ತಮ್ಮದೇ ರೆಸೆಪ್ಶನ್ ನಲ್ಲಿ ಗೈರು ವಧು-ವರ; ಸಮಸ್ಯೆ ಬಗೆಹರಿಸಲು ಕರೆಯಿಸಿಕೊಳ್ಳಬೇಕಾಯಿತು ಫಾಯರ್ ಬ್ರಿಗೇಡ್!
ಮದುವೆಯಲ್ಲಿ ಎಷ್ಟೇ ಪೂರ್ವ ನಿಯೋಜನೆಯನ್ನು ಮಾಡಿದರೂ ಏನಾದರೂ ಸಣ್ಣ ಪುಟ್ಟ ತಪ್ಪುಗಳು ನಡೆದೇ ಹೋಗುತ್ತವೆ. ಬೀಗರು ಬಿಜ್ಜರಲ್ಲಿ ಮುನಿಸಿಕೊಳ್ಳುವದು, ಊಟದ-ಉಪಚಾರದಲ್ಲಿ ಹೆಚ್ಚು ಕಡಿಮೆ, ಕೊಡಕೊಳ್ಳುವದರಲ್ಲಿ ಅಸಮಾಧಾನ, ಹೀಗೆ ಅನೇಕ ಹತ್ತು ಹಲವು ಘಟನೆಗಳು ನಡೆಯುತ್ತಿರುತ್ತವೆ. ಇವೆಲ್ಲವೂ ಸಾಮಾನ್ಯವೆಂಬಂತೆ ನಡೆದು ಹೋಗುತ್ತವೆ. ಆದರೆ ಕೆಲವೊಮ್ಮೆ ಮಹತ್ವದ ಹಾಗೂ ಅಘಟಿತ ಘಟನೆಗಳು ನಡೆದರೆ ಮಾತ್ರ ಎಲ್ಲ ಕಡೆಗೂ ಸುದ್ದಿಯಾಗುತ್ತದೆ.
ಸದ್ಯ ಒಂದು ವಿಶೇಷ ಘಟನೆಯೊಂದು ಅಮೆರಿಕಾದಿಂದ ವರದಿಯಾಗಿದೆ. ಇಂಥ ಘಟನೆ ಅದೂ ಮದುವೆಯ ರಿಸೆಪ್ಶನ್ ಸಂದರ್ಭದಲ್ಲಿ ನಡೆಯಬೇಕಾ? ಈ ಕಾರಣದಿಂದಾಗಿ ವಧು-ವರ ಇಬ್ಬರೂ ತಮ್ಮದೇ ರಿಸೇಪ್ಶನ ನಲ್ಲಿ ಗೈರು ಹಾಜರಿದ್ದ ಪ್ರಸಂಗ ನಡೆಯಿತು. ಅವರ ಸಮಸ್ಯೆಯನ್ನು ಬಗೆಹರಿಸಲು ಕೊನೆಗೆ ಫಾಯರ್ ಬ್ರಿಗೇಡ್ ದವರಿಗೆ ಕರೆಯಬೇಕಾಯಿತು.

ಡೆಲಿ ಸ್ಟಾರ್ ನ್ಯೂಸ್ ವೆಬ್ ಸೈಟ್ ನೀಡಿದ ವರದಿಯ ಪ್ರಕಾರ, ಅಮೆರಿಕೆಯ ನಾರ್ತ್ ಕೇರೋಲಿನಾದಲ್ಲಿ ಗ್ರ್ಯಾಂಡ್ ಬೋಹೋಮಿಯನ್ ಹೋಟೆಲ್ ಇದೆ. ಆ ಹೋಟೆಲ್ ನ 16 ಮಹಡಿಯಲ್ಲಿ ಭಾರತೀಯ ವರ ಪವನ್ ಝಾ ಮತ್ತು ಅಮೆರಿಕೆಯ ವಧು ವಿಕ್ಟೋರಿಯಾ ಇವರಿಬ್ಬರ ಮದುವೆಯ ರಿಸೆಪ್ಶನ್ ಕಾರ್ಯಕ್ರಮ ನಡೆಯಬೇಕಾಗಿತ್ತು. ಎಲ್ಲವೂ ನಿರ್ಧರಿಸಿದ ಸಮಯಕ್ಕನುಸಾರವಾಗಿ ನಡೆದಿತ್ತು. ಏತನ್ಮಧ್ಯೆ ಆಕಸ್ಮಿಕವಾಗಿ ಒಂದು ಸಮಸ್ಯೆ ಎದುರಾಯಿತು. ವಧು-ವರ ಇಬ್ಬರೂ 16 ನೇ ಮಹಡಿಯ ಸ್ಥಳಕ್ಕೆ ಲಿಫ್ಟ್ ನಲ್ಲಿ ಹೋಗುತ್ತಿರುವಾಗ ಮೊದಲ ಮತ್ತು ಎರಡನೆಯ ಮಹಡಿಯ ಮಧ್ಯದಲ್ಲಿ ಲಿಫ್ಟ್ ಹಠಾತ್ ನಿಂತುಬಿಟ್ಟಿತು.
ಲಿಫ್ಟ್ ನಲ್ಲಿ ಸಿಲುಕಿ ಹಾಕಿಕೊಂಡ ವಧು ಮತ್ತು ವರನಿಗೆ ಈ ಸಮಸ್ಯೆ ಕೆಲವೇ ಕ್ಷಣಗಳಲ್ಲಿ ಬಗೆಹರಿಯಬಹುದು ಎಂದಿದ್ದರು, ಆದರೆ ಹೀಗಾಗದೆ ಇಬ್ಬರೂ ತಮ್ಮ ಕುಟುಂಬದ ಕೆಲವು ಸದಸ್ಯರ ಜೊತೆಗೆ ಸುಮಾರು ಎರಡು ಗಂಟೆಗಳ ವರೆಗೆ ಲಿಫ್ಟ್ ನಲ್ಲಿಯೇ ಉಳಿದಿದ್ದರು. ಲಿಫ್ಟ್ ನಲ್ಲಿ ವಧುವಿನ ಸಹೋದರಿ ಮತ್ತು ಕಾರ್ಯಕ್ರಮಕ್ಕೆ ಬಂದಂತಹ ಬೇರೆ ಸಂಬಂಧಿಕರೂ ಸಹ ಜೊತೆಯಲ್ಲಿದ್ದರು. ಇವರೆಲ್ಲ ಲಿಫ್ಟ್ ನಲ್ಲಿ ಸಿಕ್ಕಿ ಬಿದ್ದಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಲಿಫ್ಟ್ ಓಪನ್ ಆಗದೆ ಇದ್ದಾಗ ಕೊನೆಗೆ ಫಾಯರ್ ಬ್ರಿಗೇಡ್ ದವರನ್ನು ಕರೆಯಬೇಕಾಯಿತು. ಶಾರ್ಲೆಟ್ ಫಾಯರ್ ಡಿಪಾರ್ಟ್ಮೆಂಟ್ ನ ಕಾರ್ಮಿಕರು ಬಂದು ಎರಡು ಗಂಟೆಗಳ ಪರಿಶ್ರಮದ ನಂತರ ಲಿಫ್ಟ್ ನ್ನು ಕೆಲವು ಮಹಡಿಗಳ ವರೆಗೆ ಮೇಲೆ ಏರಿಸಿ ನಂತರ ರೋಪ್ ನ ಸಹಾಯದಿಂದ ಎಲ್ಲರನ್ನೂ ಲಿಫ್ಟ್ ನಿಂದ ಹೊರಗೆ ತೆಗೆಯಲಾಯಿತು.
ಲಿಫ್ಟ್ ನಿಂದ ಮುಕ್ತ ಮಾಡಲು ಬೇಕಾಯಿತು 2 ಗಂಟೆ…

ಈ ಸಂಪೂರ್ಣ ರೆಸ್ಕ್ಯೂ ನಲ್ಲಿ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಅನುಚಿತ ಘಟನೆಗಳ ಬಗ್ಗೆ ವರದಿಯಾಗಿಲ್ಲ. ಆದರೆ ವಧು-ವರ ಇಬ್ಬರೂ ತಮ್ಮ ಕಾರ್ಯಕ್ರಮಕ್ಕೆ ಹೋಗುವಷ್ಟರಲ್ಲಿ ಕಾರ್ಯಕ್ರಮ ಮುಗಿದು ಹೋಗಿತ್ತು. ಭೂಮಿಯಿಂದ ಲಿಫ್ಟ್ ಕೇವಲ 5 ರಿಂದ 6 ಅಡಿಗಳಷ್ಟು ಎತ್ತರದ ಮೇಲೆ ಹೋಗುತ್ತಿದ್ದಂತೆಯೇ ನಿಂತು ಬಿಟ್ಟಿತ್ತು. ಈ ಸಂದರ್ಭದಲ್ಲಿ ವಧು, ನಾನು ನನ್ನ ಪತಿಯ ಜೊತೆಗೆ ಇದ್ದದ್ದು ತುಂಬಾ ಖುಷಿ ಕೊಟ್ಟಿತು. ಇದು ನನ್ನ ಜೀವನದ ಉತ್ತಮ ಕ್ಷಣಗಳು ಎಂದು ತನ್ನ ಭಾವನೆಗಳನ್ನು ವ್ಯಕ್ತ ಮಾಡಿದ್ದಾಳೆ. ಆದರೆ ನಾನು ನನ್ನ ಸಂಬಂಧಿಕರಿಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಇದೊಂದು ಮನಸ್ಸಿಗೆ ನೋವಾಯಿತು ಎಂದಿದ್ದಾಳೆ.