ಆಸ್ತಿ ಇದ್ದರೆ ನೋಡಿ! ಜಂಟಿ ಖಾತೆ ಹಾಗೂ ಪೌತಿ ಖಾತೆ ಇವೆರಡರ ನಡುವಿನ ವ್ಯತ್ಯಾಸ ಏನು ಗೊತ್ತಾ? ಸಂಪೂರ್ಣ ಮಾಹಿತಿ

ಜಂಟಿ ಖಾತೆ ಹಾಗೂ ಪೌತಿ ಖಾತೆಗಳ ನಡುವಿನ ವ್ಯತ್ಯಾಸ ಅರ್ಥ ಆಗಬೇಕು ಎಂದರೆ ಅದಕ್ಕಿಂತ ಮುಂಚೆ ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿ ಅರಿವು ಇರಬೇಕು. ಅದೇನೆಂದರೆ ಕಂದಾಯ ನಿಯಮಗಳ ಪ್ರಕಾರ ಯಾವುದೇ ಒಂದು ಜಮೀನನ್ನು ಕುಟುಂಬಸ್ಥರು ಭಾಗ ಮಾಡಿಕೊಳ್ಳಲು ನಿರ್ಧರಿಸಿದ್ದಲ್ಲಿ, ಸದರಿ ಜಮೀನಿನ ಮಾಲೀಕ ಜೀವಂತ ಇರುವುದು ಕಡ್ಡಾಯವಾಗಿದೆ. ಆದರೆ ಆಸ್ತಿ ಹೊಂದಿರುವ ವ್ಯಕ್ತಿ ಮರಣ ಹೊಂದಿದ್ದರೆ ಆ ಆಸ್ತಿ ಭಾಗ ಮಾಡಿಕೊಳ್ಳುವುದಕ್ಕಿಂತ ಮುಂಚೆ ಕಡ್ಡಾಯವಾಗಿ ಪೌತಿ ಖಾತೆ ಮಾಡಿಕೊಳ್ಳಲೇಬೇಕು. ಅದರಂತೆ ಪೌತಿ ಖಾತೆಯನ್ನು ಕುಟುಂಬದ ಎಲ್ಲಾ ಸದಸ್ಯರು ಅಂದರೆ ವಂಶಾವಳಿ ಪತ್ರದಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೋ ಅವರೆಲ್ಲರ ಹೆಸರಿಗೂ ಕೂಡ ಜಂಟಿ ಖಾತೆ ಮಾಡಲಾಗುತ್ತದೆ.

ಇನ್ನೊಂದು ಮುಖ್ಯವಾದ ಅಂಶ ಏನು ಎಂದರೆ ಪೌತಿ ಖಾತೆಯನ್ನು ಮಾಡುವ ಸಂದರ್ಭವನ್ನು ಬಿಟ್ಟು ಇನ್ನು ಅನೇಕ ಸಂದರ್ಭಗಳಲ್ಲೂ ಜಂಟಿ ಖಾತೆ ಮಾಡಲಾಗುತ್ತದೆ. ಪೌತಿ ಖಾತೆ ಮತ್ತು ಜಂಟಿ ಖಾತೆಗಳ ನಡುವೆ ಇರುವ ಪ್ರಮುಖ ವ್ಯತ್ಯಾಸಗಳು ಏನು ಎಂದರೆ ಒಂದು ಆಸ್ತಿಯ ಮಾಲೀಕ ಅನಾರೋಗ್ಯ ಕಾರಣದಿಂದ ಅಥವಾ ವಯಸ್ಸಾದ ಕಾರಣದಿಂದ ಅಥವಾ ಇನ್ಯಾವುದೇ ಕಾರಣಗಳಿಂದ ಮರಣ ಹೊಂದಿದ್ದಲ್ಲಿ ಆ ಆಸ್ತಿಯನ್ನು ಅವನ ನೇರ ವಾರಸ್ದಾದರರಾದ ಆತನ ಮಡದಿ ಅಥವಾ ಮೃತ ವ್ಯಕ್ತಿಯ ಮಗ ಅಥವಾ ಮಗಳು ಇಷ್ಟರಲ್ಲಿ ಯಾರಿಗಾದರೂ ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನುತ್ತಾರೆ. ಈ ಪೌತಿ ಖಾತೆ ಎನ್ನುವುದನ್ನು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಾಗಿ ಕರೆಯುತ್ತಾರೆ. ಉತ್ತರ ಕರ್ನಾಟಕದ ಕಡೆಗಳಲ್ಲಿ ವಾರಸ ಮತ್ತು ವಿರಾಸತ್ ಎಂದು ಸಹ ಪೌತಿ ಖಾತೆಗೆ ಕರೆಯುತ್ತಾರೆ.

ಜಂಟಿ ಖಾತೆ ಎಂದರೆ ಒಂದು ಆಸ್ತಿಯ ಮಾಲೀಕತ್ವವನ್ನು ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಜನರ ನಡುವಲ್ಲಿ ಜಂಟಿಯಾಗಿ ಅಂದರೆ ಸಮಾನ ಹಕ್ಕು ಹೊಂದಿರುವಂತೆ ಖಾತೆ ಮಾಡಿಸುವುದನ್ನು ಜಂಟಿ ಖಾತೆ ಎನ್ನುತ್ತಾರೆ. ಉದಾಹರಣೆಯಾಗಿ ಹೇಳುವುದಾದರೆ ಶ್ರೀನಿವಾಸ್ ಎನ್ನುವ ಒಬ್ಬ ವ್ಯಕ್ತಿ ತನ್ನ ಇಬ್ಬರು ಗಂಡು ಮಕ್ಕಳು ಮುಂದೆ ಒಗ್ಗಟ್ಟಾಗಿ ಬಾಳಲಿ ಎನ್ನುವ ಉದ್ದೇಶದಿಂದ ತನ್ನ ಆಸ್ತಿಯನ್ನು ಇಬ್ಬರು ಗಂಡು ಮಕ್ಕಳ ನಡುವೆ ಜಂಟಿಯಾಗಿ ದಾನಪತ್ರ ಮಾಡಿಸಿಕೊಟ್ಟನು. ಇದರ ಅರ್ಥ ಇಷ್ಟೇ 3 ಎಕರೆ ಜಮೀನಿನಲ್ಲಿ ಇಬ್ಬರಿಗೂ ಸಮಾನವಾದ ಹೊಣೆಗಾರಿಕೆ ಮತ್ತು ಹಕ್ಕು ಇರುತ್ತದೆ ಎಂದು ಅರ್ಥೈಸಿಕೊಳ್ಳಬೇಕು. ಪೌತಿ ಖಾತೆ ಮತ್ತು ಜಂಟಿ ಖಾತೆ ನಡುವೆ ಇರುವ ಮತ್ತೊಂದು ಪ್ರಮುಖ ವ್ಯತ್ಯಾಸ ಏನು ಎಂದರೆ ಪೌತಿ ಖಾತೆಯನ್ನು ಜಮೀನಿನ ಮಾಲೀಕ ಮರಣ ಹೊಂದಿದ್ದ ಸಂದರ್ಭದಲ್ಲಿ ಮಾತ್ರ ಮಾಡುತ್ತಾರೆ.

ಆದರೆ ಜಂಟಿ ಖಾತೆಯನ್ನು ಬೌತಿ ಖಾತೆ ಮಾಡುವ ಸಂದರ್ಭದಲ್ಲಿ ಅಥವಾ ಆ ಸಂದರ್ಭ ಮುಗಿದ ಮೇಲೂ ಅಥವಾ ಇನ್ನಿತರ ಕೆಲವು ಸಂದರ್ಭಗಳಲ್ಲಿ ಕೂಡ ಮಾಡುತ್ತಾರೆ. ಮತ್ತೊಂದು ಮುಖ್ಯವಾದ ವ್ಯತ್ಯಾಸ ಏನು ಎಂದರೆ ಪೌತಿ ಖಾತೆಯನ್ನು ವಂಶಾವಳಿಯಲ್ಲಿ ಇರುವ ಎಲ್ಲರ ಹೆಸರಿಗೂ ಕೂಡ ಜಂಟಿಯಾಗಿ ಮಾಡಲಾಗುತ್ತದೆ ಮತ್ತು ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಕೂಡ ಒಪ್ಪಿಗೆ ಪತ್ರ ಕೊಟ್ಟ ನಂತರವಷ್ಟೇ ಅದನ್ನು ಒಬ್ಬರ ಹೆಸರಿಗೆ ಮಾಡಬಹುದು. ಇದನ್ನು ಉದಾಹರಣೆಯೊಂದಿಗೆ ತಿಳಿದುಕೊಳ್ಳಲು ಮತ್ತು ಈ ವಿಷಯದ ಕುರಿತಾಗಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.