ಮದುವೇಲಿ ಸಂಪ್ರದಾಯ ಮಾಡಿತು ಎಡವಟ್ಟು; ವರ್ಕೌಟ್ ಆಯಿತು ನ್ಯೂಟನ್ ನ 3 ನಿಯಮ! ಪಾಸ್ ಆಯಿತು ಒಬ್ಬರಿಂದ ಒಬ್ಬರಿಗೆ…
ಸೋಶಿಯಲ್ ಮೀಡಿಯಾ ಅಂದರೆ ವೈರಲ್ ವಿಡಿಯೋಗಳ ದೊಡ್ಡ ವೇದಿಕೆ. ಇಲ್ಲಿ ನೇಟಿಜನ್ಸ್ ಗಳಿಗೆ ಯಾವ ವಿಡಿಯೋ ಇಷ್ಟವಾಗುತ್ತದೆ, ಯಾವುದು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏನಾದರೂ ಒಂದು ಕಾರಣದಿಂದ ದಿನಂಪ್ರತಿ ಯಾವುದಾದರೂ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಗೆ ಆನಂದ, ಸಂತೋಷ ನೀಡಿದರೆ ಇನ್ನು ಕೆಲವು ವಿಡಿಯೋಗಳು ತಮಾಷೆಯಿಂದ ಕೂಡಿರುತ್ತದೆ. ಕೆಲವು ವಿಡಿಯೋಗಳನ್ನಂತೂ ನೋಡಿದಾಗ ಕೋಪ ತಾರಕಕ್ಕೇರುತ್ತದೆ. ಇನ್ನು ಕೆಲವು ವಿಡಿಯೋಗಳು ನಮಗೆ ಜೀವನ ಜೀವಿಸುವ ನಿಜವಾದ ಪಾಠವನ್ನು ಸಹ ಹೇಳಿಕೊಡುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಂದರ್ಭದಲ್ಲಿ ನಡೆದ ಕೆಲವು ವಿಚಿತ್ರ ಘಟನೆಗಳು ತುಂಬಾ ತಮಾಷೆಯಿಂದ ಕೆಲವು ತುಂಬಾ ಗಂಭೀರತೆಯಿಂದ ಕೂಡಿರುತ್ತವೆ. ಮದುವೆಗಳು ಕೆಲವು ಸಲ ಮೆರವಣಿಗೆಯಿಂದ ಸುದ್ದಿಯಾದರೆ ಇನ್ನು ಕೆಲವು ಸಲ ವಧು-ವರರ ಸ್ಪೆಷಲ್ ಎಂಟ್ರಿಯಿಂದ ಸುದ್ದಿಯಾಗುತ್ತವೆ. ಎಷ್ಟೋ ಸಲ ವಧು-ವರರ ಮಧ್ಯದಲ್ಲಿ ಜಗಳ, ಕೋಪ, ಮುನಿಸಿಕೊಳ್ಳುವಂಥ ಘಟನೆಗಳು ಸಹ ನಡೆಯುವುದುಂಟು. ಈಗ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಮದುವೆಯಲ್ಲಿ ನಡೆದ ತುಂಬಾ ವಿಶೇಷ ದೃಶ್ಯದ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರಿಗೆ ನಗು ಏನು ಮಾಡಿದರೂ ತಡೆಯಲಾಗುತ್ತಿಲ್ಲ.
ಪ್ರಸ್ತುತ ವಿಡಿಯೋ ದೃಶ್ಯದಲ್ಲಿ ಕಂಡುಬರುವ ಪ್ರಕಾರ, ಮದುವೆಯ ವಿಧಿ ವಿಧಾನಗಳು ಜೋರಾಗಿ ನಡೆದಿದೆ. ಕೆಲವು ಕಡೆ ಮದುವೆಯಲ್ಲಿ ವಧು ವರರಿಗೆ ಸೋದರ ಮಾವಂದಿರರು ಅಥವಾ ಇನ್ನು ಬೇರೆ ಯಾರಾದರೂ ಸಂಬಂಧಿಕರು ಎತ್ತಿಕೊಂಡು ಮೇಲೆ ಹಿಡಿದಾಗ ಹೂಮಾಲೆಯನ್ನು ಪರಸ್ಪರ ಕೊರಳಿಗೆ ಹಾಕುವ ಸಂಪ್ರದಾಯವಿರುತ್ತದೆ. ಇದೇ ಸಂಪ್ರದಾಯ ಇಲ್ಲಿ ಒಂದು ಎಡವಟ್ಟು ಮಾಡಿದೆ.
ಸಂಪ್ರದಾಯದ ಪ್ರಕಾರ ವರನಿಗೆ ಸೋದರ ಮಾವ ಇತ್ತ ಎತ್ತಿ ಹಿಡಿದಾಗ, ಅತ್ತ ವಧುವಿಗೆ ಆಕೆಯ ಸೋದರ ಮಾವ ಅಥವಾ ಸೋದರ ಸಂಬಂಧಿ ಎತ್ತಿಕೊಂಡು ಹಿಡಿಯುತ್ತಾನೆ. ಇಲ್ಲಿ ಇಬ್ಬರು ವಧು-ವರರು ಪರಸ್ಪರ ಹೂಮಾಲೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಈ ಸಂಪ್ರದಾಯ ಮುಗಿದ ನಂತರ ಇಬ್ಬರಿಗೂ ಕೆಳಗೆ ಇಳಿಸಿದ ಮೇಲೆ ಹಠಾತ್ ಒಂದು ಇನ್ಸಿಡೆಂಟ್ ನೋಡಲು ಸಿಗುತ್ತದೆ.
ಅದೇನೆಂದರೆ ವಧು ಕೆಳಗೆ ತಿರುಗಿ ಇಳಿದವಳೇ ಸಡನ್ ಆಗಿ ತನ್ನನ್ನು ಎತ್ತಿದ ವ್ಯಕ್ತಿಗೆ ಜೋರಾಗಿ ಕಪಾಳಮೋಕ್ಷ ಮಾಡುತ್ತಾಳೆ. ವಿಷಯ ಇಲ್ಲಿಗೆ ನಿಲ್ಲುವುದಿಲ್ಲ. ಕಪಾಳ ಮೋಕ್ಷ ಮಾಡಿಕೊಂಡ ವ್ಯಕ್ತಿ ಕೆಲವು ಕ್ಷಣ ಸ್ಥಬ್ಧನಾಗಿ ಹಾಗೆಯೇ ನಿಲ್ಲುತ್ತಾನೆ, ನಂತರ ಆತನೂ ಸಹ ತನ್ನ ವರಸೆ ಬದಲಾಯಿಸುತ್ತಾ ಬದಿಗೆ ನಿಂತ ತನ್ನ ಹೆಂಡತಿಗೆ ಜೋರಾಗಿ ಕಪಾಳ ಮೋಕ್ಷ ಮಾಡುತ್ತಾನೆ. ವಧುವನ್ನು ಎತ್ತಿಕೊಳ್ಳುವ ಐಡಿಯಾ ಬಹುಷಃ ಆಕೆಯೇ ಹೇಳಿರಬೇಕು ಎಂದು ಇಲ್ಲಿ ತಿಳಿದು ಬರುತ್ತದೆ.
ವಿಡಿಯೋ ಮಿಸ್ ಮಾಡದೆ ಕೊನೆಯವರೆಗೂ ನೋಡಿ…
View this post on Instagram
ಪ್ರಸ್ತುತ ಈ ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದರೆ ಇನ್ಸ್ಟಾಗ್ರಾಮ್ ನಲ್ಲಿ ಸಂಸ್ಕಾರಿ ಸಿಂಗಲ್ಸ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು 1.9 ಮಿಲಿಯನ್ ವೀಕ್ಷಣೆ ಪಡೆದಿದ್ದು ಲಕ್ಷಾವಧಿ ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.
ಕಮೆಂಟ್ ಬಾಕ್ಸ್ ನಲ್ಲಿ ವ್ಯಕ್ತ ಮಾಡಿದ ಕಾಮೆಂಟ್ ಗಳ ಬಗ್ಗೆ ಹೇಳುವಾದರೆ, ನೆಟ್ಟಿಗರು ತಮ್ಮ ಮನದ ಇಂಗಿತವನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಒಬ್ಬ ಯೂಸರ್ ಈ ದೃಶ್ಯವನ್ನು ನೋಡಿ ‘ask before doing the task’ ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ, “ಇಲ್ಲಿ ನ್ಯೂಟನ್ ನ 3 ನೆ ನಿಯಮ ವರ್ಕೌಟ್ ಆಗಿದೆ” ಎಂದಿದ್ದಾನೆ. ಹೀಗೆ ಒಟ್ಟು 675 ಜನರು ತಮ್ಮ ಪ್ರತಿಕ್ರಿಯೆ ವ್ಯಕ್ತ ಮಾಡಿದ್ದಾರೆ.