಗಿರಬೇಡ ಆ ಅಪ್ಪನಿಗೆ?

ನೋಡಿ ಈ ಸಕ್ಕತ್ ವಿಡಿಯೋ…

 

View this post on Instagram

 

A post shared by benki memes (@benki.memes)

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಮೇಮ್ಸ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದ್ದು 2 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಪಡೆದಿದೆ.