Video; ಬಹು ಮಹಡಿಯ ಕಟ್ಟಡದಿಂದ ಕೋಳಿಯ ಜಗಿತ! ಇದು ನಿಜಾನಾ ನೆಟ್ಟಿಗರ ಪ್ರಶ್ನೆ, ನೋಡಿ ಈ ದೃಶ್ಯ.
ಕೋಳಿಯು ಆಕಾಶದಲ್ಲಿ ಬಾನೆತ್ತರಕ್ಕೆ ಹಾರುವುದೇ ಎಂದು ಕೇಳಿದಾಗ ಸಹಜವಾಗಿ ಯಾರೇ ಆಗಲಿ ಇಲ್ಲ, ಸಾಧ್ಯವಿಲ್ಲ ಎನ್ನುತ್ತಾರೆ. ನಾವು ಸಹ ಇಲ್ಲಿಯವರೆಗೆ ಕೋಳಿ ಅಷ್ಟೊಂದು ಮೇಲೆ ಹಾರಾಟ ಮಾಡುವುದನ್ನು ಎಂದಿಗೂ ನೋಡಿಯೇ ಇಲ್ಲ. ಆದರೆ ಇಲ್ಲಿ ನೋಡಲಿರುವ ವಿಡಿಯೋದಲ್ಲಿಯ ದೃಶ್ಯ ಮಾತ್ರ ಸಂಪೂರ್ಣವಾಗಿ ಯೋಚನೆ ಮಾಡಲು ಹಚ್ಚುತ್ತದೆ.
ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯವೂ ನಮ್ಮ ಭ್ರಮೆಯನ್ನು ದೂರ ಮಾಡುತ್ತದೆ. ಆಕಾಶದಲ್ಲಿ ಹಾರಾಟ ಮಾಡುತ್ತಿರುವ ಕೋಳಿಯ ಈ ದೃಶ್ಯವನ್ನು ನೋಡಿ ನೆಟ್ಟಿಗರು ಮೂಕ ವಿಸ್ಮಿತರಾಗಿದ್ದಾರೆ. ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾ ಯೂಸರ್ಸ್ ಗಳಿಗೆ ಚರ್ಚೆ ಮಾಡಲು ಅವಕಾಶ ನೀಡಿದೆ. ವಿಡಿಯೋ ದೃಶ್ಯ ನೋಡಿದ ನೆಟ್ಟಿಗರು ಈ ದೃಶ್ಯವು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ.
ಗಗನದಲ್ಲಿ ಬಾನೆತ್ತರಕ್ಕೆ ಗರಿಬಿಚ್ಚಿ ಹಾರಾಟ ಮಾಡುವ ಕೋಳಿಯನ್ನು ಎಂದಾದರೂ ನೋಡಿದ್ದೀರಾ? ಒಂದು ವೇಳೆ ನೀವು ಈ ದೃಶ್ಯ ನೋಡಿಲ್ಲವಾದರೆ ಇಲ್ಲಿ ನೋಡಿ. ಬಹು ಮಹಡಿಯ ಕಟ್ಟಡದ ಮನೆಯ ಗ್ಯಾಲರಿಯಲ್ಲಿ ಒಂದು ಕೋಳಿ ಕುಳಿತಿದೆ. ಈ ಕೋಳಿಯು ಭೂಮಿಯಿಂದ ಸಾಕಷ್ಟು ಎತ್ತರದ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಅದು ಕೆಲವೇ ಕ್ಷಣಗಳ ನಂತರ ಅಲ್ಲಿಂದ ತನ್ನ ರೆಕ್ಕೆಗಳನ್ನು ಬಿಚ್ಚಿ ಆಕಾಶದಲ್ಲಿ ಹಾರಾಟ ಮಾಡುತ್ತದೆ. ಈ ದೃಶ್ಯವೂ ನಿಜಕ್ಕೂ ನೋಡುಗರಿಗೆ ಆಶ್ಚರ್ಯವನ್ನು ನೀಡುತ್ತದೆ. ನಮಗೂ ಹಾಗೂ ನಿಮಗೂ ಗುರುತಿರುವ ಪ್ರಕಾರ, ಕೋಳಿ ಅಥವಾ ಹುಂಜ ಇಷ್ಟೊಂದು ಮೇಲೆ ಹಾರಾಟ ಮಾಡುವುದೇ ಇಲ್ಲ. ಕೋಳಿ ಮತ್ತು ಹುಂಜ ಈ ಜೀವಿಗಳ ದೇಹ ರಚನೆ ತುಂಬಾ ಸಮಯದವರೆಗೆ ಆಕಾಶದಲ್ಲಿ ಹಾರಾಟ ಮಾಡುವ ಹಾಗೆ ಇರುವುದಿಲ್ಲ ಮತ್ತು ಇವುಗಳಿಗೆ ಹೆಚ್ಚು ಎತ್ತರದ ಮೇಲೆ ಹಾರಾಟ ಮಾಡಲು ಸಹ ಬರುವುದಿಲ್ಲ.
ವೀಡಿಯೋ ನೋಡಿ
View this post on Instagram
ಕೆಲವೇ ಕೆಲವು ಲೈಕ್ಸ್ ಗಳನ್ನು ಪಡೆಯುವ ಸಲುವಾಗಿ ಮಾಡುವುದೇ ಇಂತ ಕೆಲಸ?
ಈ ವಿಡಿಯೋವನ್ನು ಒಬ್ಬ instagram ಯೂಸರ್ ಶೇರ್ ಮಾಡಿದ್ದಾನೆ. ಪ್ರಸ್ತುತ ವಿಡಿಯೋವನ್ನು ಈಗಾಗಲೇ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಇದೇ ವಿಡಿಯೋ ಇಲ್ಲಿಯವರೆಗೆ 25,000ಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ. ಕಮೆಂಟ್ ಬಾಕ್ಸ್ ನಲ್ಲಿ ವಿಡಿಯೋಗೆ ಸಂಬಂಧಿಸಿದ ನೆಟ್ಟಿಗರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ಅದರಲ್ಲಿ ಒಬ್ಬ ನೆಟ್ಟಿಗ ಕೆಲವು ಲೈಕ್ಸ್ ಗಳನ್ನು ಪಡೆಯುವುದಕ್ಕಾಗಿ ಈ ಕೊಳಿಗೆ ನೀನು ಇಂಥ ನೋವು ನೀಡುವುದೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.