ಗಡಿದಾಟಿ ಒಳನುಗ್ಗಿ ಬರುವ ಚೀನಿ ಸೈನಿಕರ ಬೆಂಡೆತ್ತಿದ ಭಾರತೀಯ ಸೈನಿಕರು! Video ವೈರಲ್!
ನವದೆಹಲಿ:- ಭಾರತ ಹಾಗೂ ಚೀನಾದ ನಡುವಿನ ನಿಯಂತ್ರಣ ರೇಖೆಯಲ್ಲಿಯ ಸಂಘರ್ಷ ಮತ್ತು ಪೂರ್ವ ಲಡಾಕ್‌ನಲ್ಲಿ ನಡೆದ ಹಿಂ’ಸಾ’ಚಾರದ ನಂತರ ಒಂದು ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಎರಡು ದೇಶದ ಸೈನಿಕರು ಹೊಡೆದಾಡುವದನ್ನು ಕಾಣಬಹುದು. ಗಡಿ ದಾಟಲು ಪ್ರಯತ್ನಿಸುತ್ತಿರುವ ಪಿಎಲ್‌ಎ ಜವಾನ್’ನನ್ನು ಭಾರತದ ಜವಾನರು ಭಾರಿ ಪ್ರಮಾಣದಲ್ಲಿ ಹೊಡೆದು ಪಾಠ ಕಲಿಸಿದರು ಮತ್ತು ಅವರನ್ನು ಮರಳಿ ಕಳುಹಿಸಿದರು.
ಮಿಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಯಾವ ತಾರೀಖಿನದಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಈ ವಿಡಿಯೋ ಕೆಲವು ದಿವಸಗಳ ಹಿಂದೆ ಮಾತ್ರವೇ ಶೂಟ್ ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಏಕೆಂದರೆ ಈ ವಿಡಿಯೋ ದಲ್ಲಿ ಪ್ರತಿಯೊಬ್ಬ ಸೈನಿಕರು ಮಾಸ್ಕ ಉಪಯೋಗಿಸಿದ್ದಾರೆ. ಈ ವಿಡಿಯೋ ಸಿಕ್ಕಿಮ್ ನಲ್ಲಿಯ ನಾಕುಲ್ ದಲ್ಲಿಯ ವಿಡಿಯೋ ಇದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಈ 5 ನಿಮಿಷದ ವಿಡಿಯೋವನ್ನು ಶೂಟ್ ಮಾಡಿದ ಸಮಯ ಹಾಗೂ ಸ್ಥಳದ ಯಾವುದೇ ಮಾಹಿತಿ ಮಿಲಿಟರಿ ಕಡೆಯಿಂದ ಇದುವರೆಗೂ ದೃಢಪಡಿಸಿಲ್ಲ.
ಈ ವಿಡಿಯೋ ಮೇ 9 ರಂದು ನಡೆದ ಚಕಮಕಿಯ ವಿಡಿಯೋ ಸಹ ಅಲ್ಲ. ಆ ಸಮಯದಲ್ಲಿ ಭಾರತ ಮತ್ತು ಚೀನಾದಲ್ಲಿಯ 150 ಸೈನಿಕರು ತಮ್ಮೊಳಗೆ ಹೋರಾಟ ಮಾಡಿದ್ದರು. ಅಲ್ಲದೆ ಈ ಸಂಘರ್ಷ ದಲ್ಲಿ 1K ಸೈನಿಕರು ಕೂಡಾ ಗಾಯಗೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಸುಮಾರು 25 ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರು ಸಹ ಕಾಣುತ್ತಿದ್ದಾರೆ. ಪರಸ್ಪರರಲ್ಲಿ ಹೊಡೆದಾಡುವದನ್ನು ಕಾಣಬಹುದು. ಕೆಲವು ಚೀನಾ ಸೈನಿಕರು ಕೈ ಎತ್ತುವ ಪ್ರಯತ್ನ ಮಾಡಿದಾಗ ಅಲ್ಲಿದ್ದ ಭಾರತೀಯ ಸೈನಿಕರು ಅವರಿಗೆ ಉತ್ತಮ ಪಾಠ ಕಲಿಸಿದರು.
Indian Army Jawan seen asking the Chinese PLA soldier: ‘GolGuppe Khayega?’ 😅 pic.twitter.com/SqZaIi6hDY
— Poonam Bhardwaj 🖤🖤🖤 (@Poonambh28) June 22, 2020
ಭಾರತೀಯ ಮತ್ತು ಚೀನಾ ಸೈನಿಕರ ನಡುವಿನ ಚಕಮಕಿಯ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ತುಂಬಾ ವೈರಲ್ ಆಗಿವೆ. ಕಳೆದ ತಿಂಗಳಲ್ಲಿ ಹಿಂ’ಸಾ’ತ್ಮಕ ಜಗಳ ತೋರಿಸುವ ಒಂದು ವಿಡಿಯೋ ಕೂಡಾ ಬೆಳಕಿಗೆ ಬಂದಿತ್ತು. ಆದರೆ ಆ ವಿಡಿಯೋ ನಿಜವಾದದು ಅಲ್ಲ ಎಂದು ಸೈನಿಕರು ಹೇಳಿದ್ದರು.