ಖುಷಿಯಲ್ಲಿ ಮಸ್ತಿಯಿಂದ ಓಲಾಡಿ ಓಲಾಡಿ ಕುಣಿಯುವ ಮರವನ್ನು ನೋಡಿದ್ದೀರಾ? ನಿಸರ್ಗದ ಅದ್ಭುತ ದೃಶ್ಯ ನೋಡಿ! ವೈರಲ್ ಆಯ್ತು Video.

ನಿಸರ್ಗವು ನಿಗೂಢವಾದ ರಹಸ್ಯದಿಂದ ತುಂಬಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಕುತೂಹಲ ಮೈದುಂಬಿ ಕುಳಿತಿದೆ. ಈ ನಿಸರ್ಗದ ಬಗ್ಗೆ ಜೀವನವಿರುವವರೆಗೂ ಅಭ್ಯಾಸ ಮಾಡಿದರೂ ಸಮುದ್ರದಲ್ಲಿಯ ಒಂದು ಹನಿ ಎಷ್ಟು ತಿಳಿದುಕೊಳ್ಳಬಹುದು ಎಂದೆನಿಸುತ್ತದೆ. ಯಾಕೆಂದರೆ ಅಷ್ಟೊಂದು ಅಚ್ಚರಿಯಿಂದ ತುಂಬಿದ ಈ ಜಗತ್ತು ಮನುಷ್ಯನಿಗೆ ಹೆಜ್ಜೆ ಹೆಜ್ಜೆಗೆ ಆಶ್ಚರ್ಯವನ್ನು ನೀಡುತ್ತದೆ.

ನೀವೆಂದಾದರೂ ಮರ ಡಾನ್ಸ್ ಮಾಡುವದನ್ನು ನೋಡಿದ್ದೀರಾ? ಎಂದು ಕೇಳಿದರೆ ಕೇಳಿದವನಿಗೆ ಹುಚ್ಚನೆ ಇರಬಹುದೆಂದು ಅನ್ನಬಹುದು ಅಲ್ವಾ? ಮರವೆಂದಾದರೂ ಡಾನ್ಸ್ ಮಾಡುತ್ತದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ನಾನು ಹೇಳುತ್ತೇನೆ ಮರವು ಡಾನ್ಸ್ ಮಾಡುತ್ತದೆ.

ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ @TheFigen_ ಹೆಸರಿನ ಐಡಿಯಿಂದ ಒಂದು ವಿಡಿಯೋ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಯೂಸರ್ ಗಳಿಗೆ ಅದ್ಭುತವಾದ ಅಚ್ಚರಿಯನ್ನು ಮೂಡಿಸಿದೆ. ಈ ವಿಡಿಯೋದಲ್ಲಿಯ ಮರವು ನೋಡುಗರಿಗೆ ತುಂಬಾ ಕುತೂಹಲ ನಿರ್ಮಾಣ ಮಾಡಿದೆ. ಹೀಗಾಗಿ ಈ ವಿಡಿಯೋ ಇಲ್ಲಿಯವರೆಗೆ ಅಂದರೆ ಶೇರ್ ಮಾಡಿದ ಕೇವಲ 6 ದಿನಗಳಲ್ಲಿ 3.4 ಮಿಲಿಯನ್ ಜನರು ನೋಡಿದ್ದಾರೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯ ನೋಡಿದರೆ ಮರವು ತುಂಬಾ ವಿಶೇಷವಾಗಿ ನೃತ್ಯ ಮಾಡುತ್ತಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ. ಯಾವ ರೀತಿ ವ್ಯಕ್ತಿಯು ತುಂಬಾ ಖುಷಿಯಾದಾಗ ಮುಕ್ತವಾಗಿ ದೇಹವನ್ನು ಬಿಂಕದಿಂದ ಹಾವಭಾವ ಮಾಡುತ್ತಾ ನೃತ್ಯ ಮಾಡುತ್ತಾನೆ ಅದೇ ರೀತಿ ಮರವು ಸಹ ತನ್ನ ಆನಂದ, ಸಂತೋಷವನ್ನು ವ್ಯಕ್ತ ಮಾಡುತ್ತಿದೆ ಎಂಬಂತೆ ಕಂಡುಬರುತ್ತಿದೆ.

ಮರ ನೃತ್ಯ ಮಾಡುವ ಈ ಸೂಪರ್ ವಿಡಿಯೋ ನೋಡಿ.

ಮರ ಡಾನ್ಸ್ ಮಾಡುವ ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ಒಬ್ಬ “ಇದು ಭಯಪಡುವಂತಹ ಸೀನ್ ಆಗಿದೆ” ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ದೃಶ್ಯ ನೋಡಿ, “ಬಹುಶಃ ಈ ಮರಕ್ಕೆ ಹಸಿವಾಗಿರಬಹುದು” ಎಂದು ಪ್ರತಿಕ್ರಿಯಿಸಿದ್ದಾನೆ.