‘ಬಾಹುಬಲಿ’ ಸಿನಿಮಾ ನಂತರ ಇದುವರೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ‘ದೇವಸೇನಾ’, ಕಾರಣ ಇಲ್ಲಿದೆ ನೋಡಿ!

 

ಎಸ್ ಎಸ್ ರಾಜಮೌಳಿ ಅವರ ‘ಬಾಹುಬಲಿ’ ಚಿತ್ರದ ದೇವಸೇನಾ ಅಂದರೆ ಅನುಷ್ಕಾ ಶೆಟ್ಟಿ ಹೆಸರು ಬಂದಾಗಲೆಲ್ಲ ನೀಲಿ ಸೀರೆ ಉಟ್ಟು ಕತ್ತಿ ಹಿಡಿದು ಕಾದಾಡುತ್ತಿರುವ ಚಿತ್ರ ಮನದಲ್ಲಿ ಮೂಡುತ್ತದೆ. ಇವತ್ತಿಗೂ ಅವರ ಆ ಲುಕ್‌ಗೆ ಎಷ್ಟೋ ಜನರು ಫಿದಾ ಆಗಿದ್ದಾರೆ.

ಅಷ್ಟೇ ಅಲ್ಲ, ಬಾಹುಬಲಿ ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಅಂದರೆ ಪ್ರಭಾಸ್‌ನ ಜೊತೆಯಲ್ಲಿ ಅವನ ರಾಜ್ಯಕ್ಕೆ ಹೋಗಲು ದೇವಸೇನಾ ಸಿದ್ಧವಾದಾಗ ಆ ಲುಕ್ ನಲ್ಲಿ ಎಲ್ಲರ ಮನಸ್ಸು ಕಚಗುಳಿ ಗೊಳಿಸುತ್ತದೆ. ಮೊದಲೇ ಸುಂದರವಾಗಿರುವ ಅನುಷ್ಕಾ ಆ ಅವತಾರದಲ್ಲಿ ಅವರ ಸೌಂದರ್ಯ ಎರಡು ಪಟ್ಟು ಹೆಚ್ಚಾಗಿ ಕಾಣುತ್ತಿತ್ತು. ಎಲ್ಲರಿಗೆ ಅವಳ ಸೌಂದರ್ಯವು ಸಹ ಮೆಚ್ಚುಗೆಯಾಗಿತ್ತು. ಬಾಹುಬಲಿಯಲ್ಲಿ ಮಾತ್ರವಲ್ಲ, ದಕ್ಷಿಣದ ಹಲವು ಚಿತ್ರಗಳಲ್ಲಿ ಅನುಷ್ಕಾ ತನ್ನ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ನಟಿ ಅನುಷ್ಕಾ ಬಹಳ ದಿನಗಳಿಂದ ಎಲ್ಲೋ ಅಜ್ಞಾತವಾಗಿ ಹೋಗಿದ್ದರು. ಬಾಹುಬಲಿ ನಂತರ ಒಂದೆರಡು ಸಿನಿಮಾ ಮಾಡಿದ ನಂತರ ಅನುಷ್ಕಾ ನಾಪತ್ತೆಯಾಗಿದ್ದರು. ಆದರೆ ಇತ್ತೀಚೆಗಷ್ಟೇ ಸೌತ್ ನ ಈ ನಟಿ ಒಂದು ದೇವಸ್ಥಾನದಲ್ಲಿ ಕಾಣಿಸಿಕೊಂಡರು, ಆದರೆ ಅವರು ಸಂಪೂರ್ಣವಾಗಿ ಬದಲಾಗಿದ್ದ ಹಾಗೆ ಕಾಣುತ್ತಿದ್ದರು. ಒಮ್ಮೆಲೇ ಅವರನ್ನು ಗುರುತಿಸುವದು ಸಹ ಕಷ್ಟವಾಗಿತ್ತು. ಸದ್ಯಕ್ಕೆ ಅವರ ಹೆಚ್ಚಾದ ತೂಕದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅವರ ತೂಕದಿಂದ ಬೇಸರಪಟ್ಟ ಅಭಿಮಾನಿಗಳು ಮೊದಲಿನ ಅನುಷ್ಕಾ ಳನ್ನು ಕಾಣಲು ಬಯಸುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ಬಹಳ ದಿನಗಳಿಂದ ಜನಮಾನಸದಿಂದ ದೂರವಿದ್ದರು. ಸುದೀರ್ಘ ವಿರಾಮದ ನಂತರ ಮಹಾಶಿವರಾತ್ರಿಯ ಸಂದರ್ಭದಲ್ಲಿ ಒಂದು ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಅವರ ಅಭಿಮಾನಿಗಳು ಬಹಳಷ್ಟು ದಿವಸಗಳ ನಂತರ ಇವರನ್ನು ನೋಡಿ ತುಂಬನೆ ಸಂತಸ ಪಟ್ಟರು.

ಆದರೆ ಕೆಲವರು ಅವರ ದೇಹವನ್ನು ಕಂಡು ತುಂಬಾನೇ ಬೇಸರಗೊಂಡರು. ಏಕೆಂದರೆ ಅವರ ಹೆಚ್ಚಿರುವ ತೂಕ ಅವರ ಸೌಂದರ್ಯ ಮುಚ್ಚು ಮರೆ ಮಾಡುತ್ತಿತ್ತು. ಹೀಗಾಗಿ ಕೆಲವರು ಅವರನ್ನು ಬಾಡಿ ಶೇಮ್ ಮಾಡಲು ಪ್ರಾರಂಭಿಸಿದರು. ಅನುಷ್ಕಾ ಶೆಟ್ಟಿ ಈ ಬಾರಿ ಸರಳವಾದ ಬಿಳಿ ಸಲ್ವಾರ್ ಸೂಟ್ ಧರಿಸಿದ್ದರು. ಈ ಫೋಟೋದಲ್ಲಿ ಅನುಷ್ಕಾ ತೂಕ ಹೆಚ್ಚಿಸಿಕೊಂಡಿದ್ದ ಹಾಗೆ ಕಾಣುತ್ತಿದ್ದರು.

ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಬಾಡಿ ಶೇಮಿಂಗ್ ಅಂದರೆ ಹೆಚ್ಚಿದ ತೂಕದಿಂದಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅಭಿಮಾನಿಗಳು ಕಮೆಂಟ್ ಮಾಡಿ ಮೊದಲಿನಂತೆ ಸ್ಲಿಮ್ ಆಗುವಂತೆ ಸಲಹೆ ನೀಡುತ್ತಿದ್ದಾರೆ. ಅನುಷ್ಕಾ ಅವರ ಈ ಸ್ಥಿತಿಯನ್ನು ನೋಡಿದ ಅಭಿಮಾನಿಗಳು ತೂಕ ಇಳಿಸಿಕೊಳ್ಳುವಂತೆ ವಿನಂತಿಸುತ್ತಿದ್ದಾರೆ.

ಅದೇ ಸಮಯದಲ್ಲಿ ಅನುಷ್ಕಾ ಅವರು ನಟಿಯಾಗಿ ಇನ್ನಷ್ಟು ಸಿನಿಮಾಗಳಲ್ಲಿ ನೋಡಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಏತನ್ಮಧ್ಯೆ, ನಟಿಯಾಗುವ ಮೊದಲು, ಅನುಷ್ಕಾ ವೃತ್ತಿಪರ ಯೋಗ ತರಬೇತುದಾರರಾಗಿದ್ದರು ಮತ್ತು ಅತ್ಯುತ್ತಮ ಯೋಗ ವೃತ್ತಿಪರರಾಗಿದ್ದರು.

ಮೊದಲು ಮುಂಬೈನಲ್ಲಿ ಯೋಗಾ ಸೆಷನ್‌ಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ದೇಹದ ಕಡೆಗೆ ಇಷ್ಟೊಂದು ದುರ್ಲಕ್ಷ ಹೇಗೆ ಮಾಡಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆ ಯಾಗಿದೆ. ಮತ್ತೊಂದೆಡೆ, ಅನುಷ್ಕಾ ಬಗ್ಗೆ ಹೇಳುವದಾದರೆ, ಅವರು ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ಇನ್ನೂ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.