ಬೆಲಿ ಡಾನ್ಸರ್ ಮುಂದೆ ಗರಗರನೆ ತಲೆ ತಿರುಗಿಸಿ ಅದ್ಭುತ ಕೌಶಲ್ಯ ಮೆರೆದ ಯುವಕ; ಯುವತಿ ಡಾನ್ಸ್ ಮಾಡುವುದನ್ನೇ ಬಿಟ್ಟು ಪಲಾಯನ.
ಇತ್ತೀಚೆಗೆ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಬಹುಶಃ Instagram ನಲ್ಲಿಯ ಕಂಟೆಂಟ್ ಗಳು ತುಂಬಾ ಚಿಕ್ಕದಾಗಿರುವ ಕಾರಣದಿಂದಾಗಿ ಇಂಟರ್ನೆಟ್ ಯೂಸರ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಕಾನ್ಸೆಪ್ಟ್ ಎಲ್ಲವೂ ತುಂಬಾ ಕಡಿಮೆ ಕ್ಷಣಗಳಲ್ಲಿ ಕ್ಲಿಯರ್ ಆಗುತ್ತದೆ, ಅಲ್ವಾ? ಇದೇ ರೀತಿಯ ಒಂದು ಚಿಕ್ಕ ಅಷ್ಟೇ ಸೂಪರ್ ವಿಡಿಯೋ ನಿಮಗಾಗಿ ತಂದಿದ್ದೇವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮುಖ್ಯ ಕಂಟೆಂಟ್ ಎಂದರೆ ಡಾನ್ಸ್. ಈ ಡಾನ್ಸ್ ಎಲ್ಲ ವಯಸ್ಸಿನವರಿಗೂ ಆಕರ್ಷಿಸುತ್ತದೆ. ಅದರಲ್ಲೂ ಹುಡುಗಿಯರು ಅಥವಾ ಆಂಟಿಯರು ಮಾಡಿದ ಡಾನ್ಸ್ ಎಂದಾಗ ಕೇಳಬೇಕೇ? ಮತ್ತಷ್ಟು ಇಂಟರೆಸ್ಟ್ ನಿಂದ ನೋಡುತ್ತಾರೆ. ಆದರೆ ಸದ್ಯ ಇಲ್ಲಿ ನೋಡಲಿರುವ ಡಾನ್ಸ ವಿಡಿಯೋ ತುಂಬಾ ವಿಶೇಷವಾಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸ್ಟೇಜ್ ಮೇಲೆಯೇ ಬೆಲಿ ಡಾನ್ಸ್ ಮಾಡಲು ಹೆಜ್ಜೆ ಹಾಕುತ್ತಾಳೆ. ಆದರೆ ಅದೇ ಸಮಯಕ್ಕೆ ಅಲ್ಲಿಯೇ ಬೇರೊಬ್ಬ ಯುವಕ ಆಕೆಗೆ ಸಾತ್ ನೀಡಲು ನಿಂತಿರುತ್ತಾನೆ. ಆತ ಮಾಡುವ ಅದ್ಭುತ ಅಷ್ಟೆ ವಿಚಿತ್ರ ಕೌಶಲ್ಯ ನೋಡಿ ಬೆಲಿ ಡಾನ್ಸ್ ಮಾಡುವ ಯುವತಿ ಅಲ್ಲಿಂದ ತಟ್ಟನೆ ಜಾಗ ಖಾಲಿ ಮಾಡುತ್ತಾಳೆ. ಅಂಥ ಯಾವ ಸೀನ್ ಕಂಡು ಬರುತ್ತದೆ ಬನ್ನಿ ನೋಡೋಣ.
ವಿಡಿಯೋದ ದೃಶ್ಯದಲ್ಲಿ ಮೊದಲು ತೆಳ್ಳನೆಯ ಯುವತಿ ಸೊಂಟ ಬಳುಕಿಸುತ್ತ ನಯವಾಗಿ ಎಂಟ್ರಿ ಮಾಡುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಯುವಕ ತನ್ನ ಕೌಶಲ್ಯ ತೋರಿಸಲು ಶುರು ಮಾಡುತ್ತಾನೆ. ಮೊದಲು ನಿಧಾನ ಗತಿಯಲ್ಲಿ ಆತ ತನ್ನ ಕುತ್ತಿಗೆಯನ್ನು ತಿರುಗಿಸಲು ಪ್ರಾರಂಭಿಸುತ್ತಾನೆ. ಅದನ್ನು ನೋಡಿದ ಯುವತಿ ಚಪ್ಪಾಳೆ ತಟ್ಟಿ ಅಪ್ರಿಷಿಯೆಟ್ ಮಾಡುತ್ತಾಳೆ. ಕೆಲವೇ ಕ್ಷಣಗಳ ನಂತರ ಯುವಕ ತನ್ನ ಕುತ್ತಿಗೆಯನ್ನು ಅದ್ಯಾವ ಪರಿಯಲ್ಲಿ ತಿರುಗಿಸಲು ಶುರು ಮಾಡುತ್ತಾನೆ ಎಂದರೆ ಅದನ್ನು ನೋಡುತ್ತಿರುವ ನಮಗೂ ಸಹ ಕಣ್ಣಿಗೆ ಕತ್ತಲು ಬರುತ್ತದೆ. ಒಂದೇ ರೀತಿ ಯುವಕ ತನ್ನ ಕುತ್ತಿಗೆಯನ್ನು ಗರಗರನೆ ತಿರುಗಿಸುವದನ್ನು ನೋಡಿದರೆ ಈ ಯುವಕನ ಕುತ್ತಿಗೆಯಲ್ಲಿ ಎಲುಬುಗಳು ಇದೆಯೋ ಅಥವಾ ಬರೀ ಸಾಫ್ಟ್ ರಬರ್ ಅಷ್ಟೇ ಇದೆಯೋ ಎಂಬ ಪ್ರಶ್ನೆ ಹುಟ್ಟುತ್ತದೆ. ಒಂದು ಸಮಯ ಅಂತೂ ಯುವಕ ಹೀಗೆ ಮಾಡುವಾಗ ಆತನ ಕುತ್ತಿಗೆ ಹವೆಯಲ್ಲಿ ಉಡಾಯಿಸುತ್ತದೆ ಏನೋ ಎಂಬಂತೆ ಭಾಸವಾಗುತ್ತದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ಯುವಕನ ಕುತ್ತಿಗೆಯನ್ನು ತಿರುಗಿಸುವ ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ menaheat ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದು, ಲಕ್ಷಾವಧಿ ಜನರು ಪ್ರಸ್ತುತ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ವಿಶೇಷವೆಂದರೆ ಕಾಮೆಂಟ್ ಬಾಕ್ಸ್. ಇಲ್ಲಿ ಅನೇಕರು ಈ ವಿಚಿತ್ರ ವ್ಯಕ್ತಿಯ ದೃಶ್ಯದ ವಿಡಿಯೋವನ್ನು ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಲ್ಲಿ ಒಬ್ಬನು ನೆಟ್ಟಿಗ, “ಇದನ್ನು ಮನೆಯಲ್ಲಿ ಅಪ್ಪಿ ತಪ್ಪಿಯೂ ಮಾಡಲು ಪ್ರಯತ್ನಿಸಬೇಡಿ” ಎಂದು ಸಲಹೆ ನೀಡಿದ್ದಾನೆ. ಇನ್ನೊಬ್ಬ ಯೂಸರ್ “ಈ ವ್ಯಕ್ತಿಯ ಕೊರಳಲ್ಲಿ ಎಲಬುಗಳು ಇವೆಯೋ ಇಲ್ಲವೋ” ಎಂದರೆ, ಇನ್ನೊಬ್ಬ ಯೂಸರ್ ” ಈ ದೃಶ್ಯ ನನ್ನ ತಲೆಯಲ್ಲಿ ತೀವ್ರವಾದ ಮೈಗ್ರೆನ್ ಸ್ಟಾರ್ಟ್ ಮಾಡಿತು” ಎಂದಿದ್ದಾನೆ.