ಆಸ್ತಿ ಮಾಲೀಕನ ಮರಣದ ನಂತರ ಆಸ್ತಿ ಪಾಲು ಮಾಡಿಕ್ಕೊಳ್ಳುವುದು ಹೇಗೆ? ಮಾಹಿತಿಯನ್ನು ತಿಳಿದುಕೊಳ್ಳಿ!!

ಸಾಮಾನ್ಯವಾಗಿ ಭಾರತದಲ್ಲಿ ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬಗಳು ಕಂಡು ಬರುತ್ತಿದ್ದವು. ಎಲ್ಲಿ ನೋಡಿದರಲ್ಲಿ ಎಲ್ಲರೂ ಜೊತೆಗೂಡಿ ತಮ್ಮ ತುಂಬು ಕುಂಟುಂಬದೊಡಣೆ ಸಂತೋಷದಿಂದ ಇರುತ್ತಿದ್ದರು ಆದರೆ ಇಂದು ಅವಿಭಕ್ತ ಕುಟುಂಬ ಇರುವದು ಬೆರೆಳೆಣಿಕೆಯಷ್ಟೇ. ತುಂಬು ಕುಟುಂಬದಲ್ಲಿ ಬದುಕುವದರಿಂದ ಕುಟುಂಬದ ಉತ್ತಮ ಸಂಸ್ಕಾರ ದೊರೆಯುವದರ ಜೊತೆಗೆ ಉತ್ತಮ ನಡುವಳಿಕೆ ಹೇಗೆ ಇರಬೇಕು ಎಂಬುದು ಸಹ ತನ್ನಷ್ಟಕ್ಕೆ ತಾನೇ ನಮ್ಮಲ್ಲಿ ಬೆಳೆಯುತ್ತದೆ. ಆದರೆ ಇಂದು ಹುಟ್ಟುತ್ತ ಅಣ್ಣ ತಮ್ಮರಿದ್ದವರು ಬೆಳೆಯುತ್ತ ದಾಯಾದಿಗಳಾಗುತ್ತಾರೆ.

ತುಂಬು ಸಂಸಾರ ಯಾವುದೋ ಕಾರಣಕ್ಕೆ ಬಿರುಕು ಉಂಟಾಗಿ ಅಲ್ಲಿ ಸಂಸಾರ ಒಡೆದು ಹೋಗುತ್ತವೆ. ಹೀಗಾಗಿ ಇಂದು ಎಲ್ಲಿ ನೋಡಿದರಲ್ಲಿ ವಿಭಕ್ತ ಕುಟುಂಬಗಳೇ ಕಾಣಬಹುದು. ವಿಭಕ್ತ ಕುಟುಂಬದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವದಿಲ್ಲ, ಉತ್ತಮ ಮಾರ್ಗದರ್ಶನ ಸಿಗುವುದಿಲ್ಲ, ಸಂಬಂಧಿಕರ ಸ್ನೇಹ ಪ್ರೀತಿ ಸಹ ಅವರಿಗೆ ಗೊತ್ತೇ ಆಗುವದಿಲ್ಲ. ಇಂದಿನ ಪೀಳಿಗೆ ತಮ್ಮ ತಂದೆ ತಾಯಿ ಹೆಚ್ಚೆಂದರೆ ಅಜ್ಜ ಅಜ್ಜಿ ಯಾರ ಪರಿಚಯದ ಹೊರೆತು ಮತ್ತೊಬ್ಬರ ಸಂಪರ್ಕವೇ ಅವರಿಗೆ ಇರುವದಿಲ್ಲ.

ಇಂದಿನ ಎಷ್ಟೋ ಕುಟುಂಬದ ಆಸ್ತಿಯಲ್ಲ ಆ ಕುಟುಂಬದಲ್ಲಿದ್ದ ಮುಖ್ಯಸ್ಥನ ಹೆಸರಿನಲ್ಲಿರುತ್ತದೆ. ಹೀಗಾಗಿ ಅಲ್ಲಿದ್ದ ಇತರ ಸದಸ್ಯರ ಹೆಸರಿಗೆ ಯಾವುದೇ ಪ್ರಕಾರದ ಆಸ್ತಿ ಅಥವಾ ಸಂಪತ್ತು ಇರುವದಿಲ್ಲ. ಮುಖ್ಯನ ಹೆಸರಿನಲ್ಲಿ ಎಲ್ಲವೂ ನೋಂದಣಿ ಇರುತ್ತದೆ. ಒಂದು ವೇಳೆ ಆ ಕುಟುಂಬದ ಮುಖ್ಯಸ್ಥ ಆಕಸ್ಮಿಕವಾಗಿ ಸಾವನೊಪ್ಪಿದ್ದರೆ ಆತನ ಹೆಸರಲ್ಲಿದ್ದ ಆಸ್ತಿಯನ್ನು ಪಾಲು ಮಾಡಿಕೊಳ್ಳಲು ಬರುವುದೇ? ಅದನ್ನು ಹೇಗೆ ಮಾಡುವುದು? ಅದರ ಕಾರ್ಯಾಚರಣೆ ಮಾಡುವುದು ಹೇಗೆ? ಈ ಎಲ್ಲ ಪ್ರಶ್ನೆಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದೇವೆ.

ಒಂದು ಕುಟುಂಬದಲ್ಲಿ ತುಂಬಾನೇ ಆಸ್ತಿ ಇದ್ದು ಅದು ಕೇವಲ ಒಬ್ಬ ವ್ಯಕ್ತಿಯ ಹೆಸರಿಲ್ಲಿದ್ದು, ಆ ವ್ಯಕ್ತಿ ಆಕಸ್ಮಿಕವಾಗಿ ಮರಣ ಹೊಂದಿದರೆ ಪಾಲು ಮಾಡಿ ಕೊಳ್ಳದಿರಲು ಮುಖ್ಯ ಕಾರಣಗಳು ಏನಿರುತ್ತವೆ ಎಂಬುದು ಮೊದಲು ತಿಳಿದುಕೊಳ್ಳೋಣ.

ಆಸ್ತಿ ಪಾಲು ಮಾಡಿಕೊಳ್ಳದಿರಲು ಮುಖ್ಯ ಕಾರಣಗಳು ಅಥವಾ ಪಾಲು ಮಾಡಿಕೊಳ್ಳಲು ಅಡ್ಡಿಯುಂಟುಮಾಡುವ ಸಂಗತಿಗಳು.

  1. ಕುಟುಂಬದಲ್ಲಿಯ ಒಡಕು: ಮುಖ್ಯವಾಗಿ ಈ ಕಾರಣದಿಂದ ಜಮೀನಿನ ಮಾಲೀಕ ಸತ್ತ ಮೇಲೆ ಆತನ ಖಾತೆ ಬದಲಾವಣೆ ಮಾಡಿಕೊಳ್ಳುವದಿಲ್ಲ. ಏಕೆಂದರೆ ಕುಟುಂಬದಲ್ಲಿಯ ಅಣ್ಣ ತಮ್ಮರ ಕಲಹ, ಅಥವಾ ಕುಟುಂಬದ್ಲಲಿಯ ಇನ್ನಿತರ ವ್ಯಕ್ತಿಗಳ ಕೈವಾಡ ಹೀಗಾಗಿ ಇದೊಂದು ಮುಖ್ಯ ಕಾರಣವಾಗುತ್ತದೆ.
  2. ಒಂದಕ್ಕಿಂತ ಹೆಚ್ಚು ಹೆಂಡತಿಯರು: ಒಂದು ವೇಳೆ ಕುಟುಂಬದ ಒಡೆಯ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದರೆ ಅಲ್ಲಿ ಆಸ್ತಿ ಪಾಲು ಮಾಡಿಕೊಳ್ಳಲು ದೊಡ್ಡ ಸಮಸ್ಯೆ ನಿರ್ಮಾಣವಾಗುವದು. ಏಕೆಂದರೆ ಆತನ ಹೆಂಡತಿಯರು ಆಸ್ತಿ ನನಗೆ ಜಾಸ್ತಿ ಬೇಕು, ನಾನು ದೊಡ್ಡವಳು, ನಾನು ಚಿಕ್ಕವಳು ಅನ್ನೋ ಕಲಹ ಉಂಟಾಗುವ ಸಂಭವ ವಿರುತ್ತದೆ.
  3. ಭೂ ವಿವಾದ: ಆ ಜಮೀನಿನ ಮೇಲೇ ಯಾವುದೇ ರೀತಿಯ ವಿವಾದ ಇದ್ದರೆ ಆ ಆಸ್ತಿಯನ್ನು ಪಾಲು ಮಾಡಿಕೊಳ್ಳಲು ಅಥವಾ ಹೆಸರಿಗೆ ಮಾಡಿಕೊಳ್ಳಲು ದೊಡ್ಡ ಸಮಸ್ಯೆಯಾಗಬಹುದು.
  4. ತಿಳಿವಳಿಕೆಯ ಕೊರತೆ: ಬಹಳಷ್ಟು ಜನರು ತಮ್ಮ ಒಡೆಯನ ಸಾವಿನ ನಂತರ ಮುಂದೆ ಏನು ಮಾಡಬೇಕು ಹಾಗೂ ಆಸ್ತಿಯನ್ನು ಯಾವ ರೀತಿಯಾಗಿ ತಮ್ಮ ಹೆಸರಿನಲ್ಲಿ ಮಾಡಿಕೊಳ್ಳಬೇಕು ಎಂಬ ತಿಳಿವಳಿಕೆ ಇರದ ಕಾರಣ ಕೆಲವರು ಆಸ್ತಿ ಪಾಲು ಮಾಡಿಕೊಳ್ಳುವದಿಲ್ಲ.

ಈ ಮೇಲಿನ ಎಲ್ಲ ಕಾರಣಗಳು ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ. ಇಂದಿಗೂ ಸಹ ಅದೆಷ್ಟೋ ಜನರು ತಮ್ಮ ಮುಖ್ಯಸ್ಥ ತೀರಿಕೊಂಡರು ಸಹ ಆತನ ಹೆಸರಿನಲ್ಲಿದ್ದ ಆಸ್ತಿ ಹಾಗೆ ಇರುತ್ತದೆ ಹೊರತಾಗಿ ಇವರು ಪಾಲು ಮಾಡಿಕೊಂಡಿರುವದಿಲ್ಲ. ಆದರೆ ಸರ್ಕಾರದ ನಿಯಮ ಏನು ಹೇಳುತ್ತದೆ ಅಂದರೆ, ಮಾಲೀಕನ ಮರಣದ ನಂತರ ಆ ಕುಟುಂಬದ ವಾರಸುದಾರರು 6 ತಿಂಗಳಿನ ಒಳಗಡೆ ಕಡ್ಡಾಯವಾಗಿ ಖಾತೆ ಬಾದಲಾವಣೆ ಮಾಡಿಕೊಳ್ಳಬೇಕು, ಒಂದು ವೇಳೆ ಜಮೀನಿನ ವಿವಾದ ಇದ್ದರು ಸಹ ಪೌತಿ ಖಾತೆಯ ಮೂಲಕ ಪಾಲು ಮಾಡಿಕೊಳ್ಳಬೇಕು. ಪೌತಿ ಖಾತೆಯ ಮೂಲಕ ಹಕ್ಕು ಬದಲಾವಣೆ ಮಾಡುವದು ಮೊದಲನೆಯ ಸ್ಟೆಪ್ ಆಗಿರುತ್ತೆ. ಪೌತಿ ಖಾತೆಯ ಮೂಲಕ ಹೇಗೆ ಪಾಲು ಮಾಡಿಕೊಳ್ಳಬಹುದು ಎಂಬುದು ತಿಳಿದು ಕೊಳ್ಳೋಣ ಬನ್ನಿ.

ಪೌತಿ ಖಾತೆ ಎಂದರೇನು? ಪೌತಿ ಖಾತೆ ಎಂದರೆ, ರೈತರು ಮರಣ ಹೊಂದಿದ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನುತ್ತಾರೆ. ಉದಾಹರಣೆಗೆ – ಒಂದು ಮನೆಯಲ್ಲಿ ತಂದೆ ಗಂಡ ಅಥವಾ ಅಜ್ಜ, ಅಜ್ಜಿ ಮರಣ ಹೊಂದಿದರೆ ಅವರ ಹೆಸರಿನ ಮೇಲೆ ಜಮೀನನ್ನು ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ್ನು ವರ್ಗಾವಣೆ ಮಾಡುವುದು.

ಜಮೀನಿನ ಮಾಲೀಕನ ಮರಣದ ನಂತರ ಆಸ್ತಿಯನ್ನು ಪಾಲು ಮಾಡಿಕೊಳ್ಳುವದು ಹೇಗೆ?

ಮೊದಲನೆಯ ಸ್ಟೆಪ್: ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ಕುಟುಂಬದ ಎಲ್ಲ ವಾರಸುದಾರರು ತಮ್ಮ ಹೆಸರಲ್ಲಿ ಜಂಟಿ ಖಾತೆ ತಗೆಯಬಹುದು. ಜಂಟಿ ಖಾತೆ ಹೆಸರಿಗೆ ಆದ ಮಾತ್ರಕ್ಕೆ ಆಸ್ತಿ ನಿಮ್ಮ ಹೆಸರಿಗೆ ಆಯಿತು ಅಂತಲ್ಲ. ಕೇವಲ ಸರ್ಕಾರಿ ತೇರಿಗೆ ಕಟ್ಟಲು, ಹಾಗೂ ಸರಕಾರಿ ಸೌಲಭ್ಯ ಪಡೆಯಲು ನೀವು ಆರ್ಹ ರಾಗಿರುವಿರಿ ಎಂದರ್ಥ.

ಎರಡನೆಯ ಸ್ಟೆಪ್ 11E Sketch ಗೆ ಅರ್ಜಿ ಸಲ್ಲಿಸಬೇಕು:
ಕುಟುಂಬದಲ್ಲಿಯ ಎಲ್ಲ ಪಾಲುದಾರರ ಆಧಾರ್ ಕಾರ್ಡ್ ಹಾಗೂ ಪಹಣಿಯೊಂದಿಗೆ ನಾಡಕಚೇರಿಯಲ್ಲಿ ಈ ಅರ್ಜಿ ಸಲ್ಲಿಸಬೇಕಾಗುವದು. ಮುಖ್ಯವಾಗಿ 11E Sketch ಗೆ ಅರ್ಜಿ ಸಲ್ಲಿಸುವಾಗ 11B ಫಾರ್ಮ್ ನಲ್ಲಿ ಯಾರು ಯಾರಿಗೆ ಎಷ್ಟೆಷ್ಟು ಜಮೀನು ಬರಬೇಕು, ಯಾವ ದಿಕ್ಕೆಗೆ ಬರಬೇಕು, ಅದರ ವಿಸ್ತೀರ್ಣ ಎಷ್ಟಿರಬೇಕು ಎಂಬುದು ತಪ್ಪಾಗದಂತೆ ತುಂಬಾ ಎಚ್ಚರಿಕೆಯಿಂದ 11B ಫಾರ್ಮ್ ತುಂಬಬೇಕು.

ಅರ್ಜಿ ಸಲ್ಲಿಸಿದ ಕೆಲವು ದಿವಸಗಳ ನಂತರ ಭೂಮಾಪಕರು ಬಂದು ನೀವು 11B ಅರ್ಜಿಯಲ್ಲಿ ನಮೂದಿಸಿರುವ ಹಾಗೆ ಯಾರು ಯಾರಿಗೆ ಎಷ್ಟು ಜಮೀನು ಸಿಗಬೇಕು ಹಾಗೂ ಯಾವ ದಿಕ್ಕಿಗೆ ಸಿಗಬೇಕು ಎಂಬುದರ ಮಾಪನ ಮಾಡಿ ಅದರ ನಕ್ಷೆಯನ್ನು ತಯಾರು ಮಾಡುತ್ತಾರೆ ಅಂದರೆ 11E sketch ತಯಾರು ಮಾಡಿ ಅದರ ನೋಂದಣಿ ಮಾಡುತ್ತಾರೆ.

ಮೂರನೆಯ ಸ್ಟೆಪ್ ವಿಭಾಗ ಪತ್ರ: 11E sketch , ಪಾಲುದಾರರ ಆಧಾರ್ ಕಾರ್ಡ್ ಮತ್ತು ವಂಶಾವಳಿ ಪ್ರಮಾಣಪತ್ರವನ್ನು ತಗೆದುಕೊಂಡು ನಿಮ್ಮ ಸಮೀಪದ ಉಪನೋಂದಣಿ ಕಚೇರಿಯಲ್ಲಿ ವಿಭಾಗ ಪತ್ರದ ಮೂಲಕ ನೊಂದಣಿ ಅಂದರೆ ರಿಜಿಸ್ಟರ್ ಮಾಡಬೇಕು. ಇಲ್ಲಿಗೆ ನಿಮ್ಮ ರಿಜಿಸ್ಟರ್ ಪ್ರಕ್ರಿಯೆ ಮುಗಿಯುತ್ತೆ. ರಿಜಿಸ್ಟರ್ ಮುಗಿದ ನಂತರ ವಿಲೇಜ್ ಅಕೌಂಟೆಂಟ್ ಅವರು ಮೂವತ್ತು ದಿನಗಳ ಒಳಗಾಗಿ mutation ಪ್ರಕ್ರಿಯೆ ಮಾಡುತ್ತಾರೆ. Mutation ಸಮಯದಲ್ಲಿ J form ಮೇಲೆ ಸಹಿ ಯಾದ ಕೆಲ ದಿವಸಗಳ ನಂತರ ನಿಮ್ಮ ಹೆಸರಿಗೆ ಭಾಗ ಆಗಿರುವ ಜಮೀನಿನ ಪಹಣಿ ಬರುತ್ತದೆ.

ಈ ರೀತಿಯಾಗಿ ಜಮೀನಿನ ಮಾಲೀಕ ಮರಣದ ನಂತರ ಸಹ ಆಸ್ತಿಯನ್ನು ಪಾಲು ಮಾಡಿಕೊಳ್ಳಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯೋಗಕರ ವೆನಿಸಿದರೆ ಇದನ್ನು ಅವಶ್ಯಕತೆ ಇದ್ದವರಿಗೆ ಶೇರ್ ಮಾಡಿ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋ ನೋಡಿ.