Video; ವಿಸ್ಮಯ: ಚಿಕ್ಕ ಹುಳವಾದರೂ ತನ್ನ ಮನೆಯ ಸುರಕ್ಷೆಯ ಬಗ್ಗೆ ತೆಗೆದುಕೊಂಡ ಕಾಳಜಿ ನೋಡಿ.
ಜಗತ್ತು ವಿಸ್ಮಯಗಳ ಗೂಡಾಗಿದೆ. ಇಲ್ಲಿ ಬದುಕುವ ಪ್ರತಿಯೊಂದು ಜೀವಿಯಲ್ಲಿ ಒಂದೊಂದು ಆಶ್ಚರ್ಯ, ಕಲೆ ಅಡಗಿದೆ. ಅವುಗಳನ್ನು ಸಮೀಪದಿಂದ ವೀಕ್ಷಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸದ್ಯ ನಿಮ್ಮನ್ನು ಬೆರಗುಗೊಳಿಸುವ ಹುಳದ ಮನೆಯೊಂದು ಇಲ್ಲಿ ನೋಡಬಹುದು.
ಈ ವಿಡಿಯೋದಲ್ಲಿ ಚಿಕ್ಕ ಹುಳ ತನ್ನ ಗೂಡಿಗೆ ಯಾವ ರೀತಿ ರಕ್ಷಿಸುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು. ಈ ವಿಡಿಯೋ ದೃಶ್ಯದಲ್ಲಿ ಅದ್ಬುತ ದೃಶ್ಯವೊಂದು ಕಂಡು ಬರುತ್ತದೆ. ಗಮನವಹಿಸಿ ನೋಡಿದಾಗ ಈ ಕಂಟಿ ಇರುವೆಯ ಗಾತ್ರವನ್ನು ಹೋಲುವ ಚಿಕ್ಕ ಹುಳ ಮಾಡುವ ಕೆಲಸ ನೋಡಿ ಆಶ್ಚರ್ಯವಾಗುತ್ತದೆ. ಅದೇನೆಂದರೆ ಈ ಈ ಹುಳ ಮೊದಲು ಏನು ಮಾಡುತ್ತದೆ ಎಂಬುದನ್ನು ನೋಡಿ.
ಮೊದಲು ಸುಮ್ಮನೆ ನೆಲದ ಮೇಲಿನ ಹರಳುಗಳನ್ನು ಬದಿಗೆ ಸರಿಸುತ್ತಿದೆ ಎಂದು ಕಂಡು ಬರುತ್ತದೆ. ಆದರೆ ಕೆಲವೇ ಕ್ಷಣಗಳ ಅದು ಒಂದು ದೊಡ್ಡ ಹರಳನ್ನು ಬದಿಗೆ ಸರಿಸುತ್ತದೆ, ಅಲ್ಲಿ ಕಾಣುತ್ತದೆ ಆ ಹುಳದ ಒಂದು ಚಿಕ್ಕ ಮನೆ. ಇಲ್ಲಿ ತನ್ನ ಮನೆಗೆ ಯಾವ ಪ್ರಕಾರ ಸುರಕ್ಷೆ ಕಲ್ಪಿಸಿದೆ ನೋಡಿ. ಆಮೇಲೆ ಒಳಗಿನಿಂದ ಸ್ವಲ್ಪ ಸ್ವಚ್ಚ ಮಾಡುತ್ತದೆ, ಆನಂತರ ಮೇಲಿದ್ದ ಬಟಾಣಿ ಕಾಯಿಯಂಥ ಪದಾರ್ಥವನ್ನು ನೇರ ಒಳಗೆ ತೆಗೆದುಕೊಂಡು ಹೋಗಿ ಬಿಡುತ್ತದೆ.
ನೋಡಿ ಈ ವಿಶೇಷ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ asromer_biology ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು 33 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.