ಅಕ್ಕಂದಿರರ ಜ್ಞಾನ ನೋಡಿ ಅದೆಷ್ಟು ಆಳವಾಗಿದೆ! ಮಿಸ್ ಮಾಡದೆ ಈ Video ನೋಡಿ ಗೊತ್ತಾಗುತ್ತೆ…

ಇಂಟರ್ನೆಟ್ ಯುಗದಲ್ಲಿ ವಿವಿಧ ರೀತಿಯ ಕಂಟೆಂಟ್ ಗಳನ್ನು ನೀಡುವ ಸೋಶಿಯಲ್ ಮೀಡಿಯಾ ನಿಜಕ್ಕೂ ಅದ್ಭುತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ವಿಡಿಯೋಗಳು ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತವೆ. ಇಲ್ಲಿ ಅಪ್ಲೋಡ್ ಮಾಡುವ ವಿಡಿಯೋಗಳಲ್ಲಿ ಕೆಲವು ತುಂಬಾ ಪ್ರಭಾವ ಬೀರುವಂತಹ ವಿಶೇಷ ವಿಡಿಯೋಗಳು ಇದ್ದರೆ, ಇನ್ನೂ ಕೆಲವು ವಿಡಿಯೋಗಳು ನೆಟ್ಟಿಗರಿಗೆ ನಗಿಸುವುದರಲ್ಲಿ ಜೋರಾಗಿರುತ್ತವೆ.

ಇತ್ತಿತ್ತಲಾಗಿ ಪ್ರ್ಯಾoಕ್ ಮಾಡುವ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಕಾಣುತ್ತಿವೆ. ಇನ್ನು ಕೆಲವರು ರಸ್ತೆಯಲ್ಲಿ ವಿವಿಧ ಜನರಿಗೆ ಭೇಟಿಯಾಗಿ ತುಂಬಾ ಫನ್ನಿ ಪ್ರಶ್ನೆಗಳನ್ನು ಕೇಳುತ್ತಾರೆ. ಅಂಥ ಫನ್ನಿ ಪ್ರಶ್ನೆಗಳಿಗೆ ನೀಡುವ ಉತ್ತರಗಳು ಸಹ ಅಷ್ಟೇ ಫನ್ನಿ ಆಗಿರುತ್ತವೆ. ಕ್ಯಾಮೆರಾದ ಮುಂದೆ ನಿಂತು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಕೆಲವರು ತುಂಬಾ ಸೀರಿಯಸ್ ಆಗಿ ತಪ್ಪಾದ ಉತ್ತರವನ್ನೇ ಕೊಟ್ಟು ಬಿಡುತ್ತಾರೆ. ಅದು ಅವರ ಗಮನಕ್ಕೂ ಬರುವುದಿಲ್ಲ. ನಂತರ ವಿಶ್ಲೇಷಿಸಿ ಹೇಳಿದಾಗ ಗೊತ್ತಾಗುತ್ತೆ ತಮ್ಮ ತಪ್ಪು.

ಸದ್ಯ ಒಂದು ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋದಲ್ಲಿ ಒಬ್ಬ ಯುವಕ ಕಾಲೇಜ್ ಹುಡುಗಿಯರಿಗೆ ಒಂದು ಸಿಂಪಲ್ ಪ್ರಶ್ನೆ ಕೇಳುತ್ತಾನೆ. ಆ ಪ್ರಶ್ನೆಗೆ ಉತ್ತರ ನೀಡಿ ನಂತರ ತಾವೇ ಪೇಚಾಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಈ ಹುಡುಗಿಯರು.

ಹುಡುಗ ತನ್ನ ಸಂದರ್ಶನದಲ್ಲಿ ಹುಡುಗಿಯರಿಗೆ ಒಂದೇ ಒಂದು ಪ್ರಶ್ನೆ ಕೇಳುತ್ತಾನೆ, ಅದೇನೆಂದರೆ ಮನೆ, ಮಂದಿರ ಮತ್ತು ಮಸೀದಿ ಈ ಮೂರು ಸ್ಥಳಗಳಲ್ಲಿ ಏಕಕಾಲಕ್ಕೆ ಬೆಂಕಿ ಹತ್ತಿದರೆ ಆಂಬುಲೆನ್ಸ್ ಮೊಟ್ಟ ಮೊದಲು ಬೆಂಕಿ ಆರಿಸಲು ಎಲ್ಲಿಗೆ ಹೋಗುತ್ತದೆ? ಅದಕ್ಕೆ ಈ ಹುಡುಗಿಯರು ಸ್ವಲ್ಪ ವಿಚಾರ ಮಾಡಿ ನಂತರ ತಮ್ಮ ಬುದ್ಧಿ ಶಕ್ತಿಯನ್ನು ಹೊರ ಹಾಕುತ್ತಾರೆ. ತಮ್ಮ ಉತ್ತರದಲ್ಲಿ ಆಂಬುಲೆನ್ಸ್ ನವರು ಬೆಂಕಿ ಆರಿಸುವ ಸಲುವಾಗಿ ಮೊದಲು ಮನೆಯ ಕಡೆಗೆ ಓಡಿ ಹೋಗುತ್ತಾರೆಂದು ಹೇಳುತ್ತಾರೆ.

ಅದಕ್ಕೆ ಸಂದರ್ಶನ ತೆಗೆದುಕೊಳ್ಳುವ ಯುವಕ ಹೇಳುತ್ತಾನೆ, ಬೆಂಕಿ ಆರಿಸುವ ಕೆಲಸ ಆಂಬುಲೆನ್ಸ್ ನವರು ಮಾಡುವದಿಲ್ಲ, ಆ ಕೆಲಸ ಫೈಯರ್ ಬ್ರಿಗೇಡ್ ನವರು ಮಾಡುತ್ತಾರೆ, ಎನ್ನುತ್ತಲೆ ಹುಡುಗಿಯರು, ತಾವು ತಪ್ಪು ಉತ್ತರ ನೀಡಿದ್ದು ಅರಿವಾಗಿ ತಲೆಚಚ್ಚಿಕೊಂಡು ಮುಖ ಮುಚ್ಚಿ ಕ್ಯಾಮೆರಾದ ಮುಂದೆ ನಗಲು ಶುರು ಮಾಡುತ್ತಾರೆ.

ನೋಡಿ ಈ ತಮಾಷೆಯ ವಿಡಿಯೋ…

 

View this post on Instagram

 

A post shared by Abhishek Mishra (@abhiboi15_)

ತಮಾಶೆಯ ಸಖತ್ ಪಂಚ ನೀಡುವ ಈ ವಿಶೇಷ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ abhiboi15 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದ್ದು 5 ಲಕ್ಷ 33 ಸಾವಿರ ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.