Video; ತನ್ನ ತಾಯಿಗೆ ಚೆನ್ನಾಗಿಯೇ ಆಟ ಆಡಿಸಿದ ಪುಟ್ಟ ಮಗು; ತಾಯಿ ಹೌಹಾರಿದ ಬಗೆ ಒಮ್ಮೆ ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ರಿಲೇಟೆಡ್ ಆದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡುಗರಿಗೆ ತುಂಬಾ ಫನ್ನಿಯಾದರೂ ಮಗು ಮಾತ್ರ ತಾಯಿಗೆ ಚೆನ್ನಾಗಿ ಆಟ ಆಡಿಸಿದೆ. ಇದನ್ನು ನೋಡಿದರೆ ನೀವು ಸಹ ಅನ್ನುವಿರಿ ವಾವ್! ನೈಸ್ ವಿಡಿಯೋ ಎನ್ನುವಿರಿ.

ಇಲ್ಲಿ ಮಗುವೊಂದು ಕೋಣೆಯಲ್ಲಿ ತನ್ನಷ್ಟಕ್ಕೆ ತಾನು ಆಡುತ್ತಿದೆ. ಈ ಸಂದರ್ಭದಲ್ಲಿ ತಾಯಿಯ ಜೊತೆಗೆ ಕಣ್ಣು ಮುಚ್ಚಾಲೆ ಆಟ ಹೇಗೆ ಆಡಿದೆ ನೋಡಿ. ಮಗು ಅಲ್ಲಿಯೇ ಇರುವ ಬಿದಿರಿನ ಬಾಸ್ಕೆಟ್ ಒಳಗಡೆ ಅವಿತುಕೊಳ್ಳುತ್ತದೆ. ಮಗು ಬಾಸ್ಕೆಟ್ ಒಳಗಡೆ ಸೇರಿ ಬಾಸ್ಕೆಟ್ ಸಂಪೂರ್ಣವಾಗಿ ತನ್ನ ಮೇಲೆ ಕವರ್ ಮಾಡಿಕೊಳ್ಳುತ್ತದೆ. ಆಗ ತಾಯಿ ಬಂದು ಮಗುವಿಗೆ ಶೋಧಿಸಲು ಶುರು ಮಾಡುತ್ತಾಳೆ. ಮೊದಮೊದಲು ತಾಯಿ ತನ್ನ ಮಗುವನ್ನು ತುಂಬಾ ನಾರ್ಮಲ್ ಆಗಿ ಬೆಡ್ ಮೇಲೆ ನಂತರ ಬ್ಲಾಂಕೆಟ್ ತೆಗೆದು ಆಮೇಲೆ ಬೆಡ್ ಆಚೆ ಬದಿಗೆ ಹೀಗೆ ಎಲ್ಲ ಕಡೆಗೆ ಹುಡುಕಲು ಯತ್ನಿಸುತ್ತಾಳೆ. ಕಾರಣ ಮಗು ಇಲ್ಲಿಯೇ ಎಲ್ಲಿಯಾದರೂ ಅವಿತು ಕುಳಿತಿದೆ ಎಂದು ಆಕೆ ವಿಚಾರ ಮಾಡುತ್ತಾಳೆ. ಈ ಮಧ್ಯೆ ಆಕೆ ಮಗುವಿಗೆ ಕರೆ ನೀಡುತ್ತಾಳೆ. ಮಗು ಸಹ ರಿಪ್ಲಾಯ ನೀಡುತ್ತದೆ. ಆದರೆ ಮಗು ಮಾತ್ರ ಆಕೆಗೆ ಎಲ್ಲಿಯೂ ಕಂಡು ಬರುವುದಿಲ್ಲ. ವಿಡಿಯೋದ ಕೊನೆಗೆ ಮಾತ್ರ ಮಗುವನ್ನು ತಾಯಿ ಶೋಧಿಸಲು ಯಶಸ್ವಿಯಾಗುತ್ತಾಳೆ. ಅದು ನೋಡಿ ಎಲ್ಲಿ ಕುಳಿತಿದೆ ಮಗು. ಮಗು ಕುಳಿತ ಸ್ಥಾನ ನೋಡಿ ತಾಯಿಗೆ ತುಂಬಾ ಖುಶಿಯಾಗಿ ಮಗುವಿನ ಜೊತೆಗೆ ಎಲ್ಲವನ್ನೂ ಬಿಟ್ಟು ಅಲ್ಲಿಯೇ ಆಟ ಆಡಲು ಶುರು ಮಾಡುತ್ತಾಳೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Auggie (@auggierooturnstwo)

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು, ಇದುವರೆಗೆ ಈ ವೀಡಿಯೋ 58.9 ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು 3.4 ಮಿಲಿಯನ್ ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.