ತಮ್ಮ ಡುಪ್ಲಿಕೇಟ್ ನನ್ನು ನೋಡಿ ಸ್ವತಃ ವೀರೇಂದ್ರ ಸೆಹ್ವಾಗ್ ಅವರೇ ಹುಬ್ಬೇರಿಸಿದ್ದು! ಇನ್ನು ಆಕ್ಷನ್ ಅಂತೂ ಫುಲ್ ಸಖತ್.

ಕ್ರಿಕೆಟ್ ನಲ್ಲಿ ಅನೇಕ ಆಟಗಾರರು ಬರುತ್ತಾರೆ ಹೋಗುತ್ತಾರೆ. ಅವರಲ್ಲಿ ರಸಿಕರ ಮನದಲ್ಲಿ ಸದಾಕಾಲ ಮನೆ ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಈ ಭಾಗ್ಯ ಕೇವಲ ಕೆಲವೇ ಆಟಗಾರರಿಗೆ ಒಲಿಯುತ್ತದೆ ಎಂದರೆ ತಪ್ಪಾಗುವುದಿಲ್ಲ. ಅಂಥವರಲ್ಲಿ ಕೆಲವು ಉದಾಹರಣೆಗಳನ್ನು ಹೇಳಬೇಕೆಂದರೆ, ಸಚಿನ್, ದ್ರಾವಿಡ್, ಗಂಗೂಲಿ, ಯುವರಾಜ್, ಸೆಹ್ವಾಗ್, ವಿರಾಟ್ ಮತ್ತು ಸ್ಪೆಷಲ್ ಧೋನಿ ಅಂತೆಲ್ಲ ಹೇಳಬಹುದು. ವೀರೇಂದ್ರ ಸೆಹ್ವಾಗ್ ಅವರೂ ಸಹ ಅನೇಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಇವರೆಲ್ಲ ಬೆಳಕಿಗೆ ಬಂದ ಹಾಗೆ ಇವರ ಡುಪ್ಲಿಕೇಟ್ ಗಳು ಸಹ ಆವರವರ ಕಾಲದಲ್ಲಿ ( ಕರಿಯರ್ ನ ಉತ್ತುಂಗದಲ್ಲಿದ್ದಾಗ) ಬೆಳಕಿಗೆ ಬಂದರು, ಮತ್ತು ಫೇಮಸ್ ಸಹಿತ ಆದರು. ಹಿಂದಿ ಫೇಮಸ್ ಕಾಮಿಡಿ ಶೋ ಕಪಿಲ್ ಶರ್ಮ ಅವರ ಕಾರ್ಯಕ್ರಮದಲ್ಲಿ ವೀರೇಂದ್ರ ಸೆಹ್ವಾಗ್ ಅವರ ಡುಪ್ಲಿಕೆಟ್ ಒಬ್ಬನು ಬಂದು ಶೋ ನಲ್ಲಿ ಧಮಾಕಾ ಮಾಡಿದ್ದು ಇಲ್ಲಿ ನೋಡಬಹುದು.

ಕಪಿಲ್ ಶರ್ಮ ಕಾಮಿಡಿ ಶೋ ನಲ್ಲಿ ಸೆಹ್ವಾಗ್ ಅವರ ಈ ಡುಪ್ಲಿಕೇಟ್ ಸೆಹ್ವಾಗ್ ರಂತೆ ಆಕ್ಟಿಂಗ್ ಮಾಡಿ ಹೊಟ್ಟೆ ಕಡಿಯುವಂತೆ ನಗಿಸಿದ್ದಾರೆ. ಸ್ವತಃ ವಿರೂ ಅವರೇ ತಮ್ಮ ಡುಪ್ಲಿಕೇಟ್ ನನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ಎನ್ನಬಹುದು. ಅಷ್ಟೊಂದು ಸಮಂಜಸವಾದ ಅಭಿನಯ ಇಲ್ಲಿ ಮಾಡಿದ್ದಾರೆ. ಸೆಹ್ವಾಗ್ ಅವರು ಬ್ಯಾಟಿಂಗ್ ಸಂದರ್ಭದಲ್ಲಿಯ ಸ್ಟೈಲ್ ಈ ಡುಪ್ಲಿಕೆಟ್ ಸೆಹ್ವಾಗ್ ಪರ್ಫೆಕ್ಟ್ ಆಗಿ ಮಾಡಿ ತೋರಿಸಿದ್ದಾರೆ. ಈ ಶೋ ನ ಹೋಸ್ಟ್ ಕಪಿಲ್ ಶರ್ಮ ಅಂತೂ ಬಿದ್ದು ಬಿದ್ದು ನಗುತ್ತಿದ್ದರು.

ನೀವು ನೋಡಿ ವಿಡಿಯೋದಲ್ಲಿಯ ಈ ಜೀನಿಯಸ್ ನನ್ನು…

 

View this post on Instagram

 

A post shared by Umang Srivastava (@umang_r93)

ಪ್ರಸ್ತುತ ಈ ದೃಶ್ಯವನ್ನು ಇನ್ಸ್ಟಾಗ್ರಾಮ್ ನಲ್ಲಿ umang_r93 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.6 ಮಿಲಿಯನ್ ವರೆಗೆ ವೀಕ್ಷಣೆಯನ್ನು ಪಡೆದಿದೆ. ಇನ್ನು ಮೆಚ್ಚುಗೆಯ ಬಗ್ಗೆ ಹೇಳಬೇಕಾದರೆ, 1 ಲಕ್ಷ 33 ಸಾವಿರ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ಕಪಿಲ್ ಶರ್ಮ ಶೋನಲ್ಲಿ ‘ಇಲ್ಲಿಯವರೆಗಿನ ಎಲ್ಲಕ್ಕೂ ಟ್ಯಾಲೆಂಟ್ ಪರ್ಸನ್ ಈತನೇ’ ಎಂದು ಒಬ್ಬನು ಕಾಮೆಂಟ್ ಮಾಡಿದ್ದಾನೆ.