ಈ ಕಳ್ಳನನ್ನು ನೋಡಿದರೆ “ಧೂಮ್ -5” ವರ್ಜನ್ ಎನಿಸುತ್ತೆ; ಕ್ಷಣದಲ್ಲಿ ಕೋಳಿಯನ್ನು ಕದ್ದದ್ದು ಆ ಕೋಳಿಗೂ ಗೊತ್ತಾಗಲಿಲ್ಲ, ಪಾಪ…

ಸೋಶಿಯಲ್ ಮೀಡಿಯಾ ಎಂದರೆ ಸಖತ್ ಮಸಾಲೆಯ ರುಚಿಕಟ್ಟಾದ ಅಡುಗೆ ಇದ್ದ ಹಾಗೆ. ಇಲ್ಲಿ ಸರ್ಚ್ ಮಾಡಲು ಬಂದವನಿಗೆ ಆತನ ಇಷ್ಟವಾದ ಕಜ್ಜಾಯ ಏನಾದರೂ ಸಿಕ್ಕೆ ಸಿಗುತ್ತದೆ. ಬರಿಗೈಯಿಂದ ವಾಪಸ್ ಹೊಗುವದೇ ಇಲ್ಲ. ಪ್ರತಿಯೊಬ್ಬರಿಗೂ ಆಕರ್ಷಿಸುವ ಅಷ್ಟೊಂದು ಸೂಪರ್ ಕಂಟೆಂಟ್ ಅಥವಾ ಕಜ್ಜಾಯ ತುಂಬಿದ ಹೋಟಲ್ ಇದಾಗಿದೆ ಎನ್ನಬಹುದು. ಸದ್ಯ ಇಲ್ಲಿ ನಿಮಗಾಗಿ ಒಂದು ಚಾಣಾಕ್ಷ ಕಳ್ಳನ ಕಳ್ಳತನದ ದೃಶ್ಯ ಒಂದನ್ನು ತಂದಿದ್ದೇವೆ.

ಜಗತ್ತಿನ ಪಟಲದ ಮೇಲೆ ಅನೇಕ ರೀತಿಯ ಜನರು ಭೇಟಿಯಾಗುತ್ತಾರೆ. ಇಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆಯಾದ ಹವ್ಯಾಸವಿರುತ್ತದೆ. ಕೆಲವರು ಅಭ್ಯಾಸದಲ್ಲಿ ತಮ್ಮ ಸಿದ್ಧಿಯನ್ನು ತೋರಿದರೆ ಇನ್ನು ಕೆಲವರು ಆಟದಲ್ಲಿ. ಕೆಲವರು ವೈಲ್ಡ್ ಲೈಫ್ ಶೂಟ್ ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರೆ ಮತ್ತೆ ಕೆಲವರು ಸತತವಾಗಿ ಸಮುದ್ರದ ಆಳದಲ್ಲಿ ವಿಡಿಯೋ ಶೂಟ್ ಮಾಡುವ ಹವ್ಯಾಸವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಸದಾ ಕಳ್ಳತನದಲ್ಲಿ ತಮ್ಮ ಕೈಚಳಕವನ್ನು ತೋರಿಸುವವರಾಗಿರುತ್ತಾರೆ.

ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿಯ ವ್ಯಕ್ತಿ ಕಳ್ಳತನ ಮಾಡಿದ ಬಗೆ ನೋಡಿ, ಅದು ಒಂದು ಕೋಳಿಯನ್ನು. ಜನರು ಯಾವ ಯಾವುದರಲ್ಲಿ ಮುಂದೆ ಹೋಗುತ್ತಿದ್ದಾರೆ ಈ ವ್ಯಕ್ತಿ ಮಾತ್ರ ಕಳ್ಳತನದಲ್ಲಿ ಎಂಥ ಸಾಧನೆ ಮಾಡಿದ್ದಾನೆ ನೋಡಿ.

ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿ ಕೋಳಿಗೆ ತಿನ್ನಲು ಕೆಲವು ಕಾಳುಗಳನ್ನು ಹಾಕಿದ್ದಾನೆ. ಕೋಳಿಯು ಕಾಳನ್ನು ಕುಕ್ಕುತ್ತ ಕುಕ್ಕುತ್ತ ತಲೆ ಕೆಳಗೆ ಮಾಡಿ ಕಾಳು ಹಾಕಿದ ವ್ಯಕ್ತಿಯ ಸನಿಹಕ್ಕೆ ಬಂದಾಗ ಅದೇ ವ್ಯಕ್ತಿ ಕೋಳಿಯನ್ನು ಹಿಡಿದ ಬಗೆ ನೋಡಿ ಎಂಥ ಪರಿಯಾಗಿದೆ. ಈ ಕಲೆಯನ್ನು ವ್ಯಕ್ತಿ ಬೇರೆ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಸಿದ್ದಾದರೆ ಎಷ್ಟೋ ಮುಂದೆ ಹೋಗಬಹುದಿತ್ತು. ಆದರೆ ಕೋಳಿಯನ್ನು ಕಳ್ಳತನ ಮಾಡುವದರಲ್ಲಿ ತನ್ನ ಮಾಸ್ಟರ್ ಮೈಂಡ್ ಯೂಸ್ ಮಾಡಿದ್ದಾನೆ. ಒಂದೇ ಒಂದು ಕ್ಷಣದಲ್ಲಿ ಕೋಳಿಯನ್ನೇ ನಾಪತ್ತೆ ಮಾಡಿ ಬಿಟ್ಟಿದ್ದಾನೆ ವಂಚಕ. ಪಾಪ ಆ ಕೋಳಿಗೂ ತನ್ನನ್ನು ಕದ್ದದ್ದು ಗೊತ್ತೇ ಆಗಿಲ್ಲ, ಅದಕ್ಕೆ ಕೂಗುವ ಅವಕಾಶವೇ ಕೊಟ್ಟಿಲ್ಲ ಖದೀಮ ಕಳ್ಳ. ಅದು ಕೂಗುವ ಮುನ್ನವೇ ಕುತ್ತಿಗೆಯನ್ನು ಹಿಡಿದು ಬಿಟ್ಟಿದ್ದಾನೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 3.1 ಮಿಲಿಯನ್ ಜನರು ವೀಕ್ಷಿಸಿದ್ದು ಸುಮಾರು 1 ಲಕ್ಷ 21 ಸಾವಿರ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ಒಬ್ಬ ನೆಟ್ಟಿಗ ಇದು ನಿಜವಾಗಿಯೂ ತಮಾಷೆ ಅಲ್ಲ ಎಂದರೆ, ಇನ್ನೊಬ್ಬ, “ಮುರ್ಗಿ ಚೋರ್ ಸಿಕ್ಕಿಬಿದ್ದ ಅದೂ ಇನ್ಸ್ಟಾಗ್ರಾಮ್ ನಲ್ಲಿ” ಎಂದಿದ್ದಾನೆ. ಮತ್ತೊಬ್ಬ ಯೂಸರ್ “ಈವನ್ ಲೆಗ್ ಸ್ಪಿನ್” ಎಂದಿದ್ದಾನೆ.