Video; ಹುಷಾರು! ಮಂಗ ಮಾಡುತ್ತಿದ್ದಾನೆ ತಯಾರಿ! ಇವತ್ತು ಕಾದಿದೆ ಮಾರಿ ಹಬ್ಬ, ಯಾರಿಗೆ ಗೊತ್ತಿಲ್ಲ?
ಮಂಗವಿದ್ದಲ್ಲಿ ಮಂಗಾಟ ಇದ್ದದ್ದೆ, ಅಲ್ವಾ? ಆದರೆ ಇಲ್ಲಿ ಸ್ವಲ್ಪ ಮ್ಯಾಟರ್ ಫುಲ್ ಸೀರಿಯಸ್ ಆಗಿದೆ. ಮಂಗನ ಮಂಗಾಟದ ವಿಡಿಯೋಗಳು ನೆಟ್ಟಿಗರಿಗೆ ಎಲ್ಲಕ್ಕೂ ಹೆಚ್ಚು ಇಷ್ಟವಾಗುತ್ತವೆ. ಇಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಣದಲ್ಲಿ ವೈರಲ್ ಆಗುತ್ತವೆ.
ಕೆಲವೊಂದು ಮಂಗಗಳು ತುಂಬಾ ವಿಚಿತ್ರವಾಗಿ ವರ್ತಿಸುತ್ತವೆ. ಈ ವರ್ತನೆ ಮನುಷ್ಯನಿಗೆ ತುಂಬಾ ಯೂನಿಕ್ ಅನಿಸುತ್ತದೆ. ಇದಕ್ಕೂ ಮೊದಲು ಮಂಗಗಳ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗಿವೆ. ಅವುಗಳಲ್ಲಿ ಒಂದು ಮಂಗ ಬಟ್ಟೆ ತೊಳೆಯುತ್ತಿದ್ದರೆ ಇನ್ನೊಂದು ಮಂಗ ಹುಡುಗನೊಬ್ಬನಿಗೆ ಬ್ರೂಸ್ ಲೀ ತರ ಕಿಕ್ ನೀಡುತ್ತೆ.
ಸದ್ಯ ಇಲ್ಲಿ ನೋಡಲಿರುವ ಮಂಗನ ವಿಶೇಷ ದೃಶ್ಯವೂ ನಿಮಗೆ ತುಂಬಾ ಯೋಚಿಸಲು ಎಡೆಮಾಡಿಕೊಡುತ್ತದೆ. ಕಾರಣ ಈ ವಿಡಿಯೋದಲ್ಲಿ ಕಂಡು ಬರುವಂತ ದೃಶ್ಯ ತುಂಬಾ ಸೀರಿಯಸ್ ಆಗಿದೆ. ನಾನ್ಯಾಕೆ ಸೀರಿಯಸ್ ಸೀರಿಯಸ್ ಎಂದು ಮೇಲಿಂದ ಮೇಲೆ ಹೇಳುತ್ತಿರುವುದೆಂದರೆ ಪ್ರಸ್ತುತ ದೃಶ್ಯ ನೋಡಿದ ನಂತರ ನೀವು ಹೌದಲ್ಲಾ ಎನ್ನುತ್ತೀರಿ.
ಇಲ್ಲಿ ಮಂಗವು ದೊಡ್ಡ ಚೂರಿಯನ್ನು ಕೈಯಲ್ಲಿ ಹಿಡಿದು ಕಲ್ಲಿಗೆ ತಿಕ್ಕಿ ತಿಕ್ಕಿ ಹರಿತವನ್ನಾಗಿ ಮಾಡುತ್ತಿದೆ. ಇದರ ಮೇಲಿಂದ ಇಂದು ಮಂಗ ಏನಾದರೂ ದೊಡ್ಡ ರಾದ್ದಾಂತ ಮಾಡುವ ಹುನ್ನಾರದಲ್ಲಿ ಇದೆ ಎಂದು ತಿಳಿದು ಬರುತ್ತಿದೆ. ಅದಕ್ಕೆ ಆದಷ್ಟು ಈ ಮಂಗನಿಂದ ದೂರವಿರುವುದೇ ಒಳ್ಳೆಯದು ಎಂದು ತಿಳಿಯಿರಿ. ಈ ಕೆಲಸ ಮಾಡುವಾಗ ಮಂಗನ ತದೇಕಚಿತ್ತ ನೋಡಿದರೆ ತುಂಬಾ ಅದ್ಭುತವೆನಿಸುತ್ತದೆ. ಮಂಗ ಮನುಷ್ಯನ ಹಾಗೆ ಈ ರೀತಿ ಮಾಡಬಹುದೇ ಎಂಬ ಯೋಚನೆ ತಲೆಯಲ್ಲಿ ಬರದೇ ಇರದು. ಚೂರಿಗೆ ಸಾಣೆ ಹಚ್ಚುವಾಗ ಇಲ್ಲಿ ನೀರಿನ ಉಪಯೋಗ ಮಾಡುತ್ತಿರುವುದನ್ನು ನೋಡಿದರೆ ಇದರಲ್ಲಿ ಮಂಗ ತುಂಬಾ ಪಳಗಿದೆ ಎನ್ನುವಂತಿದೆ.
ನೋಡಿ ಈ ವಿಡಿಯೋ…
ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸಾಕಷ್ಟು ಜನರನ್ನು ರಂಜಿಸಿದೆ.