ಅದಕ್ಕೆ ಹೇಳೋದು ಸಿಟ್ಟಿನಲ್ಲಿ ಯಾವುದೇ ನಿರ್ಧಾರ ತಗೆದುಕೊಳ್ಳಬಾರದು ಅಂತ, ಸಿಟ್ಟಿನಲ್ಲಿ ಈ ಹೆಬ್ಬಾವು ಮಾಡಿದ್ದೇನು ಅಂತ ವೀಡಿಯೋದಲ್ಲಿ ನೋಡಿ!!

ಕೆಲವೊಂದು ಫೋಟೋಗಳು ಅಥವಾ ಕೆಲವು ದೃಶ್ಯಗಳು ನಿಜಕ್ಕೂ ಊಹೆಗೆ ಮೀರಿದ್ದು ಅಥವಾ ನಾವು ಊಹೆಗೆ ನಿಲುಕದ್ದು ಎಂದೇ ಹೇಳಬಹುದು ಎನ್ನುವಂತೆ ಕಾಣುತ್ತದೆ. ಇಂತಹ ದೃಶ್ಯಗಳು ಕೂಡಾ ಅಪರೂಪಕ್ಕೆ ನಮಗೆ ಕಾಣುತ್ತದೆ. ಆಗ ಆ ದೃಶ್ಯಗಳನ್ನು ನಾವು ಜಾಣ್ಮೆಯಿಂದ ಕ್ಯಾಮೆರಾ ಸಹಾಯದಿಂದ ಸೆ ರೆ ಹಿಡಿದರೆ ಅದು ಕೂಡಾ ಒಂದು ಅದ್ಭುತವೇ ಆಗಿ ಬಿಡುತ್ತದೆ. ಇಂತಹುದೊಂದು ಅದ್ಭುತವಾದ, ಊಹೆಗೂ ನಿಲುಕದ ಸನ್ನಿವೇಶವನ್ನು ಒಬ್ಬ ವ್ಯಕ್ತಿ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.

ವೀಡಿಯೋ ಒಂದನ್ನು ನೋಡುವಾಗ ಅದ್ಭುತ ಅನುಭವ ನಿಮಗೆ ಆಗಬೇಕು, ಮೈ ಜುಂ ಎನಿಸಬೇಕು ಕುತೂಹಲವನ್ನು ಕೆರಳಿಸಿ ಓ ಮೈ ಗಾಡ್ ಎಂದು ಉದ್ಗರಿಸಬೇಕಾದರೆ ಅದೊಂದು ನಿಜಕ್ಕೂ ಅತ್ಯದ್ಭುತ ವೀಡಿಯೋ ಆಗಿರಬೇಕು. ಇಂತಹ ವೀಡಿಯೋಗಳು ಸಿನಿಮಾಗಳ ದೃಶ್ಯಗಳಲ್ಲೋ, ಸ್ಪೆಶಲ್ ಎಫೆಕ್ಟ್ ನೀಡಿ ಜಾದೂ ಸೃಷ್ಟಿಸಿದ ದೃಶ್ಯಗಳಲ್ಲಿ ನಾವು ನೋಡಬಹುದು. ಆ ಸನ್ನಿವೇಶವನ್ನು ನೋಡುವಾಗ ಉತ್ಕಂಟತೆಯು ನಮ್ಮನ್ನು ಹುಚ್ಚೆಬ್ಬಿಸಿ ಬಿಡುತ್ತದೆ.

ಅಂತಹ ವೀಡಿಯೋಗಳು ಅಪರೂಪಕ್ಕೊಮ್ಮೆ ನಮಗೆ ನೋಡಲು ಸಿಗುತ್ತದೆ‌. ಅಲ್ಲದೇ ಅವು ಇಡೀ ಜಗತ್ತನ್ನೇ ತಮ್ಮ ಕಡೆ ಸೆಳೆದು, ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿ ಬಿಡುತ್ತವೆ. ಈಗ ನಾವು ಹೇಳಲು ಹೊರಟಿರುವ ವೀಡಿಯೋ ಕೂಡಾ ಒಂದು ಅಂತಹುದೇ ಅದ್ಭುತವಾದ ವೀಡಿಯೋ. ಬಹುಶಃ ನೋಡಿದ ಮೇಲೆ ನೀವು ಕೂಡಾ ಕೊನೆಗೆ ಹೌದು ಎನ್ನಲೇಬೇಕಾದಂತಹ ವೀಡಿಯೋ ಇದು.

ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಹೊಲದಲ್ಲಿ ಲೇವಲ್ ಮಾಡುವ ಮಷಿನ್ ನಿಂದ ಹೊಲ ಸಮ ಮಾಡುವಾಗ ಅದರ ಕೆಳಗಡೆ ಒಂದು ಹೆಬ್ಬಾವು ಸಿಲುಕಿಕೊಂಡು ಒದ್ದಾಡುತ್ತಿರುತ್ತದೆ. ಅದು ಸಿಕಿಕೊಂಡಿರುವ ಬಗೆ ಹೇಗೆಂದರೆ ತನ್ನ ಬಾಲ ಮಷಿನ್ ಮೇಲ್ಭಾಗದಲ್ಲಿ ಮತ್ತು ಬಾಯಿ ಮಷಿನ್ ನ ಕೆಳಭಾಗದಲ್ಲಿ ಸಿಲುಕಿರುತ್ತದೆ. ಹೀಗಾಗಿ ಅದು ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ. ಆದರೆ ಪ್ರಯತ್ನ ಮಾಡುವಾಗ ಅಲ್ಲಿ ಬೆರೆನೆ ಸನ್ನಿವೇಶ ನಡೆಯುತ್ತದೆ. ಅದೇನೆಂದರೆ ಹಾವು ತನ್ನ ಬಿಡಿಸಿಕೊಳ್ಳಲು ಅಲುಗಾಡಿದಾಗ ಅದರ ಬಾಲ ಸಹ ಅಲುಗಾಡುತ್ತದೆ ಆಗ ಈ ಹಾವು ತನ್ನನ್ನು ಬೇರೆ ಹಾವು ಅಟ್ಯಾಕ್ ಮಾಡಿದೆ ಅಂದುಕೊಂಡು ತನ್ನ ಬಾಲಕ್ಕೆ ನೇರವಾಗಿ ಕಚ್ಚಲು ಹೋಗುತ್ತದೆ. ಹೀಗೆ ಎರಡು ಬಾರಿ ಮಾಡುತ್ತದೆ. ಅದಕ್ಕೆ ಅನ್ನೋದು ಸಿಟ್ಟಿನಲ್ಲಿ ಮಾಡುವ ಕಾರ್ಯದ ಮೇಲೆ ಅರಿವು ಇರಲಿ ಅಂತ. ಈ ಹಾವು ಸಹ ಸಿಟ್ಟಿನಲ್ಲಿ ತನ್ನ ಬಾಲವನ್ನೇ ಮರೆತು ಬೇರೆ ಹಾವು ಎಂದು ಅದರ ಮೇಲೆ ಅಟ್ಯಾಕ್ ಮಾಡುತ್ತದೆ.

ನೋಡಿ ಈ ವೀಡಿಯೋ.

 

View this post on Instagram

 

A post shared by Vidas no Pantanal (@vidasnopantanal)

ವಿಚಿತ್ರ ಹಾವಿನ ವೀಡಿಯೋ ಸೋಶಿಯಲ್ ಮಿಡಿಯಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋ ಸುಮಾರು ಹತ್ತು ಮಿಲಿಯನ್ ರಷ್ಟು ವೀಕ್ಷಣೆ ಪಡಿದಿದ್ದು, ಐದು ಲಕ್ಷಕ್ಕೂ ಹೆಚ್ಚು ಲೈಕ್ ಸಹ ಪಡೆದುಕೊಂಡಿದೆ.