ನಿಮ್ಮ ಜಾಣತನಕ್ಕೆ ಸವಾಲ್ ಹಾಕುತ್ತಿದೆ ಕೋಡಿಂಗ್ ನಿಂದ ತುಂಬಿದ ಈ ಒಂದು Video! ಸಾಧ್ಯವೇ ಉತ್ತರಿಸಲು?

ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತುಂಬಾ ಚರ್ಚೆಯ ವಿಷಯವಾಗಿರುತ್ತವೆ. ಇಂಥ ಚಿತ್ರಗಳನ್ನು ನೋಡಿದಾಗ ನೆಟ್ಟಿಗರಲ್ಲಿ ಒಂದು ರೀತಿಯ ಚಾಲೆಂಜ್ ಹುಟ್ಟಿಕೊಳ್ಳುತ್ತದೆ. ತನ್ನ ಕಡೆಗೆ ಗಮನವನ್ನು ಸೆಳೆಯುವ ಈ ಚಿತ್ರಗಳಲ್ಲಿ ಏನಾದರೊಂದು ಸರಳ ಪ್ರಶ್ನೆ ಇರುತ್ತದೆ, ಆದರೆ ಅದರ ಉತ್ತರ ಹುಡುಕುವುದು ಅಷ್ಟೇ ಕಷ್ಟದ್ದಾಗಿರುತ್ತದೆ. ಪ್ರಸ್ತುತ ಈ ಚಿತ್ರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಯ ಉತ್ತರ ಕಣ್ಣುಗಳ ಮುಂದೆ ಇದ್ದರೂ ಉತ್ತರ ಸಿಗುವುದು ಮಾತ್ರ ತುಂಬಾ ಕಠಿಣವಾಗಿ ಹೋಗುತ್ತದೆ.

ಇಂಥ ಚಿತ್ರಗಳಂತೆ ಕೆಲವು ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ನೋಡಲು ಸಿಗುತ್ತವೆ. ಇವುಗಳಲ್ಲಿ ಅಡಗಿದ ಕೋಡಿಂಗ್ ಹುಡುಕಲು ಹೋದರೆ ತಲೆ ಮೊಸರು ಗಡಿಗೆಯನ್ನಾಗಿ ಮಾಡಿಬಿಡುತ್ತವೆ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಯಾವ ರೀತಿಯ ನೆಟ್ಟಿಗನಿಗೆ ಕಾಡುತ್ತವೆ ಅದೇ ರೀತಿ ಇಂಥ ವಿಡಿಯೋಗಳು ಸಹ ನೆಟ್ಟಿಗನಿಗೆ ಚಾಲೆಂಜ್ ನೀಡುತ್ತವೆ.

ಸದ್ಯ ಇವತ್ತಿನ ಅಂಕಣದಲ್ಲಿ ನಿಮಗಾಗಿ ಒಂದು ವಿಡಿಯೋವನ್ನು ತಂದಿದ್ದೇವೆ. ಪ್ರಸ್ತುತ ಈ ವಿಡಿಯೋ ತುಂಬಾ ವಿಚಿತ್ರವಾಗಿದೆ. ವಿಡಿಯೋದಲ್ಲಿ ಕೆಲವೇ ಕ್ಷಣಗಳ ಒಂದು ಆಟವಿದೆ. ಚೌಕೋನದಿಂದ ಕೂಡಿದ ಈ ಆಟದ ಮೊದಲ ಹಂತದಲ್ಲಿ ಪ್ರತಿಸಾಲಿನಲ್ಲಿಯೂ 6-6 ಬದಾಮಿಗಳಿದ್ದದ್ದನ್ನು ತೋರಿಸುತ್ತಾನೆ. ಮಧ್ಯದಲ್ಲಿ ನಾಲ್ಕು ಬಾದಾಮಿಗಳು ಬೇರೆಯೇ ಇವೆ. ನಂತರ ಆ ಮಧ್ಯದಲ್ಲಿರುವ ನಾಲ್ಕು ಬಾದಾಮಿಗಳನ್ನು ಚೌಕೋನದ ಸಾಲಿನಲ್ಲಿ ಬೆರಿಸುತ್ತಾನೆ. ಹೆಚ್ಚುವರಿ ನಾಲ್ಕು ಬದಾಮಿಗಳನ್ನು ಚೌಕೋನದ ಸಾಲಿನಲ್ಲಿ ಬೆರೆಸಿದ ಮೇಲೆಯೂ ಪ್ರತಿಸಾಲಿನಲ್ಲಿ ಮತ್ತೆ 6-6 ಬದಾಮಿಗಳು ಕಣ್ಣಿಗೆ ಕಾಣಿಸುತ್ತವೆ. ವಿಡಿಯೋದಲ್ಲಿ ಯಾವುದೇ ರೀತಿಯ ಎಡಿಟ್ ಅಥವಾ ಕಟ್ ಮಾಡಿಲ್ಲ. ಆ ನಾಲ್ಕು ಬದಾಮಿಗಳು ಎಲ್ಲಿ ಹೋದವು? ಎಂಬುದೇ ಆ ವ್ಯಕ್ತಿಯ ಪ್ರಶ್ನೆ. ಆತನ ಈ ಪ್ರಶ್ನೆಗೆ ನಿಮಗಾದರೂ ಉತ್ತರ ನೀಡಲು ಸಾಧ್ಯವಾಗುತ್ತಾ?

ಉತ್ತರಿಸುವ ಮೊದಲು ನೋಡಿ ಈ ವಿಡಿಯೋ…

ಪ್ರಸ್ತುತ ತಲೆ ತಿನ್ನುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ rohipahadi_2000 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಸುಮಾರು 11 ಮಿಲಿಯನ್ ನೆಟ್ಟಿಗರ ತಲೆ ತಿಂದಿದೆ. ಹಾಗೂ ಈ ವಿಡಿಯೋವನ್ನು ಮೂರುವರೆ ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.