3D ರಂಗೋಲಿ ಮೂಲಕ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಗೌರವ ಸಲ್ಲಿಸಿದ ಯುವತಿ; ವಿಡಿಯೋ ವೈರಲ್!

ಬಾಲಿವುಡ್ ಆಕ್ಟರ್ ಸುಶಾಂತ್
ಸಿಂಗ್ ರಜಪೂತ್ ಅವರು ತಮ್ಮದೇ ಆದ ಶೈಲಿ ಹಾಗೂ ಚಿತ್ರಗಳಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅವರ ಮೃ’ತ್ಯು ಜನರನ್ನು ತುಂಬಾ ದುಃಖದಲ್ಲಿ ನೂಕಿದಂತಾಗಿದೆ. ಸುಶಾಂತ್ ಅವರು ತಮ್ಮ 34 ನೇ ವಯಸ್ಸಿನಲ್ಲಿಯೇ ಇಹ’ಲೋಕವನ್ನು ತ್ಯಜಿಸಿದರು. ಕಳೆದ 14 ನೇ ತಾರೀಖಿನಂದು ಸುಶಾಂತ್ ಅವರು ತಮ್ಮ ಮನೆಯಲ್ಲಿಯೇ ನೇ’ಣಿಗೆ ಶರಣಾಗಿ ತಮ್ಮ ಜೀವನದ ಪಯಣ ಮುಗಿಸಿದರು. ಸುಶಾಂತ್ ಅವರ ಈ ದುಃಖದ ಘಟನೆಯ ಕುರಿತು ಅವರ ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಕೆಲವು ದಿವಸಗಳ ಹಿಂದೆ ಶಿಖಾ ಶರ್ಮಾ ಎಂಬ ಕಲೆಗಾರ್ತಿ ಸುಶಾಂತ್ ಅವರಿಗೆ ಬೇರೆ ರೂಪದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾಳೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದಾಗ ಇಂದು ಆ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಅದೇನೆಂಬುದು ತಿಳಿದುಕೊಳ್ಳಲು ಮುಂದೆ ಓದಿ.

ಶಿಖಾ ಶರ್ಮಾ ಇವರ ವಿಡಿಯೋ ದಲ್ಲಿ ಸುಶಾಂತ ಸಿಂಗ್ ರಜಪೂತ್ ಅವರ 3ಡಿ ರಂಗೋಲಿ ತಗೆದು ಅದರ ಹತ್ತಿರ ಕುಳಿತುಕೊಂಡಂತೆ ಶಿಖಾ ಶರ್ಮಾ ಕಾಣುತ್ತಿದ್ದಾರೆ. 3d ರಂಗೋಲಿಯಲ್ಲಿ ಸುಶಾಂತ್ ಅವರು ಕುಳಿತುಕೊಂಡು ಮುಗುಳ್ನಗೆಯಿಂದ ಬೀರಿದ್ದು ಕಾಣಬಹುದು. ಶಿಖಾ ಶರ್ಮಾ ಅವರು ಸುಶಾಂತ್ ರಜಪೂತರ ರಂಗೋಲಿಯ ವಿಡಿಯೋವನ್ನು ಶೇರ್ ಮಾಡುವಾಗ ಹೀಗೆ ಬರೆದಿದ್ದಾರೆ, ‘ ಸುಶಾಂತ್ ಅವರಿಗೆ ನನ್ನ ಶ್ರದ್ಧಾಂಜಲಿ, ನಮ್ಮ ಹೃದಯದಲ್ಲಿ ನೀವು ಸದಾ ಜೀವಂತವಾಗಿರುವಿರಿ ಸರ್”. ಶಿಖಾ ಶರ್ಮಾ ಅವರ ಈ ವಿಡಿಯೋವನ್ನು ಕುರಿತು ಫ್ಯಾನ್ಸ್ ಕೂಡಾ ತುಂಬಾ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಅವರ ರಂಗೋಲಿಯ ಕುರಿತು ತುಂಬಾ ಹೊಗಳುತ್ತಿದ್ದಾರೆ. ನಿಮಗಿದು ತಿಳಿದಿರಲಿ ಸುಶಾಂತ್ ಸಿಂಗ್ ರಜಪೂತ್ ಅವರ ನಿ’ಧನ ದ ನಂತರ ಅವರ ಫ್ಯಾನ್ಸ್ ಗಳು ಸೋಶಿಯಲ್ ಮೀಡಿಯಾ ದಲ್ಲಿ ತನಿಖೆ ನಡೆಸುವ ಬಗ್ಗೆ ಸಿಬಿಐ ಗೆ ಒತ್ತಾಯಿಸುತ್ತಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರು ಟಿವಿ ಸೀರಿಯಲ್ ‘ಕಿಸ್ ದೇಶ ಮೇ ಹೈ ಮೇರಾ ದಿಲ್’ ನಲ್ಲಿ ತಮ್ಮ ಆಕ್ಟಿಂಗ್ ಕರಿಯರ್ ಆರಂಭಿಸಿದ್ದರು. ಇದರ ನಂತರ ಸುಶಾಂತ್ ಸಿಂಗ್ ರಜಪೂತ್ ಅವರು ‘ಪವಿತ್ರ ರಿಶ್ತಾ’ ಎಂಬ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ವಹಿಸಿದರು. ಆ ಪಾತ್ರಕ್ಕೆ ಅಭಿಮಾನಿಗಳಿಂದ ತುಂಬಾ ಮೆಚ್ಚುಗೆಯೂ ಸಹ ಪಡೆದರು. ಇದರ ನಂತರ ಈ ಆಕ್ಟರ್ ‘ಜರಾ ನಚಕೆ ದಿಖಾ’ ಮತ್ತು ‘ಝಲಕ್ ದಿಖಲಾ ಜಾ’ ದಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಭಿಮಾನಿಗಳಿಂದ ತುಂಬಾ ಮೆಚ್ಚುಗೆ ಪಡೆದರು. ಸುಶಾಂತ್ ಸಿಂಗ್ ರಾಜಪುತ್ ಅವರು ‘ ಕಾಯ್ ಪೋ ಚೆ’ ಈ ಚಿತ್ರದ ಮುಖಾಂತರ ಬಾಲಿವುಡ್ ಫೀಲ್ಮಿ ದುನಿಯಾದಲ್ಲಿ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ‘ಶುದ್ಧ ದೇಸಿ ರೋಮ್ಯಾನ್ಸ್’, ,ಸೋನ್ ಚಿರೈಯಾ’, ‘ಎಂ ಎಸ್ ಧೋನಿ: ದ ಅನ್’ಟೋಲ್ಡ್ ಸ್ಟೋರಿ’ ದಂತಹ ಮುಂತಾದ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.