Video; ಮಹಾಶಿವರಾತ್ರಿಯಂದು ಶಿವಲಿಂಗವನ್ನು ಹಾಲು ಹಣ್ಣುಗಳಿಂದ ಮಜ್ಜನ ಮಾಡಿದ ನಂತರ ಪುಟ್ಟ ಮಾಡಿದ್ದೇನು ನೋಡಿ;

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸಾವಿರಾರು ವಿಡಿಯೋಗಳಲ್ಲಿ ಪುಟ್ಟ ಮಕ್ಕಳ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಮಕ್ಕಳ ಮುಗ್ಧ ಕೃತಿಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಈ ಮಕ್ಕಳು ಏನೇ ಮಾಡಿದರೂ ನೋಡುಗರಿಗೆ ಬೇಸರ ಬರುವುದಿಲ್ಲ ಮತ್ತು ಸಿಟ್ಟು ಬರುವುದಿಲ್ಲ. ಮಕ್ಕಳ ನೃತ್ಯ, ನಟನೆ, ಯಾರ ಮುಲಾಜಿಲ್ಲದೆ ಧೈರ್ಯವಾಗಿ ಮಾತನಾಡುವ ಸ್ಟೈಲ್, ಆಟ ಹೀಗೆ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ದೃಶ್ಯ ತುಂಬಾ ಇಂಟರೆಸ್ಟಿಂಗ್ ಆಗಿರುತ್ತವೆ.

ಮಕ್ಕಳ ಬಿಂದಾಸ್ ವರ್ತನೆ ಯಾರಿಗೆ ಆಗಲಿ ತುಂಬಾ ಹಿಡಿಸುತ್ತದೆ. ಸದ್ಯ ಇಲ್ಲಿ ನೋಡಲಿರುವ ಒಂದು ವಿಡಿಯೋ ನಿಮಗೆ ನಿಜವಾಗಿಯೂ ಖುಷಿ ನೀಡುತ್ತದೆ. ಇಲ್ಲಿ ಪುಟ್ಟ ಹುಡುಗನೊಬ್ಬ ಪರಶಿವನ ಧ್ಯಾನ ಮಾಡುತ್ತಿದ್ದಾನೆ. ಆತನಿಗೆ ಒಲಿಸಿಕೊಳ್ಳಲು ತನ್ನ ತಾಯಿಯೊಂದಿಗೆ ದೇಗುಲಕ್ಕೆ ಬಂದಿದ್ದಾನೆ. ಇದೇ ಸಂದರ್ಭದಲ್ಲಿ ಕಂಡುಬಂದ ದೃಶ್ಯವನ್ನು ನಿಮಗಾಗಿ ಈ ಲೇಖನದಲ್ಲಿ ತಂದಿದ್ದೇವೆ.

ತನ್ನ ತಾಯಿಯ ಜೊತೆಗೆ ಪುಟ್ಟ ಬಾಲಕ ಶಿವಲಿಂಗದ ಮಹಾಮಜ್ಜನ ಮಾಡುತ್ತಾನೆ. ತದನಂತರ ಅಲ್ಲಿರುವ ಮಜ್ಜನದಲ್ಲಿ ಉಪಯೋಗಿಸಿದ ಒಣಫಲಗಳನ್ನು ತಡ ಮಾಡದೆ ತಿನ್ನಲು ಶುರು ಮಾಡುತ್ತಾನೆ. ಈ ದೃಶ್ಯವನ್ನು ತಾಯಿಯು ಸಹ ತುಂಬಾ ಆಸಕ್ತಿಯಿಂದ ನೋಡುತ್ತಿದ್ದಾಳೆ. ತನಗೆ ಬೇಕಾಗುವಷ್ಟು ಹಣ್ಣುಗಳನ್ನು ತಿಂದ ನಂತರ ಆಮೇಲೆ ಪರಮಾತ್ಮನಿಗೆ ಕೈಮುಗಿಯುತ್ತಾನೆ. ಈ ಬಾಲಕನ ಮುಗ್ಧ ಭಕ್ತಿ ನೋಡುಗರ ಮನಸ್ಸು ಸೆಳೆಯುತ್ತಿದೆ.

ನೋಡಿ ಈ ಬಾಲಕನ ಭಕ್ತಿಯ ಸ್ಪೆಷಲ್ ವಿಡಿಯೋ…

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ “ಕಮೀನಾ ಬಾಲಕ” ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 11.3 ಮಿಲಿಯನ್ ವೀಕ್ಷಣೆ ಪಡೆದಿದ್ದು 1.1 ಮಿಲಿಯನ್ ಗೂ ಮೀರಿ ಲೈಕ್ಸ್ ಗಳನ್ನು ಪಡೆದಿದೆ.