ಆ ಆಟ ಈ ಆಟ ಏನು ಮಹಾ? ಈ ಯುವತಿಯರು ಆಡುವ ದೇಶಿ ಆಟ ಒಮ್ಮೆ ನೋಡಿ, ಇದಕ್ಕೆ ಬೇಕು ಸೊಂಟದಲ್ಲಿ ಫ್ಲೆಕ್ಸಿಬಿಲಿಟಿ!
ಭಾರತ ಸಾವಿರಾರು ವರ್ಷಗಳಿಂದ ಹಲವಾರು ಸಾಂಪ್ರದಾಯಿಕ ಆಟಗಳನ್ನು ಮತ್ತು ಕ್ರೀಡೆಗಳನ್ನು ಆಡುತ್ತಾ ಬಂದಿದೆ. ವಿಶೇಷವೆಂದರೆ ನಮ್ಮ ಭಾರತೀಯ ಆಟಗಳಿಗೆ ಹೆಚ್ಚಿನ ಸಲಕರಣೆಗಳು ಅಥವಾ ದೊಡ್ಡ ದೊಡ್ಡ ಮೈದಾನಗಳ ಅಗತ್ಯ, ಅವಶ್ಯಕತೆ ಇರುವುದಿಲ್ಲ. ಕೆಲವು ಸಾಂಪ್ರದಾಯಿಕ ಭಾರತೀಯ ಆಟಗಳನ್ನು ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಆಡಲಾಗುತ್ತದೆ ಅಥವಾ ಅದೇ ಆಟಗಳಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
ನಮ್ಮ ದೇಶ ಭಾರತ ವಿವಿಧ ರೀತಿಯ ಸಂಪ್ರದಾಯಗಳನ್ನು ಹೊಂದಿದ ಶ್ರೀಮಂತ ದೇಶವಾಗಿದೆ. ಈ ದೇಶದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ನಿಯಮಗಳ ಅಡಿಯಲ್ಲಿ ಬೇರೆ ಬೇರೆ ಆಟಗಳನ್ನು ಆಡಲಾಗುತ್ತದೆ. ನಮ್ಮ ದೇಶದ ಆಟಗಳು ಆಡಲು ಶಕ್ತಿಯ ಜೊತೆಗೆ ಯುಕ್ತಿಯ ಅವಶ್ಯಕತೆಯೂ ಇರುತ್ತದೆ.
ಹಳೆಯ ಕಾಲದಲ್ಲಿ ಹುಡುಗಿಯರ ಅಥವಾ ಮಹಿಳೆಯರ ಆಟಗಳಿಗೂ ವಿಶೇಷವಾದ ಮಹತ್ವವನ್ನು ನೀಡಲಾಗಿತ್ತು ಎಂದು ತಿಳಿದು ಬರುತ್ತದೆ. ಸದ್ಯ ಇದೇ ರೀತಿಯ ಮಹಿಳೆಯರ ಆಟಕ್ಕೆ ಸಂಬಂಧಿಸಿದ ಒಂದು ವಿಡಿಯೋ ನಿಮಗಾಗಿ ಈ ಲೇಖನದಲ್ಲಿ ತಂದಿದ್ದೇವೆ. ವಿಡಿಯೋದಲ್ಲಿ ಕಂಡು ಬರುವ ಈ ಆಟ ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ ಆಡುವ ಪ್ರಸಿದ್ಧ ಆಟವಾಗಿದೆ. ಈ ಆಟಕ್ಕೆ ಮರಾಠಿಯಲ್ಲಿ ‘ಕಂಬರ್ ಫುಗಡಿ’ (ಸೊಂಟದ ಫುಗಡಿ) ಎಂದು ಕರೆಯಲಾಗುತ್ತದೆ.
ಈ ಆಟವನ್ನು ವಿಶೇಷವಾಗಿ ಸೊಂಟದ ಮೂಲಕವೇ ಆಡಲಾಗುತ್ತದೆ. ಈ ಆಟವನ್ನು ಆಡುವಾಗ ಮುಖ್ಯವಾಗಿ ಎರಡು ಕೈಗಳನ್ನು ಕತ್ತರಿಯ ಸ್ವರೂಪದಲ್ಲಿ ನೆಲದ ಮೇಲಿಟ್ಟು ಸೊಂಟವನ್ನು ಬಳುಕಿಸಿ ಒಮ್ಮೆ ಎಡಕ್ಕೆ ಇನ್ನೊಮ್ಮೆ ಬಲಕ್ಕೆ ಮೂವ್ ಮೆಂಟ್ ಮಾಡಬೇಕಾಗುತ್ತದೆ. ಈ ಆಟವು ನೋಡಲು ತುಂಬಾ ಇಂಟರೆಸ್ಟಿಂಗ್ ಆಗಿದೆ. ಅಷ್ಟೇ ಇದನ್ನು ನಿಧಾನವಾಗಿ ಪ್ರಾಕ್ಟೀಸ್ ಮುಖಾಂತರವೇ ಮಾಡಬೇಕು.
ನೋಡಿ ಈ ಆಟದ ವಿಡಿಯೋ…
View this post on Instagram
ಪ್ರಸ್ತುತ ಈ ಸುಂದರವಾದ ಆಟವನ್ನು ಪ್ರದರ್ಶಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಮಿಸ್ ಪೂಜಾ9366 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ತಮ್ಮ ಕಮೆಂಟ್ ನಲ್ಲಿ ವ್ಯಕ್ತ ಮಾಡಿದ್ದಾರೆ.
ಒಬ್ಬ ಯೂಸರ್, ಈ ಆಟವನ್ನು ದಿನಾಲು ಆಡುತ್ತಿದ್ದರೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವ ಅವಶ್ಯಕತೆಯೇ ಇಲ್ಲ ಎಂದಿದ್ದಾನೆ. ಇನ್ನೊಬ್ಬ ಯೂಸರ್ ತುಂಬಾ ತಮಾಷೆಯಾಗಿ ಹೀಗೆ ಹೇಳುತ್ತಾನೆ, ಈಗಿನ ಹುಡುಗಿಯರು ಈ ರೀತಿ ಮಾಡಲು ಹೋದರೆ ಅವರ ದೇಹ ನಾಲ್ಕು ತುಣುಕುಗಳಾಗುತ್ತವೆ ಎಂದಿದ್ದಾನೆ.