“ಬಾಯಕಾಟ್ ಚೈನಾ”ದ ನಡುವೆ ಅನಿಲ್ ಅಂಬಾನಿಗೇಕೆ ಧನ್ಯವಾದ ಹೇಳುತ್ತಿದ್ದಾರೆ ಜನ..? ಏನಿದು ಅನಿಲ್ ಅಂಬಾನಿ ಚೈನಾ ಕನೆಕ್ಷನ್..?
ಗಲವಾನ್ ಕಾಣಿವೆಯಲ್ಲಿಯ ಘಟನೆಯ ನಂತರ ಭಾರತ ಮತ್ತು ಚೀನಾದ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದರಿಂದ ದೇಶದ ತುಂಬೆಲ್ಲಾ ಚೀನಾದ ವಿರುದ್ಧ ಆಕ್ರೋಶ ಮತ್ತು ಅದಕ್ಕೆ ಪಾಠ ಕಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇದೇ ಗಳಿಗೆಯಲ್ಲಿ ಅನಿಲ್ ಅಂಬಾನಿಯವರು ಮಾಡಿದ ಒಂದು ಟ್ವೀಟ್ ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ನೋಡಿದ ನಂತರ ನಿಮ್ಮ ಮನಸಿನಲ್ಲಿ ಪ್ರಶ್ನೆ ಏಳದೆ ಇರಲಾರದು. ಈ ಘಟನೆಗೆ ಮತ್ತು ಅನಿಲ್ ಅವರಿಗೂ ಏನು ಕನೇಕ್ಷನ್ ಇದೆ. ಹಾಗಾದರೆ ಬನ್ನಿ ಅನಿಲ್ ಅವರು ಟ್ರೆಂಡ್ ಆಗುತ್ತಿರುವ ಕಾರಣವೇನು?
ಒಂದು ಕಾಲದಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗಣನೆಯಾಗುವ ಅನಿಲ್ ಅಂಬಾನಿಯವರು ಈ ವರ್ಷ ಲಂಡನ್ ಕೋರ್ಟಿನಲ್ಲಿ ವಿಚಾರಣೆ ನಡೆದಾಗ ನಾನು ಮೊದಲು ತುಂಬಾ ಶ್ರೀಮಂತಾನಾಗಿದ್ದೆ, ಆದರೀಗ ನನ್ನ ಹತ್ತಿರ ಹಣವಿಲ್ಲ. ಇದೇ ಕಾರಣದಿಂದ ಚೀನಾ ಬ್ಯಾಂಕಗಳ 68 ಕೋಟಿ ಡಾಲರ್ (ಸುಮಾರು 5000 ಕೋಟಿ ₹)
ಮರಳಿ ಪಾವತಿಸುವದು ನನಗೆ ಸಾಧ್ಯವಿಲ್ಲವೆಂದು ಹೇಳಿದ್ದರು. ಹಾಗಾಗಿ ಚೀನಾದ 3 ಬ್ಯಾಂಕುಗಳು ಅನಿಲ್ ಅವರ ವಿರುದ್ಧ 680 ಮಿಲಿಯನ್ ಡಾಲರ್ ಸಾಲ ಮರು ಪಾವತಿಸದ ಕಾರಣಕ್ಕಾಗಿ ಲಂಡನ್ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಟ್ವೀಟರ್ ಯೂಜರ್ಸ್ ಗಳು ಇದೇ ವಿಷಯಕ್ಕೆ ಸಂಬಂಧಿಸಿ ತಮಾಷೆ ಮಾಡುತ್ತಿದ್ದಾರೆ.
ಅನಿಲ್ ಅಂಬಾನಿ ಇದ್ದಾರೆ ನಿಜವಾದ ಇಂಡಿಯನ್.

ಒಬ್ಬ ಟ್ವಿಟ್ಟರ್ ಯೂಜರ್ ಸಂಪೂರ್ಣ ದೇಶದಲ್ಲಿ #BoycottChina ಅಭಿಯಾನ ನಡೆಸಲಾಗುತ್ತಿದೆ. ಚಾಯನೀಜ್ ವಸ್ತುಗಳನ್ನು ಖರೀದಿಸಬೇಡಿ ಎಂದು ಅಪೀಲ್ ಮಾಡಲಾಗುತ್ತಿದೆ. ಹೀಗಾಗಿ ಚೀನಾವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಲು ಸಹಾಯವಾಗುತ್ತಿದೆ. ಇಷ್ಟೆಲ್ಲ ಮಾಡುತ್ತಿರುವಾಗ ನಮ್ಮ ಅನಿಲ್ ಅಂಬಾನಿಯವರು ಚೀನಾದ ಬ್ಯಾಂಕುಗಳಿಗೆ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 500 ಕೋಟಿ ₹) ಕೊಡಲು ನಿರಾಕರಿಸಿದ್ದಾರೆ. ನಿಜವಾದ ಇಂಡಿಯನ್ ಅಂದ್ರೆ ನೀವಿದ್ದೀರಿ ಸರ್, ನಮಗೆ ನಿಮ್ಮ ಮೇಲೆ ಗರ್ವ ಇದೆ.
ಡಿಫಾಲ್ಟರ್ ಆಗಬೇಕೆನಿಸಿದರೆ ಅನಿಲ್ ಅಂಬಾನಿ ತರ ಆಗಿ..

ಒಬ್ಬ ಯೂಜರ್ ಅಂತೂ ಒಂದು ವೇಳೆ ಡಿಫಾಲ್ಟರ್ ಅಗಬೇಕೆನಿಸಿದರೆ ಅನಿಲ್ ಅಂಬಾನಿ ತರ ಆಗಿ, ವಿಜಯ್ ಮಲ್ಯ ತರ ಆಗಬೇಡಿ. ಇದರ ಜೊತೆಗೆ ಆತ ಆ ಸುದ್ದಿಯನ್ನು ಸಹಿತ ಶೇರ್ ಮಾಡಿದ್ದಾನೆ. ಅದರಲ್ಲಿ ಅನಿಲ್ ಹೇಳುತ್ತಾರೆ ನಾನಂತೂ ಈಗ ದರಿದ್ರನಾಗಿದ್ದೇನೆ.
P M ಗಿಂತಲೂ ಒಳ್ಳೆಯವರು ಅನಿಲ್ ಅಂಬಾನಿ..

ಒಬ್ಬ ಟ್ವಿಟ್ಟರ್ ಯೂಜರ್, ಅನಿಲ್ ಅಂಬಾನಿಯಂತೂ ಈ ವಿಷಯದಲ್ಲಿ ಪ್ರಧಾನಿಯವರಿಗಿಂತಲೂ ಒಳ್ಳೆಯರಿದ್ದಾರೆ. ಚೀನಾದಿಂದ 700 ಮಿಲಿಯನ್ ಡಾಲರ್ ಆದ್ರೂ ವಸೂಲಿ ಮಾಡಿದ್ದಾರೆ.