ಗೋಕುಲಾಷ್ಟಮಿಯಂದು ಕೃಷ್ಣನಿಂದಲೇ ಒಡೆಯದ ಒರಿಜಿನಲ್ ಗಡಿಗೆ! ಊರಿಗೆ ಊರೇ ಶೋಧಿಸುತ್ತಿದೆ ಗಡಿಗೆ ತಯಾರಿಸಿದ ಕುಂಭಾರನನ್ನು..!
ಸಾಮಾಜಿಕ ಜಾಲತಾಣ ಎಂದರೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಇದನ್ನು ಹೊರತು ಪಡಿಸಿ ನಾವು ಒಂದೇ ಒಂದು ದಿನವನ್ನೂ ಕಳೆಯಲು ಸಾಧ್ಯವಿಲ್ಲ. ದಿನನಿತ್ಯ ಇಲ್ಲಿ ಏನಾದರೂ ಸಖತ್ ಮಸಾಲೆ ಸಿಕ್ಕೇ ಸಿಗುತ್ತದೆ. ಇದನ್ನು ನೋಡುತ್ತಾ ನೋಡುತ್ತಾ ಸಮಯ ಕಳೆದಿದ್ದೆ ಗೊತ್ತಾಗುವುದಿಲ್ಲ. ಈಗಿನ ಯುವಕರಂತೂ ಒಂದು ಕ್ಷಣ ಮೊಬೈಲ್ ಬಿಟ್ಟು ಇರುವುದೇ ಇಲ್ಲ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ತಮಾಷೆಯ ವಿಡಿಯೋ ಒಂದನ್ನು ನಿಮಗಾಗಿ ಆಯ್ದು ತಂದಿದ್ದೇವೆ. ಈ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗಲಿಲ್ಲವೆಂದರೆ ಹೇಳಿ. ಅಂತಹ ಹಾಸ್ಯ ಪ್ರಸಂಗದಿಂದ ಕೂಡಿದೆ ಈ ವಿಡಿಯೋ.
ಪ್ರಸ್ತುತ ವಿಡಿಯೋದಲ್ಲಿ ಗೋಕುಲಾಷ್ಟಮಿಯ ದಿನದಂದು ಆಡುವ ರಂಗನು ಮೊಸರಗಡಿಗೆ ಆಡುವ ಆಟವಿದೆ. ಇದು ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ಅದರಲ್ಲೂ ಠಾಣೆ ಮತ್ತು ಮುಂಬೈ ಪಟ್ಟಣಗಳಲ್ಲಿ ತುಂಬಾ ಭರ್ಜರಿಯಾಗಿ ಆಚರಿಸುತ್ತಾರೆ. ಈ ಆಟದಲ್ಲಿ ಯುವಕರೆಲ್ಲರೂ ಕೂಡಿ ಒಬ್ಬರ ಮೇಲೆ ಒಬ್ಬರು ನಿಂತು ಎತ್ತರದ ಮೇಲೆ ಕಟ್ಟಿದ ಮೊಸರು ಗಡಿಗೆಯನ್ನು ತೆಂಗಿನಕಾಯಿಯಿಂದ ಒಡೆಯುವ ಸಂಪ್ರದಾಯವಿರುತ್ತದೆ. ಇದೇ ಆಟದ ಒಂದು ದೃಶ್ಯ ತುಂಬಾ ಹಾಸ್ಯದಿಂದ ಕೂಡಿದೆ.
ಮೇಲೆ ಏರಿದ ಕೃಷ್ಣ ಖುಷಿಯಿಂದ ಗೆದ್ದೆನೆಂಬ ಸಂತೋಷದಲ್ಲಿ ಮೊಸರು ಗಡಿಗೆಯನ್ನು ತೆಂಗಿನಕಾಯಿಯಿಂದ ಓಡೆಯಲು ಪ್ರಯತ್ನಿಸುತ್ತಾನೆ. ಆದರೆ ಆತನ ಪ್ರಯತ್ನಕ್ಕೆ ಮೊಸರು ಗಡಿಗೆ ಜುಮ್ ಎನ್ನುವುದಿಲ್ಲ. ಇದನ್ನು ನೋಡಿದ ಮತ್ತೊಬ್ಬ ಯುವಕ ಆತನನ್ನು ಬದಿಗೆ ಸರಿಸಿ ತಾನೇ ದೊಡ್ಡ ಬಾಹುಬಲಿಯಂತೆ ಗಡಿಗೆಯನ್ನು ಒಡೆಯಲು ಮುಂದಾಗುತ್ತಾನೆ. ಆತ ನಿರಂತರವಾಗಿ ಒಂದರ ಮೇಲೆ ಒಂದರಂತೆ 15/20 ಹೊಡೆತಗಳನ್ನು ಹಾಕಿಯೇ ಹಾಕುತ್ತಾನೆ, ಆದರೆ ಗಡಿಗೆ ಮಾತ್ರ ಒಡೆಯುವ ಚಿಹ್ನೆಯೇ ಕಂಡು ಬರುವುದಿಲ್ಲ. ಈ ಗಡಿಗೆಯನ್ನು ತಯಾರಿಸಿದ ಕುಂಬಾರನು ಅದ್ಯಾವ ರೀತಿಯಲ್ಲಿ ಇದನ್ನು ತಯಾರಿಸಿದ್ದಾನೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅದಕ್ಕಾಗಿ ಇಡೀ ಊರಿನ ಜನರೇ ಕುಂಬಾರನನ್ನು ಶೋಧಿಸುತ್ತಿರಬಹುದು.
ನೋಡಿ ಈ ತಮಾಷೆಯ ವಿಶೇಷ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ kumar _raj 4994 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ನಕ್ಕು ನಗಿಸುವ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದಲ್ಲದೆ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗನೊಬ್ಬ ತನ್ನದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾನೆ. ಆತ ತನ್ನ ಕಮೆಂಟ್ ನಲ್ಲಿ ಕುಂಬಾರನು ಮಣ್ಣಿನಲ್ಲಿ ಅಂಬುಜ ಸಿಮೆಂಟ್ ಮತ್ತು ಫೆವಿಕಾಲ್ ಮಿಕ್ಸ್ ಮಾಡಿ ಈ ಗಡಿಗೆಯನ್ನು ತಯಾರಿಸಬಹುದು ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ಗಡಿಗೆಯನ್ನು ತಯಾರಿಸಿದ ಕುಂಬಾರನಿಗೆ 26 ತೋಪುಗಳ ಸೆಲ್ಯೂಟ್ ನೀಡಬೇಕು ಎಂದಿದ್ದಾನೆ.