ಎಲ್ಲರೂ ಮರೆತರು, ಇರ್ಫಾನ್ ಖಾನ ಮರೆಯಲಿಲ್ಲ; ಕ್ರಿಕೆಟರ್ಸ್ ಶೂಜ್ ಮತ್ತು ಗ್ಲೋವ್ಜ್ ಹೊಲಿದು ಕೊಡುವ ಭಾಸ್ಕರ್ ನಿಗೆ ಯಾರಿಗೂ ಹೇಳದೆ…
ಇರ್ಫಾನ್ ಸದ್ಯಕ್ಕೆ ಕ್ರಿಕೆಟ್ನಿಂದ ದೂರವಿದ್ದು ಬಹಳ ದಿವಸವಾಯಿತು. ಆದರೂ ಮಿಡಿಯಾದ ಸುದ್ದಿಯಲ್ಲಿ ಯಾವತ್ತೂ ಇರುತ್ತಾರೆ. ಸದ್ಯಕ್ಕೆ ಅವರು ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಇರ್ಫಾನ್ ಅವರ ಒಂದು ಸುದ್ದಿ ಸದ್ಯಕ್ಕೆ ವೈರಲ್ ಆಗುತ್ತಿದೆ.

ಭಾರತದಲ್ಲಿ ಲಾಕ್ ಡೌನ್ ಪ್ರಾರಂಭವಿದ್ದಾಗ ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಎಷ್ಟೋ ದಿನಗಳಿಂದ ಕ್ರಿಕೆಟ್ ಮ್ಯಾಚ್ ಗಳು ಇಲ್ಲದ್ದರಿಂದ ಕ್ರಿಕೆಟ್ ಗರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುವ ಅನೇಕ ಜನರಿಗೆ ಎರಡು ಹೊತ್ತಿನ ಊಟವು ಸಿಗುತ್ತಿರಲಿಲ್ಲ. ಯಾವತ್ತೂ ತಮಗೆ ಸಹಾಯ ಮಾಡಿದವರ ನೆನಪಾಗಿ ಇಂಥವರದೇ ಕಷ್ಟಕ್ಕೆ ಇರ್ಫಾನ್ ಪಠಾಣ್ ಅವರು ಸ್ಪಂದಿಸಿದ ಬಗ್ಗೆ ಮಾಹಿತಿ ESPN ಕ್ರಿಕ್ ಇನ್ಫೋ ನಲ್ಲಿ ಕೆಲಸ ಮಾಡುವ ರೌನಕ್ ಕಪೂರ್ ಅವರು ಟ್ವೀಟ್ ಮಾಡಿ ಕೊಟ್ಟಿದ್ದಾರೆ.

ಅವರು ಕೊಟ್ಟ ಮಾಹಿತಿಯ ಪ್ರಕಾರ ‘ಇರ್ಫಾನ್ ನನಗೆ ಕಾಲ್ ಮಾಡಿ ಚೆನ್ನೈ ನಲ್ಲಿ ಶೂಜ್ ಮತ್ತು ಗ್ಲೋವ್ಜ್ ಗಳಂತಹ ಚಿಕ್ಕ ಪುಟ್ಟ ವಸ್ತುಗಳನ್ನು ಹೊಲಿದು ಕೊಡುವ ಭಾಸ್ಕರನ್ ಅವರ ಬಗ್ಗೆ ಕ್ರಿಕೆಟ್ ಮಂಥ್ಲಿಯಲ್ಲಿ ಓದಿದ್ದೆ. ಅದಕ್ಕಾಗಿ ಅವರ ನಂಬರ್ ಬೇಕಾಗಿತ್ತು’. ನಾನು ಅವರಿಗೆ ಕೇಳಲಿಲ್ಲ, ನಿಮಗೆ ನಂಬರ್ ಯಾಕೆ ಬೇಕಾಗಿತ್ತು. ನಾನು ಅವರಿಗೆ ಭಾಸ್ಕರನ್ ಅವರ ನಂಬರ್ ಕೊಟ್ಟೆ.
ಮರುದಿನ ಇಂಡಿಯನ್ ಎಕ್ಸಪ್ರೆಸ್ ನಲ್ಲಿ ನನ್ನ ಫ್ರೆಂಡ್ ವೇಕಟ್ ಕೃಷ್ಣ ಅವರು ಒಂದು ರಿಪೋರ್ಟ್ ಬರೆದಿದ್ದರು. ಅದರಲ್ಲಿ ಇರ್ಫಾನ್ ಅವರು ಭಾಸ್ಕರನ್ ಅವರಿಗೆ 25 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದಾರೆಂದು ಸುದ್ದಿ ಪ್ರಕಟವಾಗಿತ್ತು.

ಆಯ್ ಪಿ ಎಲ್ ಮ್ಯಾಚ್ ಗಳ ಸಂದರ್ಭದಲ್ಲಿ ತಮ್ಮ ವಸ್ತುಗಳನ್ನು ಸ್ಟಿಚ್ ಹಾಕಿ ಅಥವಾ ಹೊಲಿದು ಕೊಡುವ ಕೆಲಸಗಳನ್ನು ಮಾಡುತ್ತಿದ್ದ ಭಾಸ್ಕರನ್ ಗೆ 25 ಸಾವಿರ ರೂಪಾಯಿಗಳ ಸಹಾಯ ಮಾಡಿದ್ದಾರೆ, ಅದು ಸಹ ಯಾರಿಗೂ ಗೊತ್ತಾಗದೆ. ಮತ್ತು ಯಾವುದೇ ಕ್ರೆಡಿಟ್ ಸಹ ತೆಗೆದುಕೊಳ್ಳದೆ. ಯಾವ ಭಾಸ್ಕರನ್ ಗೆ ಇರ್ಫಾನ್ ಸಹಾಯ ಮಾಡಿದ್ದಾರೆ, ಅವರು ಬಹಳ ದಿನಗಳಿಂದ ಆಟಗಾರರ ವಿವಿಧ ವಸ್ತುಗಳು ಅಂದರೆ, ಪ್ಯಾಡ್ಸ್, ಶೂಜ್, ಗ್ಲೋವ್ಜ್ ಅನೇಕ ರೀತಿಯ ಸಾಧನಗಳನ್ನು ಸರಿಪಡಿಸಿ ಹೊಲಿದು ಕೊಡುತ್ತಿದ್ದರು. ಎಲ್ಲರೂ ಯಾಮಾರಿದರೂ ಇರ್ಫಾನ್ ಮಾತ್ರ ನೆನಪಿನಿಂದ ಅವರಿಗೆ ಸಹಾಯ ಮಾಡಿದ್ದಾರೆ. ಧನ್ಯವಾದಗಳು ಇರ್ಫಾನ್ ನೀವು ನಿಜಕ್ಕೂ ಹೃದಯವಂತರೇ.