Video; ಅಣ್ಣ ಸಾಯಂಕಾಲದ ವ್ಯವಸ್ಥೆಯನ್ನು ಚೆನ್ನಾಗಿಯೇ ಮಾಡಿಕೊಳ್ಳಬೇಕೆಂದಿದ್ದ ಆದರೆ ದುರದೃಷ್ಟ..!ಜೊತೆಗೆ ಶಿಕ್ಷೆಯೂ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳು ಜ್ಞಾನ ನೀಡುವುದರ ಜೊತೆಗೆ ಒಮ್ಮೊಮ್ಮೆ ತುಂಬಾ ನಗಿಸಿಯೂ ಬಿಡುವಂತಹ ಹಾಸ್ಯ ಪ್ರಸಂಗದಿಂದ ಕೂಡಿರುತ್ತವೆ. ಈ ರೀತಿಯ ವಿಡಿಯೋಗಳು ಕೆಲವೊಮ್ಮೆ ಸಿಸಿಟಿವಿ ಯಲ್ಲಿ ಸೆರೆಯಾಗುತ್ತವೆ. ಕೆಲವೊಮ್ಮೆ ನಟಿಸಿಯೂ ಇರುತ್ತಾರೆ. ಏನೇ ಇರಲಿ ವ್ಯಕ್ತಿಗೆ ಮನರಂಜನೆ ಮಾತ್ರ ಸಿಕ್ಕೇ ಸಿಗುತ್ತೆ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ಈ ದೃಶ್ಯ ಹೆಚ್ಚು ಕಡಿಮೆ ಯುವಕರೆಲ್ಲರ ತುಂಬಾ ಇಂಟರೆಸ್ಟಿಂಗ್ ವಿಷಯವಾಗಿದೆ. ಇಬ್ಬರು ಗೆಳೆಯರು ವೈನ್ ಶಾಪ್ ಒಂದರಲ್ಲಿ ಎಂಟ್ರಿ ಮಾಡುತ್ತಾರೆ. ಅವರ ಚಲನವಲನೆ ಸ್ವಲ್ಪ ಏನೋ ಜಾಲ ಹಾಕಬೇಕೆನ್ನುವ ಹಾಗೆ ಕಂಡುಬರುತ್ತಿದೆ. ಇಬ್ಬರು ಅತ್ತಿತ್ತ ನೋಡುತ್ತ ಶಾಪ್ ನಲ್ಲಿ ಎಂಟ್ರಿ ಮಾಡುತ್ತಾರೆ. ಇಲ್ಲಿ ಅವರ ಟಾಸ್ಕ್ ಏನಿದೆ? ಅವರು ಮಾಡಿದ್ದೇನು ನೋಡೋಣ ಬನ್ನಿ.
ಇಬ್ಬರಲ್ಲಿ ಒಬ್ಬನು ಮುಂದೆ ಮುಂದೆ ಹೋಗಿ ಶಾಪ್ ನಲ್ಲಿಯ ಬಿಯರ್ ಬಾಟಲ್ ಒಂದನ್ನು ತೆಗೆದುಕೊಂಡು ತನ್ನ ಹಾಫ್ ಪ್ಯಾಂಟ್ ನ ಒಳಗಡೆ ಇಟ್ಟುಕೊಂಡು ಮೇಲಿನ ಟೀ ಶರ್ಟ್ ಸರಿಯಾಗಿ ಸರಿಪಡಿಸಿಕೊಳ್ಳಬೇಕೆನ್ನುವಷ್ಟರಲ್ಲಿಯೇ ಒಂದು ರಾದ್ಧಾಂತ ನಡೆದು ಹೋಗಬೇಕೆ? ಒಳಗೆ ಇಟ್ಟ ಬಾಟಲ್ ಜಾರಿ ನೇರ ಫ್ಲೋರ್ ಮೇಲೆ ಬಿದ್ದು ಪೀಸ್ ಪೀಸ್ ಆಗಿ ಒಡೆದು ಬಿಡುತ್ತದೆ. ಅಷ್ಟೇ ಅಲ್ಲ ಒಳಗಿರುವ ಬೀಯರ್ ಎಲ್ಲ ಕಡೆಗೆ ಪಸರಿಸಿ ಬಿಡುತ್ತದೆ. ತಬ್ಬಿಬ್ಬಾದ ಕಳ್ಳ ಪಕ್ಕನೆ ಅಲ್ಲಿಂದ ಜಾಗ ಖಾಲಿ ಮಾಡುವ ಪ್ರಯತ್ನ ಮಾಡುತ್ತಾನೆ. ಈ ಯತ್ನದಲ್ಲಿ ಆತನ ಕಾಲು ಬಿಯರ್ ನಲ್ಲಿ ಇಟ್ಟಾಗ ಸರಕ್ಕನೇ ಜಾರಿ ಬಿಡುತ್ತದೆ. ಇದರಿಂದ ಬ್ಯಾಲೆನ್ಸ್ ತಪ್ಪಿ ತಲೆಗೂ ಜೋರಾಗಿ ಪೆಟ್ಟು ಬೀಳುತ್ತದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ jeanmusic 10 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 16 ಮಿಲಿಯನ್ ಗಳ ವರೆಗೆ ವೀಕ್ಷಣೆ ಪಡೆದಿದ್ದು 1 ಮಿಲಿಯನ್ ಗಿಂತ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿದೆ.
ವಿಡಿಯೋ ನೋಡಿದ ಒಬ್ಬ ಯೂಸರ್ ‘ನೀನೇನು ಕಳ್ಳನಾಗಲು ಲಾಯಕ್ಕೆ ಇಲ್ಲ’ ಎಂದಿದ್ದಾನೆ. ಇನ್ನೊಬ್ಬ ಯೂಸರ್ ‘ಈ ಟಾಸ್ಕ್ ತುಂಬಾ ಯಶಸ್ವಿಯಾಗಿ ಫೇಲ್ ಆಗಿದೆ’ ಎಂದಿದ್ದಾನೆ. ಒಟ್ಟಿನಲ್ಲಿ ಅನೇಕ ಯೋಜನೆಗಳು ಕಳ್ಳನ ಈ ಅರ್ಧಂಬರ್ಧ ಕೆಲಸಕ್ಕೆ ತುಂಬಾ ತಮಾಷೆ ಮಾಡಿದ್ದಾರೆ.