ಬಾಯಿ ಮಾತಿನಲ್ಲೇ ಆಸ್ತಿ ಹಂಚಿಕೆಯ ಒಪ್ಪಂದವನ್ನು ಮಾಡಿಕೊಂಡಿದ್ದೀರಾ.? ಈ ರೀತಿಯ ಒಪ್ಪಂದ ವ್ಯಾಲಿಡ್ ಇರುತ್ತದೆಯೋ ಅಥವಾ ಇಲ್ಲವೋ.? ಇಲ್ಲಿದೆ ಮಾಹಿತಿ..
ಮುಂಚಿನ ಕಾಲದಲ್ಲಿ ರಿಜಿಸ್ಟ್ರೇಷನ್ ಪ್ರೋಸೆಸ್ ಅನ್ನು ಮಾಡುತ್ತಿರಲಿಲ್ಲ. ಕಾನೂನಿನ ಜ್ಞಾನದ ಕೊರತೆಯಿಂದ ಮುಂದೆ ಆಗುವ ತೊಂದರೆಗಳ ಬಗ್ಗೆ ಯೋಚಿಸದೆ, ಸುಮ್ಮನೆ ಬಾಯಿ ಮಾತಿನಿಂದಲೇ ಪಂಚಾಯಿತಿಯನ್ನು ಸೇರಿಸಿ ಅವರವರೇ ಒಂದು ತೀರ್ಮಾನಕ್ಕೆ ಬಂದು ಆಸ್ತಿ ಹಂಚಿಕೆಯನ್ನು ಅಥವಾ ಹಕ್ಕು ಬಿಟ್ಟು ಕೊಡುವಿಕೆಯನ್ನು ಮಾಡುತ್ತಿದ್ದರು. ಬಾಯಿ ಮಾತಿನ ಮೂಲಕವೇ ನನಗೆ ಇಷ್ಟು ಆಸ್ತಿ ಬರಬೇಕು ಹಾಗೂ ನಿಮಗೆ ಇಷ್ಟು ಆಸ್ತಿ ಸಲ್ಲುತ್ತದೆ. ತಂದೆ ತಾಯಿಯ ಹೆಸರಿನಲ್ಲಿ ಇಷ್ಟಿರಬೇಕು ಎಂದು ಅವರೇ ನಿರ್ಧರಿಸಿ ಮುಂದುವರೆಯುತ್ತಿದ್ದರು. ಯಾವುದೇ ರಿಜಿಸ್ಟ್ರೇಷನ್ ಗಳನ್ನು ಮಾಡುತ್ತಿರಲಿಲ್ಲ.
ಕಾಲ ಸರಿದಂತೆ ಭೂಮಿಯ ಬೆಲೆಯು ಹೆಚ್ಚಾಗುತ್ತಾ ಹೋಯಿತು. ಸಂಪತ್ತಿನ ಬೆಲೆ ಕಡಿಮೆಯಾಗುತ್ತಾ ಬಂತು. ಆಸ್ತಿಗಳಿಗಾಗಿ ಕಚ್ಚಾಡುವಂತಹ ಪರಿಸ್ಥಿತಿ ಬಂತು. ಅಣ್ಣ ತಮ್ಮಂದಿರ ಮಧ್ಯೆ ನಿನಗೆ ಜಾಸ್ತಿ ನನಗೆ ಕಡಿಮೆ ಎನ್ನುವ ಜಗಳ ಪ್ರಾರಂಭವಾಯಿತು. ‘ನಾನು ನ್ಯಾಯಾಲಯದ ಮೆಟ್ಟಿಲೇರುವೆ ನನ್ನ ಹಕ್ಕನ್ನು ಪಡೆದುಕೊಳ್ಳುವೆ..’ ಎನ್ನುತ್ತಾ ಕೋರ್ಟ್ ನಲ್ಲಿ ದಾವೆಗಳನ್ನು ಹಾಕಲು ಪ್ರಾರಂಭಿಸಿದರು. ಮುಂಚೆ ರಿಜಿಸ್ಟ್ರೇಷನ್ ಆಗದಿರುವ ಕಾರಣದಿಂದಾಗಿ ದಾಖಲೆಗಳು ಸರಿಯಾಗಿ ಇರುತ್ತಿರಲಿಲ್ಲ.
ದಾಖಲೆಗಳ ಕೊರತೆಯಿಂದಾಗಿ ಹೆಚ್ಚಿನ ಪಾಲನ್ನು ಪಡೆಯುವುದರ ಸಲುವಾಗಿ ನ್ಯಾಯಾಲಯದಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿಎಲ್ಲರ ಮನೆಯಲ್ಲಿಯೂ ತಕರಾರು ಶುರುವಾಗಿದೆ. ಉದಾಹರಣೆಗೆ ಒಂದು ಒಟ್ಟು ಕುಟುಂಬವಿರುತ್ತದೆ. ಅವಿಭಕ್ತ ಕುಟುಂಬದಲ್ಲಿ ತಂದೆ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಅನೇಕ ಜನರು ಇರುತ್ತಾರೆ. ಹೆಣ್ಣು ಮಕ್ಕಳೆಲ್ಲರು ಮದುವೆಯಾಗಿ ಹೋಗುತ್ತಾರೆ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು, ‘ತಮಗೆ ಆಸ್ತಿಯಲ್ಲಿ ಯಾವ ಪಾಲು ಬೇಡ..ನಮ್ಮ ಹಕ್ಕನ್ನು ಕೂಡ ನೀವೇ ಹಂಚಿಕೊಳ್ಳಿ’ ಎಂದು ಬಿಟ್ಟು ಕೊಡುತ್ತಿದ್ದರು.
ಆ ರೀತಿಯಾಗಿ ಬಿಟ್ಟು ಕೊಟ್ಟ ಆಸ್ತಿ ಯಾರ ಉಳಿಕೆಯಲ್ಲಿ ಇರುತ್ತೋ ಅವರು ತಮ್ಮ ಹೆಸರಿನಲ್ಲಿ ಖಾತೆಯನ್ನು ಮಾಡಿಸಿಕೊಂಡು ಅನುಭವಿಸುತ್ತಾ ಇರುತ್ತಾರೆ. ದಾಖಲೆಗಳನ್ನೆಲ್ಲ ಅವರ ಹೆಸರಿನಲ್ಲಿ ಮಾಡಿಕೊಂಡು ಬಂದಿರುತ್ತಾರೆ. ದಿನ ಕಳೆದಂತೆ ಆಸ್ತಿಯ ವ್ಯಾಲ್ಯೂಯೇಷನ್ ಜಾಸ್ತಿ ಆಗುತ್ತಾ ಹೋಗುತ್ತದೆ ಮತ್ತು ಮದುವೆ ಮಾಡಿಕೊಟ್ಟಂತಹ ಹೆಣ್ಣು ಮಕ್ಕಳು ತಮಗೂ ಕೂಡ ಹಕ್ಕು ಬೇಕು ಎಂದು ಕೇಳುತ್ತಾರೆ. ಅಂದರೆ ಕೇವಲ ಬಾಯಿ ಮಾತಿನಲ್ಲಿ ಬಿಟ್ಟು ಕೊಟ್ಟಿರುತ್ತಾರೆ ಯಾವುದೇ ರಿಜಿಸ್ಟ್ರೇಷನ್ ಅನ್ನು ಮಾಡಿಸದೆ ಇರುವುದರ ಕಾರಣದಿಂದ ಜನರ ಮಾತನ್ನು ಕೇಳಿಸಿಕೊಂಡು ಮತ್ತು ಕಾನೂನಿನ ಜ್ಞಾನವನ್ನು ಪಡೆದುಕೊಂಡು ತಮ್ಮ ಹಕ್ಕು ಬೇಕು ಎಂದು ಕೇಳಲು ಬರಬಹುದು.
ಅಥವಾ ಗಂಡು ಮಕ್ಕಳಲ್ಲಿ ಹಿರಿಯ ಅಣ್ಣನಿಗೆ ಜಾಸ್ತಿ ಹಕ್ಕನ್ನು ನೀಡಿರುತ್ತಾರೆ. ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯಣ್ಣನೇ ಹೊತ್ತಿರುತ್ತಾನೆ. ಆಗ ಉಳಿದಂತಹ ಸಹೋದರ ಸಹೋದರಿಯರು ಎಲ್ಲರೂ ಕೂಡ ಬಾಯಿ ಮಾತಿನ ಮೂಲಕ ಹಿರಿಯ ಅಣ್ಣನಿಗೆ ಸ್ವಲ್ಪ ಜಾಸ್ತಿ ಹಕ್ಕನ್ನು ಕೊಟ್ಟು ಉಳಿದವರು ಕಡಿಮೆ ಹಕ್ಕನ್ನು ಪಡೆದುಕೊಂಡಿರುತ್ತಾರೆ. ತುಂಬಾ ವರ್ಷಗಳು ಆದಮೇಲೆ ಹಿರಿಯಣ್ಣನಿಗೆ ಜಾಸ್ತಿ ಆಸ್ತಿ ಇದೆ ನಮಗೆಲ್ಲ ಕಡಿಮೆ ಇದೆ ಎಂಬ ತಕರಾರು ಮೂಡುತ್ತದೆ. ಎಲ್ಲರಿಗೂ ಸಮಪಾಲು ಬರಬೇಕು ಎಂದು ಕೋರ್ಟ್ ಮೆಟ್ಟಿಲನ್ನು ಏರುವ ಪರಿಸ್ಥಿತಿಯು ಬಂದೊದಗಬಹುದು.
ಈ ರೀತಿಯ ಕೇಸ್ಗಳು ಹೆಚ್ಚಾಗಿ ಕಂಡುಬರುತ್ತಿರುವ ಕಾರಣ ‘ಪ್ರಿನ್ಸಿಪಲ್ ಆಫ್ ಎಸ್ಟೋಪೆಲ್’ ಅನ್ನು ಅನುಸರಿಸುತ್ತಾರೆ. ಎಲ್ಲಾ ಕೇಸ್ ಗಳಿಗೂ ಇದನ್ನು ಅಪ್ಲೈ ಮಾಡಲು ಸಾಧ್ಯವಿಲ್ಲ. ಬಾಯಿ ಮಾತಿನಲ್ಲಿಯೇ ಎಲ್ಲರೂ ಆಸ್ತಿಯನ್ನು ನೀಡಿರುವುದು ಹೌದು ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದಾಗ ಮಾತ್ರ ಅಪ್ಲೈ ಆಗುತ್ತದೆ. ನ್ಯಾಯಾಲಯವು ಕುಲಂಕುಶವಾಗಿ ವಿಚಾರಿಸಿದ ಬಳಿಕ ನಿರ್ಧಾರವನ್ನು ಕೊಡುತ್ತದೆ. ಕೆಲವು ನಿರ್ದಿಷ್ಟ ಸಾಕ್ಷಾಧಾರಗಳ ಆಧಾರಿತವಾಗಿ ‘ಓರಲ್ ಪ್ರಾಪರ್ಟಿ ಸೆಟಲ್ಮೆಂಟ್’ನ್ನು ಮಾನ್ಯಗೊಳಿಸುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ.