Video; ಟ್ರಾಫಿಕ್ ಜಾಮ್ ನಲ್ಲಿ ಹಿಂದಿನ ಕಾರು ಚಾಲಕ ಹಾರ್ನ್ ಹೊಡೆಯುತ್ತಿರುವಾಗ ಮುಂದಿನ ಡ್ರೈವರ್ ಮಾಡಿದ್ದೇನು? ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಇಂಟರ್ನೆಟ್ ಯೂಸರ್ ಗಳಿಗೆ ಅನೇಕ ಅಚ್ಚರಿಯ ದೃಶ್ಯಗಳನ್ನು ತೋರಿಸುತ್ತದೆ. ಸಾಮಾಜಿಕ ಜಾಲತಾಣಗಳಿಂದಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆದ ತುಂಬಾ ವಿಚಿತ್ರ ಹಾಗೂ ರೋಚಕ ದೃಶ್ಯಗಳು ನೋಡಲು ಸಿಗುತ್ತವೆ.

ಈ ಜಗತ್ತಿನಲ್ಲಿ ಅನೇಕ ರೀತಿಯ, ಅನೇಕ ನಮೂನೆಯ ಜನರು ನೋಡಲು ಸಿಗುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿ ಜೀವನ ನಡೆಸುವ ಕೌಶಲ್ಯ, ಪದ್ಧತಿ ಬೇರೆಯೇ ಆಗಿರುತ್ತದೆ. ಅವರ ಒಂದೊಂದು ಸ್ಟೈಲ್ ಗಳನ್ನು ನೋಡಿದಾಗ ಸುಮ್ಮನೆ ಕುಳಿತಾಗಲೂ ಅವರ ನೆನಪು ಆದರೆ ಆಯ್ತು ಅಲ್ಲಿಯೇ ನಗು ಬರಲು ಶುರು ಆಗುತ್ತದೆ. ಸದ್ಯ ನಿಮಗೆ ಇದೇ ರೀತಿಯ ಒಂದು ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡಿಸಲಿದ್ದೇವೆ. ಈ ವ್ಯಕ್ತಿಯ ಕೆಲಸ ನೋಡಿದ ನಂತರ ನೀವು ಈ ಸೀನ್ ಮರೆಯಲಿಕ್ಕೆ ಸಾಧ್ಯವಿಲ್ಲ.

ಪ್ರಸ್ತುತ ವಿಡಿಯೋದಲ್ಲಿ ರಸ್ತೆಯ ಮೇಲೆ ಫುಲ್ ಟ್ರಾಫಿಕ್ ಜಾಮ್ ಆಗಿದೆ ಅನೇಕ ವಾಹನಗಳು ಒಂದರ ಹಿಂದೆ ಒಂದು ನಿಂತಿರುವುದು ಕಂಡುಬರುತ್ತದೆ. ಕೆಲವರು ಇಂಥ ಸಂದರ್ಭದಲ್ಲಿ ಅನಾವಶ್ಯಕವಾಗಿ ವಾಹನದ ಹಾರ್ನ್ ಬಾರಿಸುವವರನ್ನು ನೀವು ನೋಡಿರಬೇಕು. ಇದೇ ರೀತಿಯ ಕಾರು ಚಾಲಕನೊಬ್ಬ ಟ್ರಾಫಿಕ್ ನಿಂದ ಜಾಮ್ ಆದ ಪರಿಸ್ಥಿತಿಯಲ್ಲಿ ಸುಮ್ಮನೆ ಹಾರ್ನ್ ಬಾರಿಸುತ್ತಿದ್ದಾನೆ. ಇಂಥ ಪರಿಸ್ಥಿತಿಯಲ್ಲಿ ಎಷ್ಟೇ ಹಾರ್ನ್ ಬಾರಿಸಿದರೂ ಯಾವುದೇ ರೀತಿಯ ಲಾಭವಾಗುವುದಿಲ್ಲ. ಮುಂದಿನ ವಾಹನಗಳು ಚಲಿಸದೆ ಹಿಂದಿನ ವಾಹನಗಳು ಮುಂದೆ ಹೋಗಲು ಸಾಧ್ಯವೇ ಇಲ್ಲ. ಅದಕ್ಕಾಗಿ ಬರೀ ಕಾಯುವುದೊಂದೇ ಮಾರ್ಗವಿರುತ್ತದೆ.

ಆದರೂ ಕಾರು ಚಾಲಕನೊಬ್ಬ ಮಾನಸಿಕವಾಗಿ ಇದ್ಯಾವುದನ್ನು ಯೋಚನೆ ಮಾಡದೆ ಸುಮ್ಮನೆ ಹಾರ್ನ್ ಬಾರಿಸುತ್ತಿದ್ದಾನೆ. ಆತನ ಕಿರಿಕಿರಿಗೆ ಬೇಸತ್ತು ಮುಂದಿನ ಪಿಕ್ಅಪ್ ಡ್ರೈವರ್ ಒಂದು ಕೆಲಸವನ್ನು ಮಾಡುತ್ತಾನೆ. ಆತನ ಈ ಕೆಲಸವನ್ನು ನೋಡಿ ನೀವು ಬಿದ್ದು ಬಿದ್ದು ನಗುತ್ತಿರಿ.

ಹಾರ್ನ್ ಬಾರಿಸುವ ವ್ಯಕ್ತಿಗೆ ಬೇಸತ್ತು ಟೆಂಪೋ ಡ್ರೈವರ್ ಸಡನ್ ಆಗಿ ಕೆಳಗೆ ಇಳಿದು ಹಿಂದಿನ ಕ್ಯಾಬಿನ್ ಓಪನ್ ಮಾಡಿ ಕಾರಿನ ಡ್ರೈವರ್ ಗೆ ಒಳಗೆ ಸೇರು, ಒಳಗೆ ಸೇರು ಎಂದು ಕೈಸನ್ನೆ ಮಾಡಿ ಹೇಳುತ್ತಾನೆ. ಈ ದೃಶ್ಯ ನೋಡುವವರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Random-XD-Memer (@random_xd_memer)

ಈ ತಮಾಷೆಯ ವಿಶೇಷ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ random_xd_memer ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 31.9 ಮಿಲಿಯನ್ ಗಳ ವರೆಗೆ ವೀಕ್ಷಣೆಯನ್ನು ಪಡೆದಿದ್ದು ಸುಮಾರು 2.9 ಮಿಲಿಯನ್ ಗಳ ವರೆಗೆ ಮೆಚ್ಚುಗೆಯನ್ನು ಗಳಿಸಿದೆ.

ಪ್ರಸ್ತುತ ದೃಶ್ಯವನ್ನು ನೋಡಿ ನೆಟ್ಟಿಗರು ತುಂಬಾ ಇಂಪ್ರೆಸ್ ಆಗಿ 11 ಸಾವಿರಕ್ಕೂ ಹೆಚ್ಚು ಜನರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ತನ್ನ ಪ್ರತಿಕ್ರಿಯೆಯಲ್ಲಿ ಒಬ್ಬ ನೆಟ್ಟಿಗ ” ಕಮ್ ಅಂಡ್ ಎಂಟರ್” ಎಂದಿದ್ದಾನೆ. ಇದನ್ನು ನೋಡಿದ ಬೇರೊಬ್ಬ ನೆಟ್ಟಿಗ, ” ನಡೆ ನಡೆ ಮುಂದೆ ನಡೆ” ಎಂದು ಕಮೆಂಟ್ ಮಾಡಿದ್ದಾನೆ.