Video; 22 ರ ಹರೆಯದಲ್ಲಿಯೇ 24 ಮಕ್ಕಳನ್ನು ಹೆತ್ತ ತಾಯಿ ನೀಡಿದ ಸಂದೇಶ ಒಮ್ಮೆ ಕೇಳಿ, ತಲೆ ಚಚ್ಚಿಕೊಳ್ಳುತ್ತೀರಿ.

ಪ್ರಪಂಚದಲ್ಲಿ ಅನೇಕ ರೀತಿಯ ವಿಚಿತ್ರ ಜನರಿದ್ದಾರೆ. ಈ ಜನರ ಜೊತೆಗೆ ಭೇಟಿ ಆಗಾಗ ಎಷ್ಟೋ ಸಲ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುತ್ತದೆ. ಇವರ ಕೆಲಸ ಇರಬಹುದು, ಇವರ ಮಾತುಗಳಿರಬಹುದು, ಅಥವಾ ಇವರ ವರ್ತನೆ ಇರಬಹುದು, ಇಂಥವುಗಳನ್ನು ನೋಡಿದಾಗ ಒಮ್ಮೊಮ್ಮೆ ಅದ್ಭುತ ಎನಿಸಿದರೆ ಕೆಲವೊಮ್ಮೆ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳಬೇಕು ಎನಿಸುತ್ತದೆ. ಅಂಥ ವಿಚಿತ್ರ ಜನರು ಸಹ ಇಲ್ಲಿ ಭೇಟಿಯಾಗುತ್ತಾರೆ.

ಕೆಲವರಂತೂ ತಮ್ಮದೇ ಲೋಕದಲ್ಲಿ ಇರುತ್ತಾರೆ. ಇವರು ತಮ್ಮ ಬಗ್ಗೆಯೇ ವಿಚಾರ ಮಾಡುವದಿಲ್ಲ, ಇನ್ನೂ ತಮ್ಮ ಮಕ್ಕಳ ಅಥವಾ ದೇಶದ ಬಗ್ಗೆ ಏನು ಚಿಂತೆ ಮಾಡಬೇಕು ನೀವೇ ಹೇಳಿ. ಪ್ರಸ್ತುತ ಇಲ್ಲಿ ಪ್ರಸ್ತಾಪಿಸಲಿರುವ ವಿಷಯ ತುಂಬಾ ವಿಚಿತ್ರ ಸನ್ನಿವೇಶಕ್ಕೆ ಸಂಬಂಧಿಸಿದ್ದು ಆಗಿದೆ. ನಿಮಗಾಗಿ ತಂದಿರುವ ಈ ವಿಡಿಯೋದಲ್ಲಿಯ ದೃಶ್ಯ ನೋಡಿದಾಗ ನೀವು ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುತ್ತೀರಿ.

ಬಯಲಿನಲ್ಲಿ ಕುಳಿತ (ಮನೆ ಇಲ್ಲದೆ) ಈ ಮಹಿಳೆಗೆ ಇನ್ನೊಬ್ಬಳು ಮಹಿಳೆ ಸಂದರ್ಶನ ತೆಗೆದುಕೊಳ್ಳುತ್ತಿದ್ದಾಳೆ. ಈ ಸಂದರ್ಶನದಲ್ಲಿ ಮಹಿಳೆ ತನ್ನ ಹೆಸರು ರಬಿಯಾ ಅಂತ ಹೇಳುತ್ತಾಳೆ. ನಿನ್ನ ವಯಸ್ಸು ಎಷ್ಟು ಎಂದು ಕೇಳಿದ್ದಕ್ಕೆ 22 ಅಂತ ಹೇಳುತ್ತಾಳೆ. ಮುಂದೆ ಹಾಗೆಯೇ ಈ ಎಲ್ಲ ಮಕ್ಕಳು ನಿನ್ನ ಮಕ್ಕಳಾಗಿವೆಯಾ? ಎಂದು ಕೇಳಿದಾಗ ರಬಿಯಾ ಸಹಜವಾಗಿ ಹೌದು ಈ ಎಲ್ಲ ಮಕ್ಕಳು ನನ್ನವು ಎನ್ನುತ್ತಾಳೆ.

ಅದಕ್ಕೆ ಸಂದರ್ಶನ ತೆಗೆದುಕೊಳ್ಳುವವಳು ಯಾವ ವಯಸ್ಸಿನಲ್ಲಿ ನಿನ್ನ ಮದುವೆಯಾಗಿತ್ತು ಎಂದಾಗ 11 ರ ವಯಸ್ಸಿನಲ್ಲಿ ಎನ್ನುತ್ತಾಳೆ. ಎಷ್ಟು ಮಕ್ಕಳಿಗೆ ಜನ್ಮ ನೀಡಿದ್ದಿಯಾ ಎಂದಾಗ ಇಲ್ಲಿಯವರೆಗೆ ಎರಡು ಡಜನ್ ಮಕ್ಕಳನ್ನು ಹೆತ್ತಿರುವೆ ಎನ್ನುತ್ತಾಳೆ. ಆಗ ಪ್ರಶ್ನೆ ಕೇಳುವವಳು ನಿನ್ನ ಗಂಡ ನಿನಗೆ ಬೇರೆ ಯಾವ ಕೆಲವನ್ನು ಕೊಟ್ಟಿಲ್ಲವೆ? ಎಂದಾಗ ನನ್ನ ಗಂಡನೇ ಕೊಟ್ಟಿದ್ದಾನೆ ಇಷ್ಟೊಂದು ಮಕ್ಕಳನ್ನು ಪೋಷಿಸುವ ಕೆಲಸ ಎನ್ನುತ್ತಾಳೆ.

ನಿನ್ನ ಗಂಡ ಏನು ಕೆಲಸ ಮಾಡುತ್ತಾನೆ ಎಂದು ಮರು ಪ್ರಶ್ನೆ ಮಾಡಿದಾಗ ಆಕೆ ಬಲೂನುಗಳನ್ನು ಮಾರಾಟ ಮಾಡುತ್ತಾನೆ ಎನ್ನುತ್ತಾಳೆ. ನಿನಗೆ ನಿನ್ನ ಗಂಡ ಏನು ಗಿಫ್ಟ್ ಕೊಟ್ಟಿದ್ದಾನೆ ಎಂದರೆ ಈ ಮಕ್ಕಳನ್ನೇ ಗಿಫ್ಟ್ ಕೊಟ್ಟಿದ್ದಾನೆ ಇನ್ನು ಏನು ಕೊಡಬೇಕು ಎನ್ನುತ್ತಾಳೆ. ಕೊನೆಗೆ ನಿನಗೆ ನಿನ್ನ ಗಂಡ ಎಷ್ಟು ಪ್ರೀತಿಸುತ್ತಾನೆ ಎಂದು ಕೇಳಿದಾಗ ತುಂಬಾ ಪ್ರೀತಿಸುತ್ತಾನೆ ಆದ್ದರಿಂದಲೇ ಇಷ್ಟೊಂದು ಮಕ್ಕಳನ್ನು ಹೆತ್ತಿದ್ದೇನೆ ಎನ್ನುತ್ತಾಳೆ.

ನಿನ್ನ ಮಕ್ಕಳು ಎಲ್ಲಿಯಾದರೂ ಕಳೆದು ಹೋದರೆ ಅಥವಾ ಮನೆಗೆ ಬೇಗ ಬರಲಿಲ್ಲ ಎಂದರೆ ಏನು ಮಾಡುತ್ತಿ? ಎಲ್ಲರ ಮೇಲೆ ಹೇಗೆ ಕಣ್ಣಿಡುತ್ತಿ? ಎಂದು ಕೇಳಿದಾಗ ನಾನೇನು ಶೋಧಿಸಲು ಹೋಗುವದಿಲ್ಲ, ಎಲ್ಲ ಮಕ್ಕಳೂ ತಾನಾಗಿಯೇ ಮನೆಗೆ ಬರುತ್ತಾರೆ ಎಂದು ಗರ್ವದಿಂದ ಹೇಳುತ್ತಾಳೆ ರಬಿಯಾ.

ಕೇಳಿ ಈ ಸಖತ್ ತಲೆ ಚಚ್ಚಿಕೊಳ್ಳುವ ಸಂವಾದ…

 

View this post on Instagram

 

A post shared by Naju Khan (@naju__ego__queen__2022)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಕ್ಲಿಪ್ ಇಲ್ಲಿಯವರೆಗೆ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದೆ. ಮತ್ತು ಸುಮಾರು 4.5 ಲಕ್ಷಕ್ಕೂ ಮೀರಿ ಮೆಚ್ಚುಗೆಯನ್ನು ಗಳಿಸಿದೆ.

ಇನ್ನು ಪ್ರತಿಕ್ರಿಯೆಗಳ ಬಗ್ಗೆ ಹೇಳುವುದಾದರೆ, ಎರಡೂವರೆ ಸಾವಿರಗಟ್ಟಲೆ ಕಾಮೆಂಟ್ ಗಳು ಮಳೆಯ ಹಾಗೆ ಸುರಿದಿವೆ. ಒಬ್ಬನು ಈಕೆ ಮಕ್ಕಳನ್ನು ಹೆರುವ ಮಶೀನ್ ಆಗಿದ್ದಾಳೆ ಎಂದಿದ್ದಾನೆ. ಇನ್ನೊಬ್ಬ ಬಲೂನು ಮಾರುವ ಬದಲು ತಾನೇ ಸರಿಯಾಗಿ ಯೂಸ್ ಮಾಡಬೇಕಾಗಿತ್ತು ಎಂದು ಟಾಂಗ್ ಕೊಟ್ಟಿದ್ದಾನೆ.