Special video; ಪ್ರಧಾನಿ ಯಾರಾಗಬೇಕು? ಎಂದು ಕೇಳಿದ್ದಕ್ಕೆ ರಾಮನಗರದ ಅಜ್ಜ ನೀಡಿದ ಉತ್ತರ ಕೇಳಿ, “ಸೂಪರ್ ಅಜ್ಜಾ” ಎನ್ನುತ್ತೀರಿ!

ಈ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಯಾರು ಯಾವಾಗ ಫೋಕಸ್ ನಲ್ಲಿ ಬರುತ್ತಾರೆ ಹೇಳಲು ಸಾಧ್ಯವಿಲ್ಲ. ಇಲ್ಲಿ ಬರೀ ಯುವಕರ ಯುವತಿಯರ ಆಟವೇ ನಡೆಯುತ್ತದೆ ಎಂದು ತಿಳಿಯಬೇಡಿ. ಹಿರಿಯರು ಸಹ ಒಮ್ಮೊಮ್ಮೆ ಎಲ್ಲರ ತಲೆಯ ಮೇಲೆ ಹಾರುತ್ತಾರೆ.

ಈ ಸೋಶಿಯಲ್ ಮೀಡಿಯಾ ಜಗತ್ತೇ ಹಾಗಿದೆ. ಸ್ವಲ್ಪ ಏನಾದರೂ ವಿಶೇಷವಾದ ಕಂಟೆಂಟ್ ಇದ್ದರೆ ಸಾಕು ದಿನ ಬೆಳಗಾಗುವುದರಲ್ಲಿ ಎಲ್ಲ ಕಡೆಗೆ ಹೋಗಿ ಮುಟ್ಟಿರುತ್ತದೆ. ಇನ್ನು ವಿಶೇಷವಾದ ರೋಚಕತೆ ತುಂಬಿದ ವಿಡಿಯೋ ದೃಶ್ಯವಿದ್ದರೆ ಮುಗಿದೇ ಹೋಯಿತು. ಆ ದೃಶ್ಯ ಮತ್ತಷ್ಟು ವೇಗವಾಗಿ ವೈರಲ್ ಆಗುವುದು ಖಚಿತ.

ಸದ್ಯ ಸೋಶಿಯಲ್ ಮೀಡಿಯಾದ ಫೇಮಸ್ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಪ್ರಸ್ತುತ ಈ ವಿಡಿಯೋ ranna _humsa ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಸಖತ್ತಾಗಿರುವ ಕಾರಣದಿಂದಾಗಿ ಇಲ್ಲಿಯವರೆಗೆ 4.7 ಮಿಲಿಯನ್ ಗಳವರೆಗೆ ವೀಕ್ಷಣೆಯನ್ನು ಪಡೆದಿದೆ. ಹಾಗೂ ಸುಮಾರು 5 ಲಕ್ಷಗಳವರೆಗೆ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯ ಸೂಪರ್ ಆಗಿದೆ. ವ್ಯಕ್ತಿಯೊಬ್ಬ ಅಜ್ಜನ ಸಂದರ್ಶನ ತೆಗೆದುಕೊಳ್ಳುತ್ತಿದ್ದಾನೆ. ತನ್ನ ಸಂದರ್ಶನದಲ್ಲಿ ವ್ಯಕ್ತಿಯು ಅಜ್ಜನಿಗೆ, ಪ್ರಧಾನಮಂತ್ರಿ ಯಾರಾಗಬೇಕು? ಮೋದಿಯೊ ಅಥವಾ ರಾಹುಲ್ ಗಾಂಧಿ? ಎಂದು ಕೇಳುತ್ತಾನೆ. ಅದಕ್ಕೆ ಅಜ್ಜಾ, ಯಾರೇ ಆಗಲಿ ಅವರವರ ಹಣೆಬರಹ ಎಂದು ಹಿರಿಯರಂತೆ ಸಮಜಾಯಿಸಿ ನೀಡುತ್ತಾನೆ. ನಂತರ ಸಂದರ್ಶನ ತೆಗೆದುಕೊಳ್ಳುವ ವ್ಯಕ್ತಿ ಮತ್ತೊಂದು ಪ್ರಶ್ನೆ ಹಾಕುತ್ತಾ, ನಿಮಗೆ ಯಾರು ಇಷ್ಟ? ಎಂದು ಕೇಳುತ್ತಾನೆ. ಅದಕ್ಕೆ ಅಜ್ಜ (ಮೋದಿ ಮತ್ತು ಗಾಂಧಿ ಗೊಡವೆಯನ್ನೇ ಬಿಟ್ಟು) ತುಂಬಾ ಮಾರ್ಮಿಕವಾಗಿ, ನಮಗೆ ನಮ್ಮ ಹೆಂಗಸರೇ ಇಷ್ಟ ಎಂದು ಹೇಳಿ ಬಿಡುತ್ತಾನೆ.

ನೋಡಿ ಈ ಅಜ್ಜನ ಸೂಪರ್ ವಿಡಿಯೋ…

 

View this post on Instagram

 

A post shared by R~H💃 (@ranna_humsa)

ಇನ್ನು ಕಮೆಂಟ್ಗಳ ಬಗ್ಗೆ ಹೇಳುವುದಾದರೆ ನೆಟ್ಟಿಗರು ತುಂಬಾ ಭರ್ಜರಿಯಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಯೂಸರ್, “ಇಷ್ಟು ವರ್ಷ ಆದರೂ ತನ್ನ ಹೆಂಡತಿಯನ್ನು ಇನ್ನುವರಿಗೆ ಪ್ರೀತಿಸುತ್ತಾನೆ ಎಂದರೆ, ಅಜ್ಜನ ಹೆಂಡತಿ ನಿಜವಾಗಿಯೂ ಪುಣ್ಯವಂತಳು” ಎಂದಿದ್ದಾನೆ. “ನನಗೂ ನನ್ನ ಗಂಡ ತುಂಬಾ ಇಷ್ಟ ಅಜ್ಜ” ಎಂದು ನೆಟ್ಟಿಗಳೊಬ್ಬಳು ತುಂಬಾ ಕ್ಯೂಟಾಗಿ ಕಮೆಂಟ್ ಮಾಡಿದ್ದಾಳೆ.