Video; ನಿಮ್ಮ ತಲೆ ಬೆಳ್ಳಗಾದರೂ ಈ ರೀತಿಯ ವಿಚಿತ್ರ ಮಳೆಯ ದೃಶ್ಯ ಎಂದಿಗೂ ನೊಡಲಿಕ್ಕಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಇಂಟರ್ನೆಟ್ ಯೂಸರ್ ಗಳಿಗೆ ಅನೇಕ ಅಚ್ಚರಿಯ ದೃಶ್ಯಗಳನ್ನು ತೋರಿಸುತ್ತದೆ. ಸಾಮಾಜಿಕ ಜಾಲತಾಣಗಳಿಂದಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆದ ತುಂಬಾ ವಿಚಿತ್ರ ಹಾಗೂ ರೋಚಕ ದೃಶ್ಯಗಳು ನೋಡಲು ಸಿಗುತ್ತವೆ. ಪ್ರಕೃತಿಯು ತುಂಬಾ ವಿಸ್ಮಯದಿಂದ ಕೂಡಿದೆ. ಈ ವಿಸ್ಮಯವನ್ನು ತಿಳಿದುಕೊಳ್ಳಲು, ನೋಡಲು ಹತ್ತು ಹಲವು ಜನ್ಮಗಳನ್ನು ಎತ್ತಿ ಬಂದರೂ ಪ್ರಕೃತಿಯ ಬಗ್ಗೆ ತಿಳಿದುಕೊಳ್ಳುವುದು ಮುಗಿಯುವುದಿಲ್ಲ.

ಪ್ರಕೃತಿಯಿಂದ ಮನುಷ್ಯನಿಗೆ ಸಿಗುವ ಹತ್ತು ಹಲವು ವರದಾನಗಳಲ್ಲಿ ಮುಖ್ಯವಾಗಿ ಸಿಗುವ ಘಟಕ ಏನೆಂದರೆ ಮಳೆ. ಮಳೆಯಿಂದಾಗಿ ಮನುಷ್ಯನ ಜೀವನ ಏಳಿಗೆ ಕಾಣುತ್ತದೆ. ಅದಕ್ಕಾಗಿ ನೀರಿಗೆ ಜೀವನ ಎಂದು ಕರೆಯುತ್ತಾರೆ. ಈ ಮಳೆಯು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಮನುಷ್ಯನ ಮತ್ತು ರೈತನ ಜೀವನ ಸುಗಮವಾಗಿ ಸಾಗುತ್ತದೆ. ಎಷ್ಟೋ ಸಲ ಈ ಮಳೆಯು ಮನುಷ್ಯನಿಗೆ ಕೈ ಕೊಟ್ಟಾಗ ಎಲ್ಲರ ದಿಕ್ಕನ್ನು ತಪ್ಪಿಸಿಬಿಡುತ್ತದೆ.

ಮಳೆಯ ಬಗ್ಗೆ ವಿಚಾರ ವಿನಿಮಯಗಳು ಹಾಗೂ ಚರ್ಚೆಗಳು ನಡೆದಾಗ ಹಿರಿಯರ ಮಾತುಗಳು ಮುಖ್ಯವಾಗಿ ಕೇಳುವಂತೆ ಇರುತ್ತವೆ. ಇತ್ತಿತ್ತಲಾಗಿ ಬರುವ ಮಳೆಯನ್ನು ಹಿರಿಯರು ಲೆಕ್ಕಿಸುವುದೇ ಇಲ್ಲ. ಅವರು ಪ್ರತಿ ಸಲ ಮಳೆ ಬಗ್ಗೆ ಮಾತನಾಡುವಾಗ ಅಥವಾ ಹೇಳುವಾಗ ಇದು ಯಾವ ಸೀಮೆ ಮಳೆ ಎನ್ನುತ್ತಾರೆ. ನಾವು ಚಿಕ್ಕವರಿರುವಾಗ ಬರುತ್ತಿರುವ ಮಳೆಯ ಒಂದು ಪ್ರತಿಶತವು ಈಗ ನಾವು ಕಾಣುತ್ತಿಲ್ಲ ಎಂದು ಗರ್ವದಿಂದ ಹೇಳುವದನ್ನು ಗಮನಿಸಿರಬೇಕು.

ಆದರೆ ಕ್ಯಾಮೆರಾದಲ್ಲಿ ಸೆರೆಯಾದ ಇಂಥ ಮಳೆಯನ್ನು ಮಾತ್ರ ಈವರೆಗೆ ಯಾರು ನೋಡಲಿಕ್ಕಿಲ್ಲ. ಅಂಥ ಯಾವ ಮಳೆ ಇಲ್ಲಿ ಕಾಣುತ್ತಿದೆ ಎನ್ನುತ್ತೀರಾ? ಪ್ರಸ್ತುತ ವಿಡಿಯೋದಲ್ಲಿ ಕಾಣುತ್ತಿರುವ ಮಳೆಯನ್ನು ಗಮನಿಸಿದರೆ ವಿಚಿತ್ರ ಗೊತ್ತಾಗುತ್ತದೆ. ಇಲ್ಲಿಯ ದೃಶ್ಯದಲ್ಲಿ ಹಳ್ಳಿಯ ಸುಂದರ ವಾತಾವರಣ ಕಂಡುಬರುತ್ತದೆ. ಎದುರಿಗೆ ಮಹಾತ್ಮ ಬಸವೇಶ್ವರ ಹೆಸರಿನ ಮಹಾದ್ವಾರ ಕಾಣುತ್ತಿದೆ. ಆ ಮಹಾದ್ವಾರದ ಆಚೆ ಜೋರಾದ ಮಳೆ ಕಂಡು ಬರುತ್ತಿದೆ ನಂತರ ಇತ್ತ ಕಡೆಗೆ ಕ್ಯಾಮೆರಾ ತಿರುಗಿಸಿದಾಗ ಆಚೆಯೂ ಸಹ ಜೋರಾಗಿ ವರುಣರಾಜ ಅರ್ಭಟಿಸುತ್ತಿದ್ದಾನೆ. ಮಧ್ಯದಲ್ಲಿ ಸುಮಾರು 50 ಮೀಟರ್ ಗಳ ಅಂತರ ಇರಬಹುದು ಇಲ್ಲಿ ಒಂದೇ ಒಂದು ಹನಿಯೂ ಸಹ ಮಳೆ ಬರುತ್ತಿಲ್ಲ. ನೋಡಿ ಪ್ರಕೃತಿಯ ವಿಶೇಷ ವಿಸ್ಮಯ.

ನೋಡಿ ಈ ವಿಡಿಯೋ…

 

View this post on Instagram

 

A post shared by Neeraj Bachchan (@neeraj_bachchan)

ಈ ವಿಸ್ಮಯದ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ ನೀರಜ್ ಬಚ್ಚನ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 15.7 ಮಿಲಿಯನ್ಗಳವರೆಗೆ ವೀಕ್ಷಣೆಯನ್ನು ಪಡೆದಿದ್ದು ಎಂಟು ಲಕ್ಷಕ್ಕೂ ಮೀರಿ ಮೆಚ್ಚುಗೆಯನ್ನು ಗಳಿಸಿದೆ.

ಪ್ರಸ್ತುತ ದೃಶ್ಯದಲ್ಲಿಯ ಈ ಮಳೆ ನೆಟ್ಟಿಗರನ್ನು ತುಂಬಾ ಇಂಪ್ರೆಸ್ ಮಾಡಿದೆ. ಹೀಗಾಗಿ ಮೂರು ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ತನ್ನ ಪ್ರತಿಕ್ರಿಯೆಯಲ್ಲಿ ಒಬ್ಬ ನೆಟ್ಟಿಗ ‘ಯಾರ್ಯಾರು ಈ ರೀತಿಯ ಮಳೆ ಮೊದಲ ಬಾರಿ ನೋಡಿದ್ದೀರಿ’ ಎಂದು ಕೇಳಿದ್ದಾನೆ. ಇದನ್ನು ನೋಡಿದ ಬೇರೊಬ್ಬ ನೆಟ್ಟಿಗ ‘ಇದರಲ್ಲಿಯೂ ಮೋದಿಜಿ ಅವರ ಕೈ ಇದೆ’ ಎಂದು ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ‘ದೇವರು ಸಹ ಮಳೆಯ ಸೇವಿಂಗ್ ಮಾಡುತ್ತಿದ್ದಾನೆ’ ಎಂದು ಕಮೆಂಟ್ ಮಾಡಿದ್ದಾನೆ.