ವರನ ಮದುವೆಯ ಖುಷಿ ನೋಡ್ರಿ; ಮದುಮಗ ತನ್ನ ಮದುವೆಯ ಖುಷಿಯಲ್ಲಿ ಈ ರೀತಿ ತೇಲಾಡಿದ್ದು ನೀವೆಲ್ಲೂ ನೊಡಲಿಕ್ಕಿಲ್ಲ.

ಮೊಬೈಲ್ ನಲ್ಲಿ ಕೆಲವೊಂದು ಸೈಟ್ಗಳನ್ನು ಸ್ಕ್ರೋಲ್ ಮಾಡುತ್ತಾ ಹೋದಂತೆ ಹೋದಂತೆ ಅನೇಕ ವಿಶೇಷ ಕಂಟೆಂಟ್ ಗಳು ನೋಡಲು ಸಿಗುತ್ತವೆ. ಇಂತಹ ಈ ಕಂಟೆಂಟ್ ಗಳು ಕೆಲವೊಮ್ಮೆ ತುಂಬಾ ನಕ್ಕು ನಗಿಸುತ್ತವೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಮದುವೆಯ ವಿಡಿಯೋಗಳಂತೂ ಎಲ್ಲರೂ ನೋಡಿಯೇ ನೋಡುತ್ತಾರೆ.

ಅನೇಕ ಮದುವೆಗಳಲ್ಲಿ ಆಕಸ್ಮಿಕವಾಗಿ ಕೆಲವೊಂದು ವಿಶೇಷ ಘಟನೆಗಳು ಜರುಗುತ್ತವೆ. ಅಂತ ದೃಶ್ಯಗಳು ಮೊದಲೇ ತಯಾರಾಗಿ ಕುಳಿತ ಕ್ಯಾಮೆರಾ ಮ್ಯಾನ್ ಗಳ ಕ್ಯಾಮೆರಾದಲ್ಲಿ ಸೆರೆಯಾಗಿ ಬಿಡುತ್ತವೆ. ನಂತರ ಅವು ಸಾಮಾಜಿಕ ಜಾಲತಾಣದಲ್ಲಿ ಬರಲು ಸಮಯವೇ ಬೇಕಾಗುವುದಿಲ್ಲ.

ಇಲ್ಲಿಯವರೆಗೆ ಮದುವೆ ಪ್ರಸಂಗಗಳಲ್ಲಿ ನಡೆದ ಅನೇಕ ರೀತಿಯ ನಕ್ಕು ನಗಿಸುವ ವಿಡಿಯೋಗಳನ್ನು ನೋಡಿರಬಹುದು. ಆದರೆ ಸದ್ಯ ಇಲ್ಲಿ ನೋಡುವ ವಿಡಿಯೋ ಮಾತ್ರ ಸಂಪೂರ್ಣವಾಗಿ ಭಿನ್ನವಾಗಿದೆ. ಅನೇಕ ಮದುವೆಗಳಲ್ಲಿ ವಧು-ವರರು ಕೂಡಿಕೊಂಡು ನೃತ್ಯ ಮಾಡಿದ್ದನ್ನು, ಅಥವಾ ಬೇರೆ ಇನ್ನೇನಾದರೂ ಮಾಡಿದ ದೃಶ್ಯಗಳನ್ನು ನೋಡಿದ್ದೀರಿ. ಆದರೆ ಈ ವಿಡಿಯೋದಲ್ಲಿ ವರ ಅಕ್ಷರಶಃ ಹುಚ್ಚನಂತೆ ವರ್ತಿಸಿದ್ದಾನೆ.

ವರನಿಗೆ ತನ್ನ ಮದುವೆಯ ಬಗ್ಗೆ ಇಲ್ಲಿ ಬಾನೆತ್ತರದಷ್ಟು ಖುಷಿಯಾಗಿದ್ದನ್ನು ನೋಡಬಹುದು. ವಧು ಸುಮ್ಮನೆ ಕುಳಿತಿದ್ದಾಳೆ. ಆದರೆ ವರ ಮಾತ್ರ ತನ್ನ ಈ ಖುಷಿಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಮದುವೆ ಮಂಟಪದಲ್ಲಿ ಎಲ್ಲರ ಮುಂದೆ ಒಂದೇ ಸಮನೆ ಕುಣಿದು ಕುಪ್ಪಳಿಸುತ್ತಿದ್ದಾನೆ. ನಿಜಕ್ಕೂ ಆತ ಹೃದಯದಿಂದ ಇಲ್ಲಿ ಖುಷಿಪಟ್ಟಿದ್ದು ಕಂಡುಬರುತ್ತದೆ.

ಮೊದಲು ಈ ವಿಡಿಯೋ ನೋಡಿ…

 

View this post on Instagram

 

A post shared by S P Bhil (@mnraj_bai)

ಪ್ರಸ್ತುತ ತಮಾಷೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ, ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. mnraj_bai ಹೆಸರಿನ ಐಡಿಯಿಂದ ಶೇರ್ ಮಾಡಲಾದ ಈ ವಿಡಿಯೋ ಇಲ್ಲಿಯವರೆಗೆ 4.3 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 1 ಲಕ್ಷ 85 ಸಾವಿರ ಜನರು ಈ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ತುಂಬಾ ವಿಶೇಷವಾಗಿ ಕಮೆಂಟ್ ರೂಪದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ನೆಟ್ಟಿಗ ತನ್ನ ಪ್ರತಿಕ್ರಿಯೆಯಲ್ಲಿ ಇವನ ಮದುವೆ ಮಾಡಬೇಡಿ, ಮೊದಲು ಡಾಕ್ಟರ್ ಕಡೆಗೆ ಒಯ್ಯುವ ವ್ಯವಸ್ಥೆ ಮಾಡಿ ಎಂದಿದ್ದಾನೆ. ಇನ್ನೊಬ್ಬ ಯೂಸರ್ “ಲಾಸ್ಟ್ ಡೇ ಆಫ್ ಹ್ಯಾಪಿನೆಸ್” ಎಂದಿದ್ದಾನೆ.