Video; POP ಯಲ್ಲಿ ನೇತಾಡುತ್ತಿದ್ದ ಚಿಕ್ಕ ಹಾವನ್ನು ತೆಗೆಯಲು ಮುಂದಾದಾಗ ಹಠಾತ್ ಕಂಡು ಬಂತು ಬೆಚ್ಚಿ ಬೀಳಿಸುವದು ದೃಶ್ಯ! 😳😳
ಸರೀಸೃಪ ಪ್ರಾಣಿಗಳಲ್ಲಿ ಥಟ್ಟನೆ ನೆನಪಿಗೆ ಬರುವ ಜೀವಿ ಎಂದರೆ ಹಾವು. ಸಾಕಷ್ಟು ಜನರಿಗೆ ಇದರ ಹೆಸರು ತೆಗೆದರೇನೆ, ಇದರ ಬಗ್ಗೆ ಮಾತನಾಡುವ ಮಾತುಗಳೆಂದರೇನೆ ಆಗಿ ಬರುವದಿಲ್ಲ. ಅಷ್ಟೊಂದು ಹೇಟ್ ಮಾಡುತ್ತಾರೆ ಈ ಜೀವಿಗೆ. ಅದಕ್ಕೆ ಕಾರಣ ಹೆದರಿಕೆ. ಹಾವು ಅಂದರೇನೆ ಕೆಲವರು ತುಂಬಾ ಹೆದರಿ ಬಿಡುತ್ತಾರೆ.
ಇತ್ತೀಚೆಗೆ ಹಾವಿನ ಬಗ್ಗೆ ಸಾಕಷ್ಟು ಜನರು ಜಾಗೃತಾರಗಿದ್ದಾರೆ, ಮತ್ತು ಜಾಗೃತರಾಗುತ್ತಿದ್ದಾರೆ. ಹಾವಿನ ವಿವಿಧ ಜಾತಿ, ಪ್ರಭೇದ ಮತ್ತು ಅದರ ಗುಣಗಳ ಬಗ್ಗೆ ತಿಳಿದು ಕೊಳ್ಳುತ್ತಿದ್ದಾರೆ. ಎಲ್ಲಕ್ಕೂ ಮುಖ್ಯ ಅದು ವಿಷಾರಿ ಇದೆಯೋ ಅಥವಾ ಇಲ್ಲ ಎಂಬುದರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಈಗಿನ ಅನೇಕ ಯುವಕರು ಹಾವುಗಳನ್ನು ಹೇಗೆ ಹಿಡಿಯುತ್ತಾರೆ ಎಂಬುದನ್ನು ತರಬೇತಿಯ ಪಡೆಯುವುದರ ಮುಖಾಂತರ ತಿಳಿದುಕೊಂಡಿದ್ದಾರೆ, ಮತ್ತು ಅವುಗಳ ಬಗ್ಗೆ ಇರುವ ಮೂಢ ನಂಬಿಕೆಗಳನ್ನು ದೂರ ಮಾಡುತ್ತಿದ್ದಾರೆ.
ಇರಲಿ, ಈಗ ಇಲ್ಲಿ ಒಂದು ವಿಡಿಯೋ ದೃಶ್ಯವನ್ನು ನಿಮಗಾಗಿ ತಂದಿದ್ದೇವೆ. ಸ್ವಲ್ಪ ಉಸಿರು ಬಿಗಿ ಹಿಡಿದೇ ಇದನ್ನು ನೋಡಲು ಅಣಿಯಾಗಿರಿ. ಕಾರಣ ಅಂಥ ಪ್ರಸಂಗವೇ ಇಲ್ಲಿ ನಡೆದಿದೆ.
ಪ್ರಸ್ತುತ ಈ ದೃಶ್ಯದಲ್ಲಿ ಮನೆಯಲ್ಲಿ ಶೋ ಗಾಗಿ ಸಿಂಗರಿಸಲಾದ POP ಯಲ್ಲಿ ಹಾವು ಕಂಡು ಬಂದಿದೆ. ಮೊದಲ ನೋಟಕ್ಕೆ ಒಂದು ಹಾವು ಕಂಡು ಬರುತ್ತದೆ. ಆ ಹಾವಿನ ಬರೀ ಮುಖ ಕಂಡು ಬಂದಷ್ಟಕ್ಕೆ ಹಾವಿನ ಗಾತ್ರದ ಬಗ್ಗೆ ಸರ್ಪ ಸ್ನೇಹಿತರಿಗೆ ಅಷ್ಟೊಂದು ಅಂದಾಜು ಬಂದಿಲ್ಲ. ಹೀಗಾಗಿ ಸಹಜವಾಗಿ ತಮ್ಮ ಹತ್ತಿರವಿರುವ ಹಾವನ್ನು ಹಿಡಿಯಲು ಬಳಸುವ ಉಪಕರಣವನ್ನು ಉಪಯೋಗಿಸಿ ಹಾವು ಹಿಡಿಯಲು ಮುಂದಾಗಿದ್ದಾರೆ. ಆಗ ಹಠಾತ್ ಮೇಲಿನ POP ಒಡೆದು ಕ್ಷಣದಲ್ಲಿ ಎರಡು ಬೃಹತ್ ಹಾವುಗಳು ಒಮ್ಮೆಲೆ ನೇತಾಡಲು ಶುರುವಾಗುತ್ತವೆ. ಆಕಸ್ಮಿಕ ಘಟಿಸಿದ ಈ ಘಟನೆಯಿಂದ ಎಲ್ಲರೂ ಒಮ್ಮೆಲೆ ಬೆಚ್ಚಿ ಬೀಳುತ್ತಾರೆ, ನಿಮ್ಮನ್ನು ಹಿಡಿದು.
ನೋಡಿ ವಿರೋಚಿತ ವಿಡಿಯೋ…
View this post on Instagram
ಪ್ರಸ್ತುತ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಲಕ್ಷಾವಧಿಯ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಈ ವಿಡಿಯೋ ಮೆಚ್ಚುಗೆಯನ್ನು ಗಳಿಸಿದೆ. ಇನ್ನು ಈ ವಿಡಿಯೋ ನೋಡಿ ಅನೇಕರು ತಮ್ಮ ವಿಶೇಷ ಪ್ರತಿಕ್ರಿಯೆಯನ್ನು ಹೊರ ಹಾಕಿದ್ದಾರೆ.